32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ.ಯೋಜನೆ, ನಾಲ್ಕೂರು ಎ.ಬಿ ಒಕ್ಕೂಟದ ಪದಗ್ರಹಣ ಸಮಾರಂಭ: ನವಜೀವನ ಸಮಿತಿ ಸದಸ್ಯರಿಗೆ ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನ

ಬಳಂಜ: ಪ್ರಗತಿ ಬಂಧು‌ ಸ್ವಸಹಾಯ ಸಂಘಗಳ‌ ಒಕ್ಕೂಟ ನಾಲ್ಕೂರು ಎ.ಬಿ,ಜನಜಾಗೃತಿ ಗ್ರಾಮ ಸಮಿತಿ‌ ನಾಲ್ಕೂರು ಇದರ ವತಿಯಿಂದ ಒಕ್ಕೂಟದ ಪದಪ್ರದಾನ ಸಮಾರಂಭವು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಜ7 ರಂದು ನಡೆಯಿತು.

ಪದಪ್ರದಾನ ಸಮಾರಂಭದ ಉದ್ಘಾಟನೆಯನ್ನು ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್ ಕಾಪಿನಡ್ಕ ನೆರವೇರಿಸಿ ಶುಭ ಕೋರಿದರು.

ವೇದಿಕೆಯಲ್ಲಿ ಬಳಂಜ ಗ್ರಾಮ‌ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್, ಜನಜಾಗೃತಿ ತಾಲೂಕು ಸಮಿತಿ‌ ಸದಸ್ಯ ವಿಶ್ವನಾಥ ಹೊಳ್ಳ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಪ್ರಗತಿಪರ ಕೃಷಿಕ ಪ್ರಮೋದ್ ಕುಮಾರ್ ಜೈನ್ ಸಿದ್ದರಹಿತ್ಲು ,ಆಂತರಿಕ ಲೆಕ್ಕಪರಿಶೋಧಕರಾದ ಲಲಿತಾ, ನಾಲ್ಕೂರು ಎ ಒಕ್ಕೂಟದ ಅಧ್ಯಕ್ಷ ಪ್ರಮೋದ್ ಪೂಜಾರಿ, ನಾಲ್ಕೂರು ರಾಮನಗರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಸಂತ ಶೆಟ್ಟಿ, ಯೋಜನಾ ಕಚೇರಿಯ ಕೃಷಿ ಮೇಲ್ವಿಚಾರಕ ಕೃಷ್ಣ, ಎಬಿ ಒಕ್ಕೂಟದ ನೂತನ‌ ಅಧ್ಯಕ್ಷರಾದ ಹರೀಶ್ ಪೂಜಾರಿ, ಲಲಿತಾ, ಕಾರ್ಯದರ್ಶಿಗಳಾದ ಚಂದ್ರಾವತಿ, ಸವಿತಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನವಜೀವನ ಸಮಿತಿ ಸದಸ್ಯರಾದ ಬೇಬಿ ಪರವ ನಾಲ್ಕೂರು, ವಾಸು ಪೂಜಾರಿ ಬಾರ್ದೋಟ್ಟು, ಸಂಜೀವ ಪೂಜಾರಿ ಬಾರ್ದೋಟ್ಟು, ನೋಣಯ್ಯ ಶೆಟ್ಟಿ ಕುರೆಲ್ಯ, ನಾರಾಯಣ ಪೂಜಾರಿ ಸೂಳಬೆಟ್ಟು ಹಾಗೂ ಹಿರಿಯ ಸದಸ್ಯರಾದ ಚಂದ್ರಾವತಿ ರಾಮನಗರ, ಅಪ್ಪಿ ಖಂಡಿಗ ಇವರನ್ನು ಸನ್ಮಾನಿಸಲಾಯಿತು.

ಪುಷ್ಪಾ ಗೀರೀಶ್ ಪ್ರಾರ್ಥಿಸಿ, ಭಾರತಿ ಸ್ವಾಗತಿಸಿ, ಸವಿತಾ ಅಶೋಕ್ ವರದಿ‌ ಮಂಡಿಸಿದರು. ಅಶೋಕ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಸೇವಾ ಪ್ರತಿನಿಧಿ ಸರಸ್ವತಿ ವಂದಿಸಿದರು.

ತೆಂಗಿನ ಗರಿಯಿಂದ ವೇದಿಕೆಯನ್ನು ಅಲಂಕರಿಸಿದ್ದು ಎಲ್ಲರ ಗಮನ ಸೆಳೆಯಿತು ಹಾಗೂ ಯೋಜನೆಯ ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

Related posts

ಶ್ರೀ ಕ್ಷೇ.ಧ.ಗ್ರಾ.ಯೋ. ತಣ್ಣೀರುಪಂಥ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಲಾಭಾಂಶ ವಿತರಣೆ ಕಾರ್ಯಕ್ರಮ : ಗ್ರಾಮಾಭಿವೃದ್ಧಿ ಯೋಜನೆ ಪರಿಕಲ್ಪನೆ ಇಂದು ಜಗತ್ತಿಗೆ ಮಾದರಿಯಾಗಿದೆ: ಶಾಸಕ ಹರೀಶ್ ಪೂಂಜ

Suddi Udaya

ವೇಣೂರು ಜುಮಾ ಮಸೀದಿಯಲ್ಲಿ 75ನೇ ಗಣರಾಜೋತ್ಸವ ದಿನಾಚರಣೆ

Suddi Udaya

ರೂ. 1.50 ಕೋಟಿ ವೆಚ್ಚದಲ್ಲಿ ನಿಮಾ೯ಣವಾಗಲಿದೆ ಕನಸಿನ ಹೊಸ ʻಭವ್ಯ ಕುಲಾಲ ಸಮುದಾಯ ಭವನʼ:ಮಾ.19 ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya

ವೇಣೂರು ಸರಕಾರಿ ಜಾಗದಲ್ಲಿ ಚಿರತೆಯ ಮೃತದೇಹ ಪತ್ತೆ

Suddi Udaya

ಪದ್ಮುಂಜ ಪ.ಪೂ. ಕಾಲೇಜಿಗೆ ಶೇ. 100 ಫಲಿತಾಂಶ

Suddi Udaya

ತುಳು ಲಿಪಿ ಆನ್-ಲೈನ್ ಪರೀಕ್ಷೆ: ಪಂಚಮಿ ಬಿ.ಆರ್ ಶತಃ ಪ್ರತಿಶತ ಸಾಧನೆ

Suddi Udaya
error: Content is protected !!