ಕನ್ನಡಿಕಟ್ಟೆ ಮಸೀದಿಯಲ್ಲಿ 2 ಜೋಡಿಗಳ ಸರಳ ವಿವಾಹ

Suddi Udaya

ಪಡಂಗಡಿ: ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಗೌಸಿಯಾ ಯಂಗ್ ಮೆನ್ಸ್ ಅಸೋಷಿಯೇಶನ್ ಕನ್ನಡಿಕಟ್ಟೆ ವತಿಯಿಂದ 21ನೇ ಸ್ವಲಾತ್ ವಾರ್ಷಿಕದ ಭಾಗವಾಗಿ 4ನೇ ವರ್ಷದ 2 ಜೋಡಿಗಳ ಸರಳ ವಿವಾಹ ಕಾರ್ಯಕ್ರಮ ಕನ್ನಡಿಕಟ್ಟೆ ಮಸೀದಿ ಸಭಾಂಗಣದಲ್ಲಿ ಮಸೀದಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಇವರ ಅಧ್ಯಕ್ಷತೆಯಲ್ಲಿ ಜ.7 ರಂದು ಜರುಗಿತು.

ಬೆಳ್ತಂಗಡಿ ದಾರುಸ್ಸಲಾಂ ಕಾಲೇಜಿನ ಅಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಪ್ರಾರ್ಥನೆಗೈದರು. ಸಯ್ಯಿದ್ ಅಕ್ರಮ್ ಅಲಿ ತಂಙಳ್ ನೀಖಾಹ್ ನೇತೃತ್ವ ವಹಿಸಿದರು.

ಪ್ರವಾದಿ ಚರ್ಯೆಯಾದ ವಿವಾಹ, ಸರಳವಾದ ಕಾರ್ಯ, ಸಮಾಜದಲ್ಲಿ ನಡೆಯುವ ಅದ್ದೂರಿಯ ಮದುವೆ ಕಾರಣ ಬಡಹೆಣ್ಣು ಮಕ್ಕಳು ಕೊರಗುವಂತಾಗಿದೆ. ಈ ನಿಟ್ಟಿನಲ್ಲಿ ಯಂಗ್ ಮೆನ್ಸ್ ಅವರಿಗೆ ಆಸರೆಯಾಗಿ ಅವರ ಕನಸು ನೆರವೇರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಪ್ರಶಂಸನೀಯ ಎಂದು ಕನ್ನಡಿಕಟ್ಟೆ ಖತೀಬರಾದ ಸುಲ್ತಾನ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಸೀದಿ ಉಪಾಧ್ಯಕ್ಷ ಕೆ.ಎಮ್ ಇಸ್ಮಾಯಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅಥಿತಿಗಳಾಗಿ ಬೆಳ್ತಂಗಡಿ ದಾರುಸ್ಸಲಾಮ್ ಕಾಲೇಜಿನ ಕೋಶಾಧಿಕಾರಿ, ಉದ್ಯಮಿ ರಝಕ್ ಕನ್ನಡಿಕಟ್ಟೆ ,ಶಂಸುದ್ದೀನ್ ದಾರಿಮಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸಂತೋಷ್ ಕುಮಾರ್ ಜೈನ್, ಹಾಮದ್ ಬಾವ ,ವೈದ್ಯಾಧಿಕಾರಿ ಡಾ. ಸಂಜಯ್, ವೇಣೂರು ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಆಚಾರ್ಯ ,ಮುಸೈಬ್ ಮಂಡ್ಯ, ಜಂಯುತುಲ್ ಫಲಾಹ್, ಬೆಳ್ತಂಗಡಿ ಘಟಕದ ಅಧ್ಯಕ್ಷ ಶೇಖುಂಙಿ, ಉಸ್ಮಾನ್ ಗುರುವಾಯನಕೆರೆ, ಮಸೀದಿ ಕೋಶಾಧಿಕಾರಿ ಹೈದರ್ ಮಾಸ್ಟರ್ ,ಅಹ್ಮದ್ ಹುಸೈನ್ ,ವೇಣೂರು ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ಎಚ್ ವೇಣೂರು , ಪಡ್ಡಂದಡ್ಕ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ, ಇಸ್ಮಾಯಿಲ್ ಕೆಇಲ್,ಹಮೀದ್ ಶಿರ್ಲಾಲು, ಹಕೀಂ ಜಾರಿಗೆಬೈಲು, ಮುಸ್ತಫಾ ಜಾರಿಗೆಬೈಲು, ಫವಾಝ್ ಬೆಂಗಳೂರು ಹಾಗೂ ಇನ್ನಿತರ ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಿದರು.

ನೂರುಲ್ ಹುದಾ ಮದ್ರಸ ಮುಖ್ಯೋಪಾದ್ಯಯ ಸಿದ್ದೀಕ್ ದಾರಿಮಿ ನಾವೂರು ಸ್ವಾಗತಿಸಿದರು. ಯಂಗ್ ಮೆನ್ಸ್ ಅಧ್ಯಕ್ಷ ಇಮ್ರಾನ್ ಡಿಡಿ ವಂದಿಸಿದರು. ನಿಸಾರ್ ಬೆಳ್ತಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

error: Content is protected !!