September 6, 2026
Uncategorized

ಗುಂಡೂರಿ ಶ್ರೀ ಗುರು ಚೈತನ್ಯ ಸೇವಾ ಪ್ರತಿಷ್ಠಾನದ ಸೇವಾಶ್ರಮದಲ್ಲಿ ಶುಶ್ರೂಷೆಯ ಪಡೆಯುತ್ತಿದ್ದ ವ್ಯಕ್ತಿ ನಾಪತ್ತೆ

ಬೆಳ್ತಂಗಡಿ : ಗುಂಡೂರಿ ಗ್ರಾಮದ ಶ್ರೀ ಗುರು ಚೈತನ್ಯ ಸೇವಾ ಪ್ರತಿಷ್ಠಾನದ ಸೇವಾಶ್ರಮ ಎಂಬಲ್ಲಿ ಶುಶ್ರೂಷೆಯ ಬಗ್ಗೆ ದಾಖಲಾಗಿದ್ದ ಮಂಗಳೂರು ತಾಲೂಕು ಹೊಸಬೆಟ್ಟು, ಸುರತ್ಕಲ್‌, ನಂದಶ್ರೀ ಅಪಾರ್ಟ್‌ ಮೆಂಟ್‌, ಮುಖ್ಯ ಪ್ರಾಣ ಮಠದ ಬಳಿಯ ನಿವಾಸಿ ಸುಧಾಕರ(58) ಎಂಬವರು ನಾಪತ್ತೆಯಾಗಿರುವುದಾಗಿ ಜ.13 ರಂದು ವೇಣೂರು ಠಾಣೆಗೆ ದೂರು ನೀಡಲಾಗಿದೆ.

ಸುಧಾಕರ ಅವರು ಸುಮಾರು 20 ವರ್ಷಗಳಿಂದ, ಮನೆಬಿಟ್ಟು ಸಿಕ್ಕಿದಲ್ಲಿ ಸುತ್ತಾಡಿಕೊಂಡಿದ್ದವರು ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದು ಅಪರೂಪಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದವರು, ಇತ್ತೀಚೆಗೆ ಮಾನಸಿಕ ಖಿನ್ನತೆಗೊಳಪಟ್ಟು ಪಣಂಬೂರು, ಬೈಕಂಪಾಡಿ ವಠಾರದಲ್ಲಿ ತುಂಬಾ ಕೀಟಲೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವನನ್ನು ಪಡುಬಿದ್ರೆ ಆಶ್ರಮದವರು ತಮ್ಮ ಆಶ್ರಮದಲ್ಲಿ ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಬಿತ್ತರಿಸಿದ್ದನ್ನು ಕಂಡು ಅವರನ್ನು ಅಲ್ಲಿಂದ ಕರೆದುಕೊಂಡು ಬಂದು ಗುಂಡೂರಿ ಗ್ರಾಮದ ಶ್ರೀ ಗುರು ಚೈತನ್ಯ ಸೇವಾ ಪ್ರತಿಷ್ಠಾನದ ಸೇವಾಶ್ರಮ ಎಂಬಲ್ಲಿ ಶುಶ್ರೂಷೆಯ ಬಗ್ಗೆ ದಾಖಲಿಸಿದ್ದು, ಸದ್ರಿ ಸುಧಾಕರ ಜ.9 ರಂದು ರಾತ್ರಿ ಸುಮಾರು 12 ಗಂಟೆಯ ಬಳಿಕ ಆಶ್ರಮದಿಂದ ಕಾಣೆಯಾಗಿದ್ದು, ಈ ಬಗ್ಗೆ ಆಶ್ರಮದ ಮುಖ್ಯಸ್ಥರು ನೀಡಿದ ಮಾಹಿತಿಯಂತೆ ಅವರು ಸಹೋದರ ವಿಜಯ ಎಂ.ಆಶ್ರಮಕ್ಕೆ ಬಂದು ವಿಚಾರಿಸಿ ಬಳಿಕ ಸಂಬಂಧಿಕರ ಮನೆಗಳಿಗೆಲ್ಲಾ ಸಂಪರ್ಕಿಸಿ, ಭೇಟಿ ನೀಡಿ ವಿಚಾರಿಸಿದ್ದಲ್ಲದೇ, ಪಣಂಬೂರು, ಬೈಕಂಪಾಡಿ, ಸುರತ್ಕಲ್ ವಠಾರಗಳಲ್ಲಿ ಹುಡುಕಾಡಿ ಪತ್ತೆಯಾಗದೇ ಇದ್ದಾಗ ತಡವಾಗಿ ಬಂದು ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ದಕ್ಷಿಣ ಕನ್ನಡ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿಯಾಗಿ ಅಬ್ದುಲ್ ರಹಿಮಾನ್ ಪಡ್ಪು

Suddi Udaya

ಸುಲ್ಕೇರಿ ಅಂಗನವಾಡಿಯ ಹಳೆ ವಿದ್ಯಾರ್ಥಿನಿಯ ಪೋಷಕರಿಂದ ಸಾವಯವ ತರಕಾರಿ ಗಿಡಗಳ ಹಸ್ತಾಂತರ

Suddi Udaya

ಬಳಂಜ ಗ್ರಾ.ಪಂ. ನ ನೂತನ ಅಧ್ಯಕ್ಷರಾಗಿ ಶೋಭಾ ಕುಲಾಲ್, ಉಪಾಧ್ಯಕ್ಷರಾಗಿ ಯಶೋಧರ ಶೆಟ್ಟಿ ಅವಿರೋಧವಾಗಿ ಆಯ್ಕೆ

Suddi Udaya

ನ್ಯಾಷನಲ್ ಲೆವಲ್ ಯಕ್ಷ ನೃತ್ಯ ಸ್ಪರ್ಧೆ ಮಡಂತ್ಯಾರಿನ ಯಶಸ್ವಿನಿ ಕುಲಾಲ್ ಆಯ್ಕೆ

Suddi Udaya

ನಾಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಕೇಶವ ಪೂಜಾರಿ , ಉಪಾಧ್ಯಕ್ಷರಾಗಿ ಸೋಮಪ್ಪ ಗೌಡ

Suddi Udaya

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!