ಜ.22: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯೊಂದಿಗೆಕೋಟಿ ಕೋಟಿ ರಾಮ ಭಕ್ತರ ಅಭಿಲಾಷೆ ಈಡೇರುತ್ತಿದೆ

Suddi Udaya

ಬೆಳ್ತಂಗಡಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಗೊಂಡು ಇದೀಗ ಭಕ್ತರ ಅಭಿಲಾಷೆಯಂತೆ ಜ.22ರಂದು ರಾಮಚಂದ್ರನ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದೆ. ಕೋಟಿ ಕೋಟಿ ರಾಮ ಭಕ್ತರ ಅಭಿಲಾಷೆ ಈಡೇರುತ್ತಿದೆ. ವಾದ – ವಿವಾದಗಳು ಏನೇ ಇರಲಿ ರಾಮ ಮಂದಿರ ನಿರ್ಮಾಣಗೊಂಡಿರುವುದು ಬಹುತೇಕರ ಕನಸು ನನಸಾಗಿದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಶುಭಾಶಯಗಳು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ದಿನಗಳಿಂದ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಆದರೆ ಅದರಲ್ಲಿ ಒಂದು ವಿಚಾರಕ್ಕೆ ನನ್ನ ಸಹಮತ ಇಲ್ಲ. ರಾಮ ಮಾಂಸಹಾರಿಯಾಗಿದ್ದ ಎಂಬ ವಿಚಾರ. ಈ ವಿಚಾರ ಕೆಲವು ರಾಮಭಕ್ತರನ್ನು ಕೆರಳಿಸಿದೆ.

ಆದರೆ ನಾನು ತಿಳಿದುಕೊಂಡ ಪ್ರಕಾರ ರಾಮ ಶುದ್ಧ ಸಸ್ಯಾಹಾರಿಯಾಗಿದ್ದ. ರಾಮ ಎಂದರೆ ಆತ ಕೇವಲ ಮನುಷ್ಯನಲ್ಲ. ದೈವಾಂಶ ಸಂಭೂತ. ರಾಮಾಯಣವನ್ನು ಓದುವಾಗ ಆತ ಮಾಂಸಾಹಾರಿ ಎಂಬ ಉಲ್ಲೇಖ ಎಲ್ಲೂ ಬರುವುದಿಲ್ಲ. ರಾಮ ಮಾಂಸಾಹಾರಿಯಾಗಿರಲು ಸಾಧ್ಯವೇ ಇಲ್ಲ. ಹಣ್ಣು ಹಂಪಲುಗಳನ್ನು ತಿಂದು ಕಾಡಲ್ಲಿ ಜೀವನ ಕಳೆದ ಎಂಬ ಉಲ್ಲೇಖವೇ ಸಿಗುತ್ತದೆ.

ಹಾಗಾಗಿ ರಾಮ ಭಕ್ತರು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ಮಹೋತ್ಸವದ ಸಮಯದಲ್ಲಿಯಾದರೂ ಅಥವಾ ಮಹೋತ್ಸವದ ಸಮಯದವರೆಗಾದರೂ ಸಸ್ಯಾಹಾರಿಗಳಾಗಿ ನಿಯಮವನ್ನು ಅಳವಡಿಸಿಕೊಂಡು ರಾಮನ ಬಗ್ಗೆ ಇಲ್ಲದ ವಿಚಾರಗಳನ್ನು ಹೇಳುವವರಿಗೆ ಸೆಡ್ಡು ಹೊಡೆಯಿರಿ ಎಂದು ಮನವಿ ಮಾಡುತ್ತೇನೆ. ಹಾಗೆಯೇ ಮದ್ಯಪಾನ ಮುಂತಾದ ದುಶ್ಚಟಗಳಿಂದ ದೂರವಿದ್ದು ರಾಮ ಮಂದಿರದ ವೈಭವಕ್ಕೆ ಸಾಕ್ಷಿಯಾಗಿರಿ ಎಂದು ಮನವಿ ಮಾಡುತ್ತೇನೆ.

#ನಿರಂಜನ್ ಜೈನ್ ಕುದ್ಯಾಡಿ

Leave a Comment

error: Content is protected !!