26.3 C
ಪುತ್ತೂರು, ಬೆಳ್ತಂಗಡಿ
May 18, 2025
Uncategorized

ಆಮಂತ್ರಣ ಪರಿವಾರದ ಸಾರಥ್ಯದಲ್ಲಿ ಸಾವಿರಾರು ಭಜಕರಿಂದ ಅಳದಂಗಡಿ ಅರಮನೆ ನಗರಿಯಲ್ಲಿ ಭಕ್ತಿಯ ಅಲೆ ಎಬ್ಬಿಸಿದ ಕುಣಿತಾ ಭಜನೆ

ಅಳದಂಗಡಿ : ಶ್ರೀ ಸೋಮನಾಥೇಶ್ವರೀ ಭಜನಾ ಮಂಡಳಿ, ಶ್ರೀ ಸತ್ಯದೇವತಾ ದೈವಸ್ಥಾನ ಅಳದಂಗಡಿ, ಸುರೇಶ್ ಪೂಜಾರಿ ಅಭಿಮಾನಿ ಬಳಗ ಸಹಕಾರದಲ್ಲಿ ಆಮಂತ್ರಣ ಪರಿವಾರದ ಸಾರಥ್ಯದಲ್ಲಿ ಜ. 14 ರಂದು ಭಜನಾ ಸತ್ಸಂಗ ರಾಮಕೃಷ್ಣ ಕಾಟುಕುಕ್ಕೆ ಸಂಗೀತಾ ಹಾಡಿನೊಂದಿಗೆ ಕುಣಿತ ಭಜನೆಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಎದುರು ಮೈದಾನದಲ್ಲಿ ನಡೆಯಿತು.

ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಲ್ಲಿ ದೀಪ ಪ್ರಜ್ವಲಿಸುವುದರೊಂದಿಗೆ ಮೈದಾನದಲ್ಲಿಕುಣಿತ ಭಜನೆಯ ಉದ್ಘಾಟನೆಯನ್ನು ಅಳದಂಗಡಿ ಶ್ರೀ ಕ್ಲಿನಿಕ್ ನ ವೈದ್ಯರಾದ ಡಾ.ಎನ್.ಎಂ ತುಳುಪುಳೆ ನೆರವೇರಿಸಿದರು.

ಧಾರ್ಮಿಕ ಸಮಾರಂಭದ ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ, ಮುಂಬಯಿ ಉದ್ಯಮಿ ಸುರೇಶ್ ಪೂಜಾರಿ ಮುಂಬಯಿ,ಗುಜರಾತ್ ಉದ್ಯಮಿ ಶೇಖರ ದೇವಾಡಿಗ ಪಾಲಬೆ,ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ,ಉಪಾಧ್ಯಕ್ಷ ಜನಾರ್ದನ ಪೂಜಾರಿ ಕೊಡಂಗೆ, ಅಳದಂಗಡಿ ಸಿ.ಎ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು, ಸದಾನಂದ ಆಚಾರ್ಯ ಸುಲ್ಕೇರಿಮೊಗ್ರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಳದಂಗಡಿ ಅರಮನೆಯ ಶ್ರೀ ಶಿವಪ್ರಸಾದ್ ಅಜಿಲರು, ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಹಾಗೂ ಸುಪ್ರೀತ್ ಜೈನ್, ಹರೀಶ್ ವೈ ಚಂದ್ರಮ ಕಾರ್ಯಕ್ರಮದ ನೃತೃತ್ವ ವಹಿಸಿದ್ದರು.ಆಮಂತ್ರಣ ಪರಿವಾರದ ಸಂಚಾಲಕ ವಿಜಯ್ ಕುಮಾರ್ ಜೈನ್ ಸ್ವಾಗತಿಸಿ,ವಂದಿಸಿದರು.

Related posts

ಬೆನಕ ಆಸ್ಪತ್ರೆಯಿಂದ ಡಾ| ಕೇಶವ ರವರಿಗೆ ಗೌರವಾರ್ಪಣೆ

Suddi Udaya

ಡಾ. ಶಿವರಾಮ ಕಾರಂತ ಪ್ರಶಸ್ತಿಗೆ ಕಾಶಿಪಟ್ಣ ಗ್ರಾಮ ಪಂಚಾಯತ್ ಆಯ್ಕೆ

Suddi Udaya

ಮೇಲಂತಬೆಟ್ಟು ಗ್ರಾ.ಪಂ.ನಿಂದ ಪ್ರಕೃತಿ ವಿಕೋಪಗೊಂಡಾಗ ಕೈಗೊಳ್ಳಬೇಕಾದ ಕ್ರಮ ಹಾಗೂ ಡೆಂಗ್ಯೂ ಜ್ವರ ಉತ್ಪತ್ತಿ ಹಾಗೂ ಹರಡುವ ಬಗ್ಗೆ ಮಾಹಿತಿ

Suddi Udaya

ವಾಣಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆ

Suddi Udaya

ಎಸ್. ಡಿ. ಎಮ್ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಪಟ್ರಮೆ ಕಲ್ಲರಿಗೆ ನಿವಾಸಿ ಸರಳ ನಿಧನ

Suddi Udaya
error: Content is protected !!