25.4 C
ಪುತ್ತೂರು, ಬೆಳ್ತಂಗಡಿ
May 18, 2025
ಅಪರಾಧ ಸುದ್ದಿ

ಮಕ್ಕಳ ಜೊತೆ ಆಟವಾಡುತ್ತಿದ್ದ ಬಾಲಕ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತ್ಯು


ಸೋಣಂದೂರು: ಇಲ್ಲಿಯ ಸೋಣಂದೂರು ಗ್ರಾಮದ ಪಣಕಜೆ ಎಂಬಲ್ಲಿ ಮಕ್ಕಳ ಜೊತೆ ಆಟವಾಡುತ್ತಿದ್ದ ಏಳು ವರ್ಷದ ಬಾಲಕ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ದಾರುಣ ಘಟನೆ ಜ.15ರಂದು ಸಂಜೆ ನಡೆದಿದೆ.
ಪಣಕಜೆ ನಿವಾಸಿ ಮಹಮ್ಮದ ಹನೀಫ್ ಎಂಬವರ ದ್ವಿತೀಯ ಪುತ್ರ ಮಹಮ್ಮದ್ ಅನಾನ್ (೭ವ) ಈ ದುರ್ಘಟನೆಯಲ್ಲಿ ಮೃತಪಟ್ಟ ಬಾಲಕನಾಗಿದ್ದಾನೆ. ಇಂದು ಶಾಲೆಗೆ ರಜೆ ಇದ್ದ ಕಾರಣ ಪಕ್ಕದ ಮನೆಯ ಮಕ್ಕಳ ಜೊತೆ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದ. ಕಟ್ಟೆ ಇಲ್ಲದ ಬಾವಿಯ ಬಳಿ ಮಕ್ಕಳ ಆಟವಾಡುತ್ತಿದ್ದಾಗ ಬಾಲಕ ಅನಾನ್ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದನೆನ್ನಲಾಗಿದೆ. ಕೂಡಲೇ ಸ್ಥಳೀಯರ ಸಹಕಾರದಲ್ಲಿ ಬಾಲಕನನ್ನು ಮೇಲೆತ್ತಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ, ಆದಾಗಲೇ ಬಾಲಕ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈತ ಸ್ಥಳೀಯ ಶಾಲಾ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಪುಂಜಾಲಕಟ್ಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಉಜಿರೆ : ಅಕ್ರಮ ಮದ್ಯ ಮಾರಾಟ: ವಾಹನ ಸಹಿತ ರೂ. 1.53 ಲಕ್ಷದ ಮದ್ಯ ವಶ

Suddi Udaya

ಆರತಕ್ಷತೆ ಊಟ ಸೇವಿಸಿದ ಮಂದಿ ಅಸ್ವಸ್ಥ – ಆಸ್ಪತ್ರೆಗೆ ದಾಖಲು: ಓರ್ವೆ ಮಹಿಳೆ ಸಾವು-ಮತ್ತೋರ್ವೆ ಗಂಭೀರ

Suddi Udaya

ಉಜಿರೆ : ಸರ್ವಿಸ್ ಮಾಡಿ ಮನೆ ಬಳಿ ನಿಲ್ಲಿಸಿದ್ದ ಬೈಕ್ ಕಳವು

Suddi Udaya

ಉಜಿರೆ: ಶಾಲಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಪುಂಜಾಲಕಟ್ಟೆ: ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರ ಸಾವು

Suddi Udaya

ಬೆಳ್ತಂಗಡಿ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಬೆಳ್ತಂಗಡಿ ಪೊಲೀಸರಿಂದ ಆರೋಪಿ ಬಂಧನ

Suddi Udaya
error: Content is protected !!