27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಡ ಸ.ಪ್ರೌ. ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಕ್ರೀಡಾಪಟು ದಿನೇಶ್ ವೇಣೂರುರಿಂದ ಕ್ರೀಡಾ ಸ್ಪೈಕ್ ಶೂ ಕೊಡುಗೆ

ನಡ: 2023-24 ನೇ ಸಾಲಿನ ಪ್ರಸಕ್ತ ವರ್ಷದಲ್ಲಿ ಸರಕಾರಿ ಪ್ರೌಢಶಾಲೆ ನಡದ ಪ್ರೌಢಶಾಲಾ ವಿದ್ಯಾರ್ಥಿಗಳು ವಲಯ, ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಯ ಮೂಲಕ ಶಾಲೆಗೆ ಕೀರ್ತಿ ತಂದುಕೊಟ್ಟರು.

ಈ ಸಾಧನೆಗೆ ಸೂಕ್ತ ಮಾರ್ಗದರ್ಶನವನ್ನು ನೀಡಿದವರು ಶಾಲಾ ದೈಹಿಕ ಶಿಕ್ಷಕಿಯಾದ ಶ್ರೀಮತಿ ಸುಜಯ ಬಿ ಮತ್ತು ದೈಹಿಕ ಶಿಕ್ಷಣ ತರಬೇತುದಾರರಾದ ಮಹಾವೀರ್ ವೇಣೂರುಕ್ರೀಡಾಕೂಟಗಳಲ್ಲಿ ಮತ್ತಷ್ಟು ಸಾಧನೆಗೈಯಬೇಕೆಂಬ ಸದುದ್ದೇಶದಿಂದ ಜ. 18 ರಂದು ಶಾಲಾ ವಿದ್ಯಾರ್ಥಿಗಳಿಗೆ ಸುಮಾರು ಹತ್ತು ಸಾವಿರ ಬೆಲೆಯ ಕ್ರೀಡಾಕೂಟದ ಸ್ಪೈಕ್ ಶೂ ಗಳನ್ನು ದಿನೇಶ್ ರಾಜ್ಯಮಟ್ಟದ ಕ್ರೀಡಾಪಟು ವೇಣೂರು ಇವರು ವಿದ್ಯಾರ್ಥಿಗಳಿಗೆ ಕೊಡುಗೆ ನೀಡಿದರು.
ದಿನೇಶ್ ರವರು ತರಬೇತುದಾರರಾದ ಮಹಾವೀರ್ ರವರ ಶಿಷ್ಯರೂ ಆಗಿರುವುದು ವಿಶೇಷ. ಶಾಲಾ ಮುಖ್ಯ ಶಿಕ್ಷಕರಾದ ಮೋಹನ‌ಬಾಬು ಡಿ ಅಭಿನಂದನೆ ಸಲ್ಲಿಸಿದರು. ಸಂಸ್ಥೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು.

Related posts

ರಸ್ತೆ ಬದಿ ವಾಹನ ನಿಲ್ಲಿಸುವರಿಗೆ ಎಚ್ಚರಿಕೆ, ಬ್ಯಾಟರಿ ಕಳ್ಳರಿದ್ದಾರೆ: ಸುಲ್ಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ವಾಹನಗಳ ಬ್ಯಾಟರಿ ಕಳವು; ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಹಸಿರು ಕ್ರಾಂತಿಯ ಹರಿಕಾರ ಡಾ| ಬಾಬು ಜಗಜೀವನರಾಂರವರ 116 ನೇ ಜನ್ಮ ದಿನಾಚರಣೆ

Suddi Udaya

ಅಂಡಿಂಜೆ ವಿಕಲಚೇತನರ ಸಮನ್ವಯ ವಿಶೇಷ ಗ್ರಾಮಸಭೆ

Suddi Udaya

ಕುರಿಯ ಪ್ರತಿಷ್ಠಾನದಿಂದ ಬಲಿಪ ಸ್ಮೃತಿ ಗೌರವಾರ್ಥ ತೆಂಕುತಿಟ್ಟು ಭಾಗವತಿಕೆ ಸ್ಪರ್ಧೆಗೆ ಆಹ್ವಾನ

Suddi Udaya

ಧರ್ಮಸ್ಥಳ ಲಕ್ಷ ದೀಪೋತ್ಸವದ ಪ್ರಯುಕ್ತ 12ನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಬಸವ ಜಯಂತಿ ಆಚರಣೆ

Suddi Udaya
error: Content is protected !!