ಗೇರುಕಟ್ಟೆ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ರವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭವು ಜ. 20ರಂದು ನಡೆಯಿತು.
ದ.ಕ ಜಿಲ್ಲಾ ಸಂಯುಕ್ತ ಖಾಝಿಗಳಾದ ಶೈಖುನಾ ಖರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.
ನೂರುಸ್ಸಾದಾತ್ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿ ಕೋಯ ತಂಙಳ್ ದುವಾಶೀರ್ವಚನ ನೆರವೇರಿಸಿದರು.
ಸದರ್ ಮುಅಲ್ಲಿಮ್ ಅಬೂಬಕ್ಕರ್ ಸಿದ್ದೀಕ್ ಮುಈನಿ ಸ್ವಾಗತಿಸಿ, ಜಾರಿಗೆಬೈಲು ಮಸೀದಿಯ ಮುದರ್ರಿಸ್ ರಾದ ಮುಹಮ್ಮದ್ ಯಾಸಿರ್ ಫಾಝಿಲ್ ಅಲ್- ಫುರ್ಖಾನಿ ಉದ್ಘಾಟಿಸಿದರು.
ಪರಪ್ಪು ಖತೀಬರಾದ ಮುಹಮ್ಮದ್ ತಾಜುದ್ದೀನ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಪ್ರಭಾಷಣವನ್ನು ಕೇರಳದ ಪ್ರಮುಖ ವಿದ್ವಾಂಸ ಮುಸ್ತಫಾ ಸಖಾಫಿ ತೆನ್ನಲ ನಡೆಸಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾಜಿ ಹಸನಬ್ಬ ಚಾರ್ಮಾಡಿಯವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನೂರುದ್ದೀನ್ ಝುಹ್ ರಿ, ಜುನೈದ್ ಆಝ್ ಹರಿ, ಹಸೈನಾರ್ ಸಅದಿ, ಅಬ್ಬಾಸ್ ಹಿಶಾಮಿ, ಸಿದ್ದೀಕ್ ಕಾಜೂರು, ಅಬೂಬಕ್ಕರ್ ಹಾಜಿ, ಅಬ್ದುಲ್ ಬಶೀರ್, ಪಿ.ಬಿ. ಸಂಶೀರ್ ಸಖಾಫಿ, ಮುಸ್ತಫಾ ಹಿಮಮಿ,ಇಕ್ಬಾಲ್ ಮರ್ ಝೂಕಿ, ಅಬೂಬಕ್ಕರ್ ಮರ್ ಝೂಕಿ, ಬಿ.ಎಂ. ಸಿದ್ದೀಕ್ ಸಖಾಫಿ,ನಝೀರ್ ಅಹ್ಸನಿ, ಅಬ್ದುಲ್ ಕರೀಮ್ ಗೇರುಕಟ್ಟೆ, ಹನೀಫ್ ಬಿ.ಐ,ಪಿ.ಬಿ. ಖಾದರ್ ಹಾಜಿ, ರವೂಫ್ ಹಾಜಿ, ಬಿ.ಎಂ. ಆದಂ ಹಾಜಿ, ಹಾಗೂ ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು.