September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ : ಪಟಾಕಿ ಅಂಗಡಿಗಳಿಗೆ ಅಧಿಕಾರಿಗಳಿಂದ ಪರಿಶೀಲನೆ: ಪಟಾಕಿ ದಾಸ್ತಾನು ಮಾಡಿದ್ದ ಮೂರು ಗೋದಾಮಿಗೆ ಬೀಗ

ಬೆಳ್ತಂಗಡಿ : ವೇಣೂರು ಪಟಾಕಿ ತಯಾರಿಕೆ ಮಾಡುವ ವೇಳೆ ಸ್ಫೋಟಗೊಂಡ ಪ್ರಕರಣ ಸಂಬಂಧ ಪಟಾಕಿ ಮಾರಾಟ ಮತ್ತು ಗೋಡೌನ್ ಮಳಿಗೆಗಳಿಗೆ ತಾತ್ಕಾಲಿಕ ಪರವಾನಿಗೆ ಜ.29 ರಂದು ಜಿಲ್ಲಾಧಿಕಾರಿ ರದ್ದು ಮಾಡಿದ್ದಾರೆ. ಈ ಸಂಬಂಧ ಪಟಾಕಿ ಮಾರಾಟ ಮತ್ತು ದಾಸ್ತಾನು ಗೋಡೌನ್ ಮೇಲೆ ಜ.30 ರಂದು ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 9 ಕಡೆ ಪಟಾಕಿ ಮಾರಾಟ ಮತ್ತು ದಾಸ್ತಾನು ಗೋಡೌನ್ ಇದ್ದು. ಬೆಳ್ತಂಗಡಿ ತಹಶೀಲ್ದಾರ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಜ.30 ರಂದು ಏಕಕಾಲದಲ್ಲಿ 7 ಸ್ಥಳಗಳಿಗೆ ದಾಳಿ ಮಾಡಿ ಪರಿಶೀಲನೆ ನಡೆಸಿ ಪಟಾಕಿ ಮಾರಾಟ ಮತ್ತು ದಾಸ್ತಾನು ಮಾಡದಂತೆ ಅಂಗಡಿಗೆ ನೋಟಿಸ್ ಅಂಟಿಸಿದ್ದಾರೆ.

ಮೂರು ಪಟಾಕಿ ದಾಸ್ತಾನು ಗೋಡೌನ್ ಸೀಝ್: ಉಜಿರೆ ಪ್ರಭಾತ್ ಸ್ಟೋರ್ ,ಬೆಳ್ತಂಗಡಿ ಮುಖ್ಯರಸ್ತೆ ಬೆಳ್ತಂಗಡಿ ಜನರಲ್ ಮರ್ಚೆಂಟ್ , ಚಾಮುಂಡೇಶ್ವರಿ ಎಂಟರ್ ಪ್ರೈಸಸ್ ಬೆಳ್ತಂಗಡಿ ಇದರ ಮೂರು ಗೋಡೌನ್ ನಲ್ಲಿ ಪಟಾಕಿ ದಾಸ್ತಾನು ಮಾಡಲಾಗಿದ್ದು ಇದನ್ನು ಕಂದಾಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಮುಂದಿನ ಸರಕಾರದ ಆದೇಶದವರೆಗೂ ಬೀಗ ಹಾಕಿದ್ದಾರೆ.

ದಾಳಿ ಮಾಡಲಾದ ಪಟಾಕಿ ಅಂಗಡಿಗಳು: ಬೆಳ್ತಂಗಡಿಯ ಎಸ್.ಪುಂಡಲೀಕ ಭಟ್ ಮಾಲೀಕತ್ವದ ಪ್ರಭಾತ್ ಸ್ಟೋರ್, ಬೆಳ್ತಂಗಡಿ ಮುಖ್ಯ ರಸ್ತೆಯಲ್ಲಿರುವ ಕೆ.ಮಂಜುನಾಥ್ ಕಾಮತ್ ಮಾಲೀಕತ್ವದ ಜನರಲ್ ಮರ್ಚೆಂಟ್, ಬೆಳ್ತಂಗಡಿಯ ಸುಧೀರ್ ಹೊಳ್ಳ ಮಾಲೀಕತ್ವದ ಚಾಮುಂಡೇಶ್ವರಿ ಎಂಟರ್ ಪ್ರೈಸಸ್ , ಉಜಿರೆಯ ಬಿ.ರಾಜರಾಮ್ ಭಟ್ ಮಾಲೀಕತ್ವದ ಮಂಜು ಶ್ರೀ ಸ್ಟೋರ್ , ಉಜಿರೆಯ ಪ್ರಭಾತ್ ಸ್ಟೋರ್, ಪುಂಜಾಲಕಟ್ಟೆಯ ಬಿ.ವಸಂತ ಬಾಳಿಗ ಮಾಲೀಕತ್ವದ ವಸಂತ್ ಸ್ಟೋರ್ , ವೇಣೂರಿನ ಬಿ.ಮೋಹನ್ ದಾಸ್ ನಾಯಕ್ ಸೇರಿದಂತೆ ಏಳು ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ.

ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ರಿಜಿನಲ್ ಫೈರ್ ಅಫಿಸರ್ ರಂಗನಾಥ್ ಮತ್ತು ಸಿಬ್ಬಂದಿಗಳು ಮತ್ತು ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

44ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ -2025ಶಿಕ್ಷಕಿ ಸೌಮ್ಯಾ ಕೆ. ಬಂಗಾಡಿ ಅವರಿಗೆ ಹಲವು ಬಹುಮಾನಗಳು

Suddi Udaya

ಕುವೆಟ್ಟು: ವಿದ್ಯುತ್ ಅವಘಡದಿಂದ ಸಹಾಯಕ ಪವರ್‌ಮ್ಯಾನ್ ಮೃತ್ಯು

Suddi Udaya

ರಾಷ್ಟ್ರಮಟ್ಟದ ಉರ್ದು ಭಾಷಣ ಸ್ಪರ್ಧೆ: ಸ್ಟಾರ್ ಲೈನ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಸೈಯ್ಯದ್ ಮಹಮ್ಮದ್ ಉವೈಸ್ ಪ್ರಥಮ ಸ್ಥಾನ

Suddi Udaya

ಧರ್ಮಸ್ಥಳದಲ್ಲಿ ಡಾ. ಹೆಗ್ಗಡೆಯವರ ಪಟ್ಟಾಭಿಷೇಕದ 56ನೇ ವರ್ಧಂತ್ಯುತ್ಸವದ ಅಂಗವಾಗಿ ಛದ್ಮವೇಷ ಸ್ಪರ್ಧೆ

Suddi Udaya

ಧರ್ಮಸ್ಥಳದ ಲತಾ ಆನೆ ಹೃದಯಾಘಾತದಿಂದ ಸಾವು

Suddi Udaya

ಉಜಿರೆ: ಎಸ್.ಡಿ.ಎಂ. ಐ.ಟಿ. ಗ್ರಂಥಪಾಲಕರಿಗಾಗಿ ಒಂದು ದಿನದ ಕಾರ್ಯಾಗಾರ

Suddi Udaya
error: Content is protected !!