April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮೊಗ್ರು: ಲಕ್ಷ್ಮಿ ನಾರಾಯಣ ಭಜನಾ ಮಂದಿರ ಹಾಗೂ ಎಲ್.ಎನ್. ಫ್ರೆಂಡ್ಸ್ ಊಂತನಾಜೆ ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ – ಎಲ್. ಎನ್. ಟ್ರೋಫಿ -2024

ಮೊಗ್ರು : ಇಲ್ಲಿನ ಲಕ್ಷ್ಮಿ ನಾರಾಯಣ ಭಜನಾ ಮಂದಿರ (ರಿ), ಮತ್ತು ಎಲ್.ಎನ್. ಫ್ರೆಂಡ್ಸ್ ಊಂತನಾಜೆ ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಸಹಯೋಗದಲ್ಲಿ
ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ‘ಎಲ್.ಎನ್. ಟ್ರೋಫಿ-2024’ ಲಕ್ಷ್ಮಿ ನಾರಾಯಣ ಭಜನಾ ಮಂದಿರದ ವಠಾರದಲ್ಲಿ ಜ28ರಂದು ನಡೆಯಿತು.

ಊಂತನಾಜೆ ಲಕ್ಷ್ಮಿ ನಾರಾಯಣ ಭಜನಾ ಮಂದಿರದ ಅಧ್ಯಕ್ಷ ಸಂಕಪ್ಪ ಗೌಡ ಉಪ್ಪ ರವರು ಪಂದ್ಯಾಟವನ್ನು ಉದ್ಘಾಟಿಸಿದರು.
ಸಂಜೆ ನೆರವೇರಿದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮಪಂಚಾಯತ್ ಅಧ್ಯಕ್ಷ ದಿನೇಶ್ ಖಂಡಿಗ ವಹಿಸಿ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಪ್ರಗತಿಪರ ಕೃಷಿಕರಾದ ಪ್ರಭಾಕರ ಗೌಡ ಗುತ್ಯೋಡಿ, ಧರ್ಣಪ್ಪ ಗೌಡ ಅತ್ಯರಕಂಡ, ಬಾಬು ಬೆಲ್ಚಾಡ ಊಂತನಾಜೆ, ಲಕ್ಷ್ಮಿ ನಾರಾಯಣ ಭಜನಾ ಮಂದಿರದ ಅಧ್ಯಕ್ಷ ಸಂಕಪ್ಪ ಗೌಡ , ಮಾಜಿ ಅಧ್ಯಕ್ಷ ಶಿವಣ್ಣ ಗೌಡ ಪರಪ್ಪಾದೆ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಅಚುಶ್ರೀ ಬಾಂಗೇರು ಹಾಗೂ ಬಂದಾರು ಗ್ರಾಮಪಂಚಾಯತ್ ಸದಸ್ಯೆ ಮಂಜುಶ್ರೀ ಊಂತನಾಜೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶುಭಹಾರೈಸಿದರು.

ಎಲ್.ಎನ್. ಫ್ರೆಂಡ್ಸ್ ಊಂತನಾಜೆ ಇದರ ಅಧ್ಯಕ್ಷ ನಿತಿನ್ ಕುಮಾರ್ ಊಂತನಾಜೆ , ಕಾರ್ಯದರ್ಶಿ ವಿನಿತ್ ಕುಮಾರ್ ಊಂತನಾಜೆ, ಲಕ್ಷ್ಮಿ ನಾರಾಯಣ ಭಜನಾ ಮಂದಿರದ ಕಾರ್ಯದರ್ಶಿ ಗಂಗಾಧರ ಗೌಡ ದಂಡುಗ ಉಪಸ್ಥಿತರಿದ್ದರು.

ಪ್ರವೀಣ್ ಕೊಯ್ಯೂರು ಹಾಗೂ ಕೇವನ್ ತೀರ್ಪುಗಾರರಾಗಿ ಪಂದ್ಯಾಟವನ್ನು ಮುನ್ನಡೆಸಿದರು. ಜಗದೀಶ್ ಬಾರಿಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts

ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುವ ಉದ್ದೇಶ ಹಾಗೂ ಆದರ್ಶ ಗಣೇಶೋತ್ಸವದ ಆಚರಣೆ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮಾಹಿತಿ

Suddi Udaya

ನಾರಾವಿ ಭಾರತೀಯ ಜೈನ್ ಮಿಲನ್ ವತಿಯಿಂದ ವಿಶೇಷ ಆಟಿದ ಕೂಟ, ಆಹಾರೋತ್ಸವ, ವಸ್ತು ಪ್ರದರ್ಶನ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಎಸ್ .ಡಿ.ಎಂ. ಶಿಕ್ಷಣ ಸಂಸ್ಥೆ ವತಿಯಿಂದ ಚಾಲಕರಿಗೆ ಕಾರ್ಯಾಗಾರ

Suddi Udaya

ಮಚ್ಚಿನ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಮಲವಂತಿಗೆ: ಹಿರಿಯ ಕಂಬಳ ಓಟಗಾರ , ಸಾಧಕ ಕುದ್ಮಾನ್ ನಿವಾಸಿ ಲೋಕಯ್ಯ ಗೌಡ ನಿಧನ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಸುಲ್ಕೇರಿಮೊಗ್ರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ನವೀನ್ ಕೆ. ಸಾಮಾನಿ ಬೆಂಬಲ

Suddi Udaya
error: Content is protected !!