September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುಕ್ಕೇಡಿ: ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಪೋಟ ಪ್ರಕರಣ: ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

ಕುಕ್ಕೇಡಿ ಗ್ರಾಮದ ಕಡ್ತ್ಯಾರು ಸುಡುಮದ್ದು ತಯಾರಿಕ ಘಟಕದಲ್ಲಿ ನಡೆದ ಸ್ಪೋಟದ ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೇಟಿ ನೀಡಿದರು. ದುರ್ಘಟನೆ ಯಿಂದ ಮೂವರು ಕಾರ್ಮಿಕರ ಜೀವ ಹಾನಿಯಾಗಿದ್ದು.ಸ್ಪೋಟದಿಂದ ಹಾನಿಯಾದ ಸಮೀಪದ ಮನೆಗಳಿಗೂ ಭೇಟಿ ನೀಡಿದರು.

ನಂತರ ಮಾತನಾಡಿ ಈಗಾಗಲೇ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಆಸ್ಪತ್ರೆಗೆ ಬೇಟಿ ಕೊಟ್ಟಿದ್ದೇನೆ. ಸರಿಸುಮಾರು 24 ಲೈಸೆನ್ಸ್ ತಾಲೂಕಿನಲ್ಲಿ ಇದೆ, ಅದರಲ್ಲಿ ಮೊನ್ನೆ ನಡೆದಂತಹ ಆನೇಕಲ್ಲು ಘಟನೆ ಆದ ಮೇಲೆ ಎಲ್ಲರ ಜಾಗ ಪರಿಶೀಲನೆ ಮಾಡಿದ್ದಾರೆ, ಎಲ್ಲರ ಲೈಸೆನ್ಸ್ ನ್ನು ಕೂಡ ಪರಿಶೀಲನೆ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ರು. ಮಾರ್ಚ್ ವರೆಗೆ ಲೈಸೆನ್ಸ್ ಅವಕಾಶ ಇತ್ತು ಎಂಬ ಮಾಹಿತಿಯನ್ನು ಕೊಟ್ಟಿದ್ದಾರೆ. ಎಲ್ಲಾ ತನಿಖಾ ತಂಡಗಳು ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದೆ. ಸುತ್ತಮುತ್ತಲಿನ ಮನೆಗಳಿಗೂ ಭೇಟಿ ಕೊಟ್ಟಿದ್ದೇನೆ, ಹಾನಿಯಾದ ಮನೆಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವಂತಹ ಕೆಲಸವನ್ನು ಮಾಡುತ್ತೇನೆ. ಅದರೊಂದಿಗೆ ಮೃತ ಕಾರ್ಮಿಕರಿಗೂ ಕೂಡ ಪರಿಹಾರ ಸರ್ಕಾರ ಕೊಡಬೇಕು ಎಂದು ಆಗ್ರಹಿಸಿದರು.

Related posts

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಜಯಾನಂದ ಪೂಜಾರಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ನವೀನ್ ಕುಮಾರ್ ಆಯ್ಕೆ

Suddi Udaya

ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಿಂದ ಈದ್ ಮಿಲಾದ್ ರ್‍ಯಾಲಿ

Suddi Udaya

ಬೆಳ್ತಂಗಡಿ : ಎಸ್.ಐ.ಟಿ ಕಚೇರಿಗೆ ಆಗಮಿಸಿ ದೂರು ನೀಡಿದ ಹೋರಾಟಗಾರರ ತಂಡ

Suddi Udaya

ಬಂಗಾಡಿ ಪರಿಸರದಲ್ಲಿ ನೆಟ್‌ವರ್ಕ್ ಸಮಸ್ಯೆ: ಬ್ಯಾಂಕ್ ವ್ಯವಹಾರಕ್ಕಾಗಿ ಗ್ರಾಹಕರ ಪರದಾಟ

Suddi Udaya

ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವದ ಪೂರ್ವಭಾವಿ ಸಭೆ

Suddi Udaya

ಧರ್ಮಸ್ಥಳ: ಕುಡುಮಶ್ರೀ ಟೈಗರ್ಸ್ ನಿಂದ 8ನೇ ವರ್ಷದ ಅದ್ದೂರಿಯ ಪಿಲಿಏಸ; ಸೆ.27-29: ಊದುಪೂಜೆ, ಹುಲಿಕುಣಿತ, ವೈಭವದ ಮೆರವಣಿಗೆ

Suddi Udaya
error: Content is protected !!