32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಂದಾರು: ಸಂವಿಧಾನ ಜಾಗೃತಿ ಜಾಥ

ಬಂದಾರು: ಭಾರತ ಸಂವಿಧಾನ ಅಂಗೀಕಾರಗೊಂಡ 75ನೇ ವರ್ಷದ ಆಚರಣೆಯ ಪ್ರಯುಕ್ತ “ಸಂವಿಧಾನ ಜಾಗೃತಿ ಜಾಥವು ಬಂದಾರು ಪಂಚಾಯತ್ ನಲ್ಲಿ ಫೆ 13 ರಂದು ನಡೆಯಿತು.

ಬಂದಾರು ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ಬಳಿಯಿಂದ ಗ್ರಾಮ ಪಂಚಾಯತ್ ವರೆಗೆ ಕಾಲ್ನಡಿಗೆ ಮೆರವಣಿಗೆಯ‌ ಜಾಥಾ ಮೂಲಕ ಬರಮಾಡಿಕೊಳ್ಳಲಾಯಿತು. ನಂತರ ಗ್ರಾಮ ಪಂಚಾಯತ್ ನ ಆವರಣದಲ್ಲಿ ಕಾರ್ಯಕ್ರಮ ನೆರವೇರಿಸಲಾಯಿತು. ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಇವರ ಸಮ್ಮುಖದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸರಕಾರಿ ಪ್ರೌಢ ಶಾಲೆ ಪೆರ್ಲ ಬೈಪಾಡಿ ಹಾಗೂ ಬುಳೆರಿ ಮೊಗ್ರು ಮತ್ತು ಬಂದಾರು, ಮೊಗ್ರು ಗ್ರಾಮದ ವ್ಯಾಪ್ತಿಯ ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಪುರೋಷತ್ತಮ ಜಿ ಕಾರ್ಯಕ್ರಮ ನಿರೂಪಿಸಿದರು, ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾವತಿ, ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಿರಿಯರಾದ ನಿವೃತ ಬ್ಯಾಂಕ್ ಮ್ಯಾನೇಜರ್ ಪರಮೇಶ್ವರ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷರು ಅಚ್ಚುಶ್ರೀ ಬಾಂಗೇರು ಮತ್ತು ಮುಖಂಡರಾದ ಲೋಕೇಶ್ ಕಣಿಯೂರು ಹಾಗೂ ಶ್ರೀನಿವಾಸ ಪುನರಡ್ಕ. ಮಾನವ ಬಂದುತ್ವ ವೇದಿಕೆ ಸಂಚಾಲಕರದ ಚೆನ್ನಕೇಶವ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ನಿತಿನ್ ಕುಮಾರ್ ಸಂವಿಧಾನದ ಕುರಿತಾದ ಪ್ರಾಸ್ತವಿಕವಾಗಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, , ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಸಹಾಯಕರು, ಬಂದಾರು ಮೊಗ್ರು ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರೌಡ ಶಾಲಾ ಮಕ್ಕಳಿಗೆ ಸಂವಿಧಾನದ ಬಗ್ಗೆ ಸ್ವರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Related posts

ಅಂತರ್ ಪಾಲಿಟೆಕ್ನಿಕ್ ತಾಂತ್ರಿಕ ಪ್ರದರ್ಶನ: ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya

ಮುಂಡಾಜೆ: ಮಕ್ಕಳು ಇಲ್ಲದ ಕೊರಗು; ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಬೆಳ್ತಂಗಡಿ: ಶಶಾಂಕ ಕುಳಮರ್ವ ರವರಿಗೆ ಸುರತ್ಕಲ್ ಎನ್.ಐ.ಟಿ.ಕೆ. ಯಿಂದ ಪಿ.ಎಚ್.ಡಿ. ಪದವಿ

Suddi Udaya

ಕಲ್ಮoಜದಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ

Suddi Udaya

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಲಾಯಿಲ: ಕೊರಂ ಕೊರತೆಯಿಂದ ಮುಂದೂಡಲಾಗಿದ್ದ ಗ್ರಾ.ಪಂ. ಸಾಮಾನ್ಯ ಸಭೆಯು ನ.29 ರಂದು ಯಶಸ್ವಿ

Suddi Udaya
error: Content is protected !!