April 2, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಉಜಿರೆ ಕಾಲೇಜು ವಿದ್ಯಾರ್ಥಿ ವರ್ಷಿತ್ ಹೆಚ್.ಎಂ. ನಾಪತ್ತೆ

ಉಜಿರೆ: ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ವರ್ಷಿತ್ ಹೆಚ್ ಎಂ(19) ಫೆ.16 ರಿಂದ ಕಾಣೆಯಾಗಿದ್ದು ಮಗನನ್ನು ಹುಡುಕಿ ಕೊಡುವಂತೆ ಪೋಷಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವರ್ಷಿತ್ ಹೆಚ್ ಎಂ ಉಜಿರೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಬಿಸಿಎ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಉಜಿರೆಯ ಖಾಸಗಿ ಪಿಜಿಯಲ್ಲಿ ಉಳಿದುಕೊಂಡಿದ್ದರು.

ಫೆ.16 ರಂದು ಬೆಳಾಲು ಆರಿಕೋಡಿಯಿಂದ ಉಜಿರೆಗೆ ಬಂದು ಆತನ ಅಜ್ಜ, ಅಜ್ಜಿಯನ್ನು ಉಜಿರೆಯಿಂದ ಚಿಕ್ಕಮಮಗಳೂರಿಗೆ ತೆರಳುವ ಬಸ್ಸಿಗೆ ಹತ್ತಿಸಿ ತಾನು ಪಿಜಿಗೆ ಹೋಗುವುದಾಗಿ ಹೇಳಿದ್ದಾನೆ.

ಬಳಿಕ ತಾಯಿ ದೂರವಾಣಿ ಕರೆಮಾಡಿದ್ದು ವರ್ಷಿತ್ ನ ಮೊಬೈಲ್‌ ಸ್ವೀಚ್ ಆಫ್ ಆಗಿತ್ತು. ಈ ಬಗ್ಗೆ ಪಿಜಿ ಗೆ ಪೋನ್ ಮಾಡಿ ವಿಚಾರಿಸಿದಾಗ ಪಿಜಿಗೆ ಬಂದಿರುವುದಿಲ್ಲ ಎಂದು ತಿಳಿಸಿದ್ದಾರೆ. ನಂತರ ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರಿಸಲಾಗಿದ್ದು ಆದರೆ ವರ್ಷಿತ್ ಹೆಚ್ ಎಂ ಎಲ್ಲಿಯೂ ಪತ್ತೆಯಾಗಿಲ್ಲ.

ಕಾಣೆಯಾದ ಮಗನನ್ನು ಪತ್ತೆ ಮಾಡಿಕೊಡಬೇಕಾಗಿ ಪೋಷಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿ ಮನವಿ ಮಾಡಿದ್ದಾರೆ.

Related posts

ಉಜಿರೆಯಲ್ಲಿ ಗಾಳಿ- ಮಳೆಗೆ ವಾಹನಗಳ ಮೇಲೆ ಬಿದ್ದ ಮರ, ಒರ್ವರಿಗೆ ಗಾಯ, ಸಂಚಾರ ಅಸ್ತವ್ಯಸ್ಥ

Suddi Udaya

ಸ್ಪಂದನಾ ಸೇವಾ ಸಂಘದ ಯೋಜನೆಯಿಂದ ಚಿಕಿತ್ಸಾ ನೆರವು

Suddi Udaya

ಕಡಿರುದ್ಯಾವರ: ಮಲ್ಲಡ್ಕ ನಿವಾಸಿ ವಾಸು ಗೌಡ ನಿಧನ

Suddi Udaya

ಬೆಳ್ತಂಗಡಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಲೋಕಾಯುಕ್ತ ಅಧಿಕಾರಿಗಳ ಭೇಟಿ: ವಿವಿಧ ವಿಭಾಗಗಳ ಪರಿಶೀಲನೆ

Suddi Udaya

ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ತರಬೇತಿ

Suddi Udaya

ಧರ್ಮಸ್ಥಳ: ಶ್ರೀ. ಮಂ. ಅನುದಾನಿತ ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Suddi Udaya
error: Content is protected !!