32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೆ.24: ಗುರುವಾಯನಕೆರೆಯಲ್ಲಿ ನಿಸರ್ಗ ಆರ್ಕೇಡ್ ಲೋಕಾರ್ಪಣೆ

ಗುರುವಾಯನಕೆರೆ: ಕಳೆದ ಹಲವಾರು ವರ್ಷಗಳಿಂದ ನಿಸರ್ಗ ಕರ್ಟನ್ ಹಾಗೂ ವಾಲ್ ಪೇಪರ್ ಉದ್ಯಮದೊಂದಿಗೆ ಉತ್ತಮ ಗುಣಮಟ್ಟ ಹಾಗೂ ಪ್ರಾಮಾಣಿಕ ಸೇವೆ ನೀಡಿ ಗ್ರಾಹಕರೊಂದಿಗೆ ಉತ್ತಮ ಸಂಭಂಧ ಹೊಂದಿರುವ ನಾಗೇಶ್ ಕೋಟ್ಯಾನ್ ರವರ ನಿಸರ್ಗ ಆರ್ಕೇಡ್‌ನ ಲೋಕಾರ್ಪಣೆ ಹಾಗೂ ಮನೆಯ ಗೃಹಪ್ರವೇಶ ಫೆ.೨೪ ರಂದು ನಡೆಯಲಿದೆ.


ಪ್ರಸಿದ್ದ ಗುರುವಾಯನಕೆರೆಯ ಮುಂಭಾಗದಲ್ಲಿ ನಿರ್ಮಿಸಿರುವ ಮೂರು ಅಂತಸ್ತಿನ ಕಟ್ಟಡಕ್ಕೆ ಉತ್ತಮ ವಿನ್ಯಾಸ ಮಾಡಲಾಗಿದೆ. ಮೊದಲ ಹಾಗೂ ಎರಡನೇ ಮಹಡಿಯಲ್ಲಿ ವಿವಿಧ ಉದ್ಯಮಕ್ಕೆ ಅನುಕೂಲವಾಗುವಂತೆ ಕಟ್ಟಡ ನಿರ್ಮಿಸಲಾಗಿದೆ. ಇಗಾಗಲೇ ಬಾಡಿಗೆಗೆ ಅಂಗಡಿ ಕೋಣೆಗಳ ಬುಕ್ಕಿಂಗ್ ಪೂರ್ಣಗೊಂಡಿದೆ. ಮೂರನೇ ಮಹಡಿಯಲ್ಲಿ ನಿಸರ್ಗ ಮನೆ ನಿರ್ಮಿಸಿದ್ದು ಮನೆಯು ವಾಸ್ತು ಹಾಗೂ ವಿವಿಧ ವಿನ್ಯಾಸದಿಂದ ಕೂಡಿದ್ದು ಎಲ್ಲರ ಗಮನ ಸೆಳೆಯಲಿದೆ.


ನಿಸರ್ಗ ಆರ್ಕೇಡ್‌ಗೆ ಆಗಮಿಸುವ ಗ್ರಾಹಕರಿಗೆ ಅನುಕೂಲವಾಗುವಂತೆ ಲಿಪ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯಿದೆ. ಭದ್ರತೆಗಾಗಿ ಸಿಸಿ ಕ್ಯಾಮರ ಅಳವಡಿಸಲಾಗಿದೆ.
ಪ್ರಶಾಂತ ಹಾಗೂ ಸುಂದರ ಪರಿಸರದ ಗುರುವಾಯನಕೆರೆಯ ಮುಂಭಾಗದಲ್ಲಿರುವ ನಿಸರ್ಗ ಆರ್ಕೇಡ್‌ಗೆ ಕೆರೆಯ ಸೌಂದರ್ಯದಿಂದ ಇನ್ನಷ್ಟು ಮೆರಗು ಬಂದಿದೆ.
ಫೆ.24 ಶನಿವಾರ ಗಂಟೆ 11.25 ಕ್ಕೆ ವೃಷಭ ಲಗ್ನದಲ್ಲಿ ನಡೆಯುವ ನಿಸರ್ಗ ಆರ್ಕೇಡ್‌ನ ಶುಭಾರಂಭ ಹಾಗೂ ಗೃಹ ಪ್ರವೇಶಕ್ಕೆ ಬಂಧು-ಮಿತ್ರರು ಆಗಮಿಸಿ ಶುಭವನ್ನು ಹಾರೈಸಬೇಕಾಗಿ ಸಂಸ್ಥೆಯ ಮಾಲಕರಾದ ನಾಗೇಶ್ ಕೋಟ್ಯಾನ್ ಮತ್ತು ಶ್ರೀಮತಿ ಯಶ್ಮಿತಾ ನಾಗೇಶ್, ಮಕ್ಕಳಾದ ಮಾ. ಯಶ್ವಿನ್ ಎನ್, ಮಾ ಯುವಿನ್ ಎನ್. ಪ್ರಕಟಣೆಯಲ್ಲಿ ತಿಳಿಸಿದರು.

ಬೆಳಿಗ್ಗೆ ಗಂಟೆ 10.00ಕ್ಕೆ ನಿಸರ್ಗ ಆರ್ಕೇಡ್ ಉದ್ಘಾಟನೆ, ದಿವಾ ಗಂಟೆ 11.25ಕ್ಕೆ ವೃಷಭ ಲಗ್ನದಲ್ಲಿ ಗೃಹ ಪ್ರವೇಶ, ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಗಂಟೆ 5.30 ಕ್ಕೆ ಕುಣಿತಾ ಭಜನೆ, ಸಂಜೆ 7.30ಕ್ಕೆ ದುರ್ಗಾ ಪೂಜೆ ನಡೆಯಲಿದೆ.

Related posts

ನಾರಾವಿ ಉ.ಪ್ರಾಥಮಿಕ ಶಾಲೆ: ಪುಸ್ತಕ ವಿತರಣೆ

Suddi Udaya

ಐಡಿಎಫ್ ಡಾಡ್ಜ್ ಬಾಲ್ ಫೇಡರೇಷನ್ ಕಪ್ 2024 ಪಂದ್ಯಾಟದಲ್ಲಿ ಅಭಿಶೃತ್ ಇಳಂತಿಲ ಇವರ ನಾಯಕತ್ವದ ಕರ್ನಾಟಕ ತಂಡಕ್ಕೆ ತೃತೀಯ ಪ್ರಶಸ್ತಿ

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕರಾವಳಿ ಪ್ರಜಾ ಧ್ವನಿ ಯಾತ್ರೆ ಅಳದಂಗಡಿ ಬೃಹತ್ ಸಾರ್ವಜನಿಕ ಸಭೆ

Suddi Udaya

ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ಎಸ್.ಡಿ.ಎಂ. ವಿದ್ಯಾರ್ಥಿಗೆ ಪ್ರಶಂಸಾ ಪ್ರಮಾಣಪತ್ರ

Suddi Udaya

ಕೊಯ್ಯೂರು ರಸ್ತೆಗೆ ಬಿದ್ದ ಬೃಹತ್ ಮರ: ರಸ್ತೆ ಸಂಚಾರ ಅಸ್ತವ್ಯಸ್ಥ

Suddi Udaya
error: Content is protected !!