ಮಾಲಾಡಿ : ಇಲ್ಲಿಯ ಗ್ರಾಮ ಪಂಚಾಯತದ 2023-24ನೇ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಫೆ.22ರಂದು ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಸಾಮಾಜಿಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ವಿದ್ಯಾ ಪಿ.ಡಿ ರವರು ಭಾಗವಹಿಸಿ ಗ್ರಾಮ ಸಭೆಯನ್ನು ಮುನ್ನಡೆಸಿದರು.
‘ಒಂದು ಹೆಜ್ಜೆ ಸ್ವಚ್ಛತೆಯೆಡೆಗೆ’ ರಸ್ತೆ ಬದಿಗಳಲ್ಲಿ ಕಸ ಹಾಕುವವರ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿ ಕಾಲೇಜು ವಿದ್ಯಾರ್ಥಿಯೋರ್ವಳು ಪಂಚಾಯತ್ ಗೆ ಆಗ್ರಹಿಸಿದಳು.
ದೇಜಪ್ಪ ಮೂಲ್ಯರ ಮನೆ ಬಳಿ ತಂತಿಗಳು ಜೋತು ಬಿದ್ದಿದ್ದು ಸರಿಪಡಿಸುವಂತೆ ಮೆಸ್ಕಾಂ ಇಲಾಖೆ ಗೆ ಗ್ರಾಮಸ್ಥರು ಮನವಿ ಮಾಡಿದರು. ಸೋಣಂದೂರು ಅಂಗನವಾಡಿ ಬಳಿ ಹಳೆ ಬಾವಿವಿದ್ದು ಅದನ್ನು ಮುಚ್ಚುವಂತೆ ಮನವಿ ಮಾಡಲಾಯಿತು.
ಮಾರ್ಗದರ್ಶಿ ಅಧಿಕಾರಿ ಮಾತನಾಡಿ ಗ್ರಾಮ ಸಭೆಯು ಆರೋಗ್ಯಕರವಾದಂತಹ ವಿಚಾರದ ಕುರಿತಾಗಿ ಉತ್ತಮವಾಗಿ ನಡೆಯಿತು ಎಂದು ಹೇಳಿದರು.
ಉಪಾಧ್ಯಕ್ಷರಾದ ಶ್ರೀಮತಿ ಸೆಲೆಸ್ಟಿನ್ ಡಿಸೋಜ, ಸದಸ್ಯರಾದ ಎಸ್ ಬೇಬಿ ಸುವರ್ಣ, ಶ್ರೀಮತಿ ಸುಸ್ಸಾನ, ದಿನೇಶ್ ಡಿ. ಕರ್ಕೇರ, ಕೆ ಸುಧಾಕರ ಆಳ್ವ, ಉಮೇಶ್, ಬೆನಡಿಕ್ಟ್ ಮಿರಾಂದ, ವಸಂತ ಪೂಜಾರಿ, ಶ್ರೀಮತಿ ಜಯಂತಿ, ಶ್ರೀಮತಿ ತುಳಸಿ ಬಿ, ರಾಜೇಶ್, ಶ್ರೀಮತಿ ಫರ್ಜನಾ, ಶ್ರೀಮತಿ ವಿದ್ಯಾ ಪಿ. ಸಾಲಿಯಾನ್, ಶ್ರೀಮತಿ ಗುಲಾಬಿ, ಶ್ರೀಮತಿ ಐರಿನ್ ಮೋರಾಸ್, ದಿನೇಶ್, ಶ್ರೀಮತಿ ರುಬೀನಾ, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ರೈ ಸ್ವಾಗತಿಸಿ, ಅನುಪಾಲನ ವರದಿ ವಾಚಿಸಿ, ಧನ್ಯವಾದವಿತ್ತರು.