23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಹೊಸಂಗಡಿಯಲ್ಲಿ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ವಶ

ಹೊಸಂಗಡಿ : ಇಲ್ಲಿಯ ಹೊಸಂಗಡಿ ಎಂಬಲ್ಲಿ, ಕೆಎ 07 ಬಿ 5412 ನೇ ನೋಂದಣಿಯ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಫೆ.27ರಂದು ಮಧ್ಯಾಹ್ನ ಶ್ರೀಶೈಲ ಡಿ ಮುರಗೋಡ್‌ ಪಿಎಸ್‌ಐ (ಕಾ.ಸು) ವೇಣೂರು ಹಾಗೂ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ. ಕಾಶಿಪಟ್ಣ ಗ್ರಾಮದ ಮಣಿಕಂಠ ನಿವಾಸಿ ವಸಂತ(27ವ) ಎಂಬಾತನು, ಯಾವುದೇ ಪರವಾನಗಿ ಇಲ್ಲದೇ, ಎಲ್ಲಿಂದಲೋ ನದಿಯಿಂದ ಮರಳನ್ನು ಕಳವು ಮಾಡಿ, ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದು , ಟಿಪ್ಪರ್‌ ಲಾರಿಯನ್ನು ಮರಳಿನ ಸಮೇತ ಸ್ವಾಧೀನಪಡಿಸಿಕೊಂಡು, ಅರೋಪಿಯ ವಿರುದ್ದ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸ್ವಾಧೀನಪಡಿಸಿದ ಟಿಪ್ಪರ್‌ ಲಾರಿಯ ಅಂದಾಜು ಮೌಲ್ಯ ರೂ 7 ಲಕ್ಷ ಹಾಗೂ 3 ಯೂನಿಟ್‌ ಮರಳಿನ ಅಂದಾಜು ಮೌಲ್ಯ ರೂ 8 ಸಾವಿರ ಆಗಬಹುದು ಎಂದು ಅಂದಾಜಿಸಲಾಗಿದೆ.

Related posts

ಲಾಯಿಲ: ರಬ್ಬರ್ ತೋಟಕ್ಕೆ ಬೆಂಕಿ: 75 ರಷ್ಟು ಮರಕ್ಕೆ ಹಾನಿ

Suddi Udaya

ಅಳದಂಗಡಿ: ಸತ್ಯದೇವತೆ ಎಂಟರ್ ಪ್ರೈಸಸ್ ಶುಭಾರಂಭ

Suddi Udaya

ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ದಶಮ ಸಂಭ್ರಮದ ಸಭಾ ಕಾರ್ಯಕ್ರಮ

Suddi Udaya

ಕೊಕ್ಕಡದಲ್ಲಿ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ

Suddi Udaya

ಉಜಿರೆ: ಶ್ರೀ ಶಾರದಾ ಪೂಜೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶಿರಾಡಿ ಘಾಟ್ ಚೆಕ್ ಪೋಸ್ಟ್ ಬಳಿ ಸರಣಿ ಅಪಘಾತ

Suddi Udaya
error: Content is protected !!