ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Suddi Udaya

ಧರ್ಮಸ್ಥಳ: ಇಲ್ಲಿನ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.28 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಡೆಯಿತು.

ಮುಖ್ಯ ಶಿಕ್ಷಕ ಸುಬ್ರಹ್ಮ ಣ್ಯ ರಾವ್ ಅವರು ಮಾತನಾಡಿ, ಭಾರತ ರತ್ನ ಸರ್ ಸಿ ವಿ ರಾಮನ್ ಅವರ ಜನ್ಮದಿನದ ಬಗ್ಗೆ ಮಾತನಾಡಿದರು. “ಭಾರತ ಕಂಡ ಶ್ರೇಷ್ಠ ವಿಜ್ಞಾನಿಯ ಜನ್ಮ ದಿನಾಚರಣೆಯ ನಿಮಿತ್ತ ಈ ದಿನವನ್ನು ನಾವು ನೆನಪಿಸಿಕೊಳ್ಳುವುದರ ಜೊತೆಗೆ ನಾವು ಕಂಡ ವಿಚಾರದ ಬಗ್ಗೆ ಪ್ರಶ್ನಿಸುವ, ವಿಮರ್ಶಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವೈಚಾರಿಕತೆಯನ್ನು ಬೆಳೆಸಿಕೊಂಡಾಗ ಮಹಾನ್ ಸಂಶೋಧನೆಗಳಿಗೆ ನಾಂದಿಯಾಗುತ್ತದೆ” ಎಂದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ವೈಚಾರಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಪ್ರತಿಜ್ಞಾ ವಿಧಿಯನ್ನು ಶಿಕ್ಷಕಿ ಉಷಾ ಕುಮಾರಿ ಬೋಧಿಸಿದರು.

ಶಿಕ್ಷಕ ಶೇಖರ್ ಗೌಡ ನಿರೂಪಿಸಿದರು. ಶಿಕ್ಷಕಿ ಕಾವ್ಯಾ ಸ್ವಾಗತಿಸಿ, ಧನ್ಯವಾದವಿತ್ತರು.

ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಾಯಿತು.

Leave a Comment

error: Content is protected !!