September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಅಡಿಕೆ ಆಮದು ನಿಷೇಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಮಾ.7 ರಂದು ದ.ಕ ಜಿಲ್ಲಾಧಿಕಾರಿ ಕಛೇರಿ ಎದುರು ಬೃಹತ್ ಪ್ರತಿಭಟನೆ

ಬೆಳ್ತಂಗಡಿ: ದ.ಕ ಜಿಲ್ಲೆಯಲ್ಲಿ ಅಡಿಕೆಯ ಆಮದಿನಿಂದಾಗಿ ಅಡಿಕೆಯ ಬೆಲೆ ಕುಸಿದು ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ರೈತ ಒಕ್ಕೂಟವು ಅಡಿಕೆ ಆಮದು ನಿಷೇಧಿಸುವಂತೆ ಹಾಗೂ ಇತರೆ ಬೇಡಿಕೆಗಳೊಂದಿಗೆ ಮಾ. 7 ರಂದು ಗುರುವಾರದಂದು ದ.ಕ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಿದ್ದಾರೆ ಎಂದು ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಆಸ್ವಾಲ್ಡ್ ಫೆರ್ನಾಂಡಿಸ್ ಹೇಳಿದ್ದಾರೆ.


ಅವರು ಮಾ.2ರಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಾಗತೀಕರಣದಿಂದ ವಿಶ್ವ ವ್ವಾಣಿಜ್ಯ ವ್ಯಾಪಾರ ಸಂಸ್ಥೆ WTO ಒಪ್ಪಂದದೊಂದಿಗೆ ರೈತ ವಿರೋಧಿ ನೀತಿಗಳಿಂದಾಗಿ ಸಾಲಗಾರರಾಗಿ ಮೂರುವರೆ ಲಕ್ಷಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಅಡಿಕೆ ಹಾಗೂ ಬೆಳೆಗಳು ಮುಖ್ಯ ಆರ್ಥಿಕ ಬೆಳೆಗಳಾಗಿ ರೈತರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸದೃಢವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಎಳೆ ಚುಕ್ಕಿ ರೋಗ ಹಳದಿ ಎಲೆ ರೋಗ ಹಾಗೂ ತೆಂಗಿನ ಬೆಲೆಕುಸಿತದಿಂದಾಗಿ ನಮ್ಮ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿಯು ಉಂಟಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರೈತ ಸಂಘಗಳ ಒಕ್ಕೂಟವು ರಚನೆಯಾಗಿ ರೈತರ ಸಮಸ್ಯೆಗಳಿಗೆ ಪರಿಹಾರವನ್ನು ತರುವ ಪ್ರಯತ್ನವು ಪ್ರಾರಂಭವಾಗಿದೆ ಎಂದರು.


ಸುರೇಶ್ ಭಟ್ ಕೊಜಂಬೆ ಮಾತನಾಡಿ, ಅಡಿಕೆಯ ಆಮದಿನಿಂದ ಬೆಲೆ ಕುಸಿತ ಉಂಟಾಗಿ ಜಿಲ್ಲೆಯ ರೈತರಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ. ಅಡಿಕೆ ಆಮದುನಲ್ಲಿ ದೊಡ್ಡ ಮಾಫಿಯಾ ಕಾಯ೯ನಿವ೯ಹಿಸುತ್ತಿದೆ
ಅಡಿಕೆ ಹಾಗೂ ತೆಂಗಿನ ಆಮದಲ್ಲೂ ಸಂಪೂರ್ಣವಾಗಿ ನಿಷೇಧಿಸಬೇಕು.ಕಾರ್ಪೊರೇಟ್ ಕಂಪನಿಗಳ 14 ಲಕ್ಷ ಕೋಟಿ ಸಾಲ ಮನ್ನ ಮಾಡಿದ ಸರಕಾರದ ತಪ್ಪು ನೀತಿಯಿಂದಾಗಿ ಸರಕಾರವ ರೀತಿಯಿಂದಾಗಿ ರೈತರು ಸಾಲಗಾರರಾಗಿದ್ದಾರೆ ಆದ್ದರಿಂದ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.


ಸಂಯೋಜಕ ಸನ್ನಿ ಡಿ ಸೋಜ ಮಾತನಾಡಿ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು
ಕಾನೂನುಬದ್ಧಗೊಳಿಸಬೇಕು., ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕು, ಕೃಷಿಕರು ಮತ್ತು ಕೃಷಿಕಾರ್ಮಿಕರಿಗೆ ಪಿಂಚಣಿ ನೀಡಬೇಕು. ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು, ರೈತ ಹೋರಾಟಗಾರರ ಮೇಲಿರುವ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು. ಲಖೀಮ್ ಪುರ ಖೇರಿ ಹಿಂಸಾಚಾರದಲ್ಲಿ ಬಲಿಪಶುಗಳಾದವರಿಗೆ ನ್ಯಾಯ ಸಿಗಬೇಕು, 2013ರ ಭೂಸ್ವಾಧೀನ ಕಾಯ್ದೆಯನ್ನು (ಭೂ ಸ್ವಾಧೀನದ ವೇಳೆ ಸರಿಯಾದ ಪರಿಹಾರ, ಪಾರದರ್ಶಕತೆ) ಪುನಃಸ್ಥಾಪಿಸಬೇಕು, ವಿಶ್ವವಾಣಿಜ್ಯ ಸಂಸ್ಥೆಯಿಂದ ಭಾರತ ಹೊರಬರಬೇಕು ಎಂದು ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಕೆ.ಎಂ ರಮ್ಲ ಉಪಸ್ಥಿತರಿದ್ದರು.

Related posts

ಮಂಗಳೂರು ಕಥೋಲಿಕ್ ಸಭಾ ವತಿಯಿಂದ ಬೆಳ್ತಂಗಡಿ ಪತ್ರಕರ್ತ ಹೆರಾಲ್ಡ್ ಪಿಂಟೊ ರಿಗೆ ಸನ್ಮಾನ ಕಾರ್ಯಕ್ರಮ

Suddi Udaya

ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓರಿಯೆಂಟೇಷನ್ ಕಾರ್ಯಕ್ರಮ.

Suddi Udaya

ಮಡಂತ್ಯಾರು ವಲಯದ ಮಹಿಳಾ ವಲಯ ಸಮಿತಿ ರಚನಾ ಸಭೆ

Suddi Udaya

ಓಡಿಲ್ನಾಳ : ಯುವವಾಹಿನಿ ಡೆನ್ನಾನ ಡೆನ್ನನ 2024 ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪಿಯುಸಿ ಫಲಿತಾಂಶ: ವಾಣಿಜ್ಯ ವಿಭಾಗದಲ್ಲಿ ವರ್ಷ ಅವರಿಗೆ ಶೇ 96.66 ಫಲಿತಾಂಶ

Suddi Udaya

ಉಜಿರೆ ಗ್ರಾ.ಪಂ.ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕರ್ಬಾರಿ ರವರು ಭೇಟಿ ಗ್ರಾಮ ಪಂಚಾಯತ್ ಕಾರ್ಯ ವೈಖರಿಗೆ ಮೆಚ್ಚುಗೆ

Suddi Udaya
error: Content is protected !!