September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಗುರುವಾಯನಕೆರೆ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ ರತ್ನಗಿರಿಯ ಪುನರ್ ಪ್ರತಿಷ್ಠಾ ಮಹೋತ್ಸವ: ದೈವರಾಧನೆಯ ಮಹಾ ಸಮ್ಮೇಳನ ಪರ್ವ- 2024, ಸಂಪನ್ನ ಸರಕಾರಕ್ಕೆ ನಿರ್ಣಯ ಮಂಡನೆ

ಗುರುವಾಯನಕೆರೆ: ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ ರತ್ನಗಿರಿ ಗುರುವಾಯನಕೆರೆ ಇದರ ಜೀರ್ಣೋದ್ದೊರ ಹಾಗೂ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ಪರ್ವ ದೈವರಾಧನೆಯ ಮಹಾ ಸಮ್ಮೇಳನದ ಸಮಾರೋಪ ಸಮಾರಂಭ ಮಾ2 ರಂದು ನಡೆಯಿತು.

ಪ್ರಸಿದ್ದ ವಾಗ್ಮಿ,ಲೇಖಕರು ಶ್ರೀಕಾಂತ್ ಶೆಟ್ಟಿ ತುಳುನಾಡಿನಲ್ಲಿ ದೈವರಾಧನೆಯ ಕುರಿತು ಉಪನ್ಯಾಸ ನೀಡಿದರು.

ಸನ್ಯಾಸಿ ಗುಳಿಗ ಕ್ಷೇತ್ರದ ಆಡಳಿತ ಮೊಕ್ತೇಸರ ವಿಶ್ವೇಶ್ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸುಮಾರು 600 ವರ್ಷಗಳ ಇತಿಹಾಸವಿದೆ. ಕಡ್ಲಗುಡ್ಡೆ ಎಂಬುದು ಹಿಂದಿನ ಹೆಸರು.1987 ನಂತರ ಈ ಕ್ಷೇತ್ರದಲ್ಲಿ ನಿರಂತರ ಆರಾಧನೆ ನಡೆಯುತ್ತ ಬರುತ್ತಿದೆ.2005 ರಲ್ಲಿ ಗುಳಿಗ ಪ್ರತಿಷ್ಠಾ ನಡೆಯಿತು.

ಪ್ರತಿವರ್ಷ ನಿರಂತರವಾಗಿ ಕ್ಷೇತ್ರದಲ್ಲಿ ಗಗ್ಗರ ಸೇವೆ ನಡಿತಾ ಬರುತ್ತಿದೆ. ಊರಿಗೆ ಬರುವ ಕಷ್ಟ ನಷ್ಟಗಳು ದೂರವಾಗಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿದೆ.ಅರ್ಥಪೂರ್ಣ ಕಾರ್ಯಕ್ರಮ ಇಲ್ಲಿ ನಡೆದಿದೆ.ನಾಗಾರಾಧನೆ ಮತ್ತು ದೈವ- ದೇವರ ಆರಾಧನೆಯ ಅನುಗ್ರಹದಿಂದ ಈ ಕ್ಷೇತ್ರ ಬೆಳಗಿದೆ ಎಂದರು. ಪರ್ವ ದೈವರಾಧನೆಯ ಮಹಾ ಸಮ್ಮೇಳನದ ಪ್ರಧಾನ‌ ಸಂಚಾಲಕ ಸಂಪತ್ ಬಿ ಸುವರ್ಣ ಸಮ್ಮೇಳನದ ನಿರ್ಣಯ ಮಂಡಿಸಿದರು.

ವೇದಿಕೆಯಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ರಂಜಿತ್ ಹೆಚ್.ಡಿ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಆಡಳಿತ ಮೊಕ್ತೇಸರ ವಿಶ್ವೇಶ್ ಕಿಣಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಪರ್ವ ದೈವರಾಧನೆಯ ಮಹಾ ಸಮ್ಮೇಳನದ ಪ್ರಧಾನ‌ ಸಂಚಾಲಕ ಸಂಪತ್ ಬಿ ಸುವರ್ಣ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸಮಿತಿಗಳ ಸಂಚಾಲಕರನ್ನು ಗೌರವಿಸಲಾಯಿತು.

Related posts

ಕುವೆಟ್ಟು :ಪಯ್ಯೋಟ್ಟು ನಿವಾಸಿ ಡೀಕಯ್ಯ ಮೂಲ್ಯ ನಿಧನ

Suddi Udaya

ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 101 ಎಳನೀರು ಅಭಿಷೇಕ, ನವಕ ಕಲಶ ಅಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಏಪ್ರಿಲ್ 29: ಧರ್ಮಸ್ಥಳದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ

Suddi Udaya

‘ಎಸ್.ಡಿ.ಎಂ. ಉದ್ಯೋಗಂ – 2026’ ಬೃಹತ್ ಉದ್ಯೋಗ ಮೇಳ ಸಂಪನ್ನ

Suddi Udaya

ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್. ಪದ್ಮಗೌಡ, ಉಪಾಧ್ಯಕ್ಷರಾಗಿ ದಿನೇಶ್ ಕೋಟ್ಯಾನ್

Suddi Udaya

ಚಾರ್ಮಾಡಿ ಮಠದಮಜಲು ಹತ್ತಿರ ಇಂದ್ ಮರವನ್ನು ದೂಡಿ ಹಾಕಿದ ಆನೆ ವಿದ್ಯುತ್ ಫೀಡರ್ ಗೆ ಹಾನಿ: ದುರಸ್ತಿ ಪಡಿಸಿದ ಮೆಸ್ಕಾಂ ಇಲಾಖೆ

Suddi Udaya
error: Content is protected !!