ಸುಲ್ಕೇರಿ : ಸುಲ್ಕೇರಿ ಗ್ರಾಮ ಪಂಚಾಯತ್ ನಲ್ಲಿ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಅಡಿಕೆ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವು ಮಾ.4ರಂದು ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗಿರಿಜಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಿ. ಪಿ..ಸಿ.ಆರ್.ಐ ವಿಟ್ಲ ಇಲ್ಲಿನ ವಿಜ್ಞಾನಿಗಳಾದ ಡಾ. ಭವಿಷ್ಯ ಇವರು ಮಾಹಿತಿ ನೀಡಿದರು.
ಉಪಾಧ್ಯಕ್ಷರಾದ ಶುಭಕರ್ ಪೂಜಾರಿ, ಸದಸ್ಯರಾದ ರವಿ ಪೂಜಾರಿ, ನಾರಾಯಣ ಪೂಜಾರಿ, ಶ್ರೀಮತಿ ಯಶೋದಾ ಬಂಗೇರ , ಶ್ರೀಮತಿ ಪ್ರೇಮಾ, ಪಂಚಾಯತ್ ಕಾರ್ಯದರ್ಶಿ ಕೊರಗಪ್ಪ ನಾಯ್ಕ, ತೋಟಗಾರಿಕಾ ಅಧಿಕಾರಿಗಳಾದ ಭೀಮ್ ರಾಯ್, ಮಹಾವೀರ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗಾಯತ್ರಿ ಪಿ ಸ್ವಾಗತಿಸಿ, ವಂದಿಸಿದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡರು. ಎಲೆಚುಕ್ಕೆ ರೋಗದ ಔಷಧ ವಿತರಿಸಲಾಯಿತು.