September 6, 2026
ಗ್ರಾಮಾಂತರ ಸುದ್ದಿಪ್ರಮುಖ ಸುದ್ದಿ

ಕೊಡಗು ವಿ.ವಿ ಸಿಂಡಿಕೇಟ್ ಸೆನೆಟ್ ಸದಸ್ಯರಾಗಿ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ ಎನ್ ಜನಾರ್ದನ್ ನೇಮಕ

ಬೆಳ್ತಂಗಡಿ: ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸೆನೆಟ್ ಸದಸ್ಯನಾಗಿ ಶ್ರಿ ಕ್ಷೇತ್ರ ಧರ್ಮಸ್ಥಳದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ ಎನ್ ಜನಾರ್ದನ್ ನೇಮಕಗೊಂಡಿದ್ದಾರೆ.

ಇವರು ರುಡ್ ಸೆಟ್,ಮತ್ತು ಅರ್ ಸೆಟಿಗಳ ರಾಷ್ಟ್ರೀಯ ನಿರ್ದೇಶಕರಾಗಿದ್ದು ದೇಶದಾದ್ಯಂತ 560 ಕ್ಕು ಅಧಿಕ ಅರ್ ಸೆಟಿಗಳ ಸ್ಥಾಪನೆಗೆ ಅರ್ ಸೆಟಿ ಅದ್ಯಕ್ಷ ಡಾ ಡಿ ವೀರೇಂದ್ರ ಹೆಗ್ಗಡೆಯವರೊಂದಿಗೆ ಶ್ರಮಿಸಿದ್ದರು.ಅರ್ ಸೆಟಿಗಳು ಪ್ರತಿವರ್ಷ 4 ಲಕ್ಷಕ್ಕು ಅಧಿಕ ನಿರುದ್ಯೋಗಿ ಯುವ ಜನತೆಗೆ ತರಬೇತಿ ನೀಡುತ್ತಿದ್ದು ಇದರಲ್ಲಿ ಪ್ರತಿ ವರ್ಷ 3 ಲಕ್ಷಕ್ಕು ಅಧಿಕ ಮಂದಿ ಸ್ವ ಉದ್ಯೋಗಿಗಳಾಗಿ ಸ್ವಂತ ಜೀವನ ನಡೆಸುತ್ತಾರೆ. ಸಿಂಡಿಕೇಟ್ ಬ್ಯಾಂಕ್ ನಲ್ಲಿಸತತ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಇವರು ಬಳಿಕ ಶ್ರಿ ಕ್ಷೇತ್ರ ಧರ್ಮಸ್ಥಳದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಅಲ್ಲದೆ ಪ್ರಸ್ತುತ ಡಾ ಡಿ ವೀರೇಂದ್ರ ಹೆಗ್ಗಡೆಯವರ ರಾಜ್ಯ ಸಬಾಸದಸ್ಯರ ಆಪ್ತ ಕಾರ್ಯದರ್ಶಿ ಯಾಗಿ ನೇಮಕಗೊಂಡಿದ್ದಾರೆ. ಇದೀಗ ಕೊಡಗು ವಿ ವಿ ಸಿಂಡಿಕೇಟ್ ಸದಸ್ಯರಾಗಿ ದೊಡ್ಡ ಗೌರವಕ್ಕೆ ಪಾತ್ರರಾಗಿದ್ದಾರೆ.

Related posts

ಬಂಗಾಡಿ ಅಷ್ಟಪವಿತ್ರ ನಾಗಬ್ರಹ್ಮಲಿಂಗೇಶ್ವರ ದೇವಾಲಯದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಬಂದಾರು ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಕೊಡೆ ವಿತರಣೆ

Suddi Udaya

ಹಿರಿಯ ಧರ್ಮಗುರು ಅಹ್ಮದ್ ಕುಂಞಿ ಮುಸ್ಲಿಯಾರ್ ಬೀಟಿಗೆ ನಿಧನ

Suddi Udaya

ಕಡಿರುದ್ಯಾವರ ಗ್ರಾಮದ ಕುಕ್ಕುದಡಿಯಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ರೂ.1ಕೋಟಿ ಅನುದಾನ–ಶಾಸಕ ಹರೀಶ್ ಪೂಂಜ

Suddi Udaya

ಕೊಕ್ಕಡ: ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ನಾಗಪ್ರತಿಷ್ಠೆ, ಆಶ್ಲೇಷ ಬಲಿ

Suddi Udaya

ಗುರುವಾಯನಕೆರೆ: ವೇದವ್ಯಾಸ ಶಿಶು ಮಂದಿರದಲ್ಲಿ ಆಟಿದ ಕೂಟ

Suddi Udaya
error: Content is protected !!