ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಸಭೆ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಸಭೆಯು ಬಿಜೆಪಿ ಕಾರ್ಯಾಲಯದಲ್ಲಿ ಮಾ. 6 ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ವಹಿಸಿದರು.

ಕಾರ್ಯಕ್ರಮವನ್ನು ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರವರು ದೀಪ ಪ್ರಜ್ವಲಿಸುವ ಮತ್ತು ಭಾರತ ಮಾತೆಗೆ ಪುಷ್ಪಾರ್ಚನೆ ಗೈದು ಮಾತನಾಡಿ ಯುವ ಮೋರ್ಚಾ ಪದಾಧಿಕಾರಿಗಳ ಜವಾಬ್ದಾರಿಗಳು ಹಾಗೂ ಪಕ್ಷಕ್ಕೆ ಯುವಕರ ಪಾತ್ರ ಏನು ಎಂಬುದರ ಬಗ್ಗೆ ವಿವರಿಸಿ ನೂತನ ತಂಡಕ್ಕೆ ಶುಭ ಕೋರಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್ ಮತ್ತು ಯತೀಶ್ ಆರ್ವರ್ ನೂತನ ತಂಡಕ್ಕೆ ಶುಭ ಕೋರಿ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯರವರು ಮಾತನಾಡಿ ಸ್ವಾಮಿ ವಿವೇಕಾನಂದರ ಆದರ್ಶವನ್ನು ಪಾಲನೆ ಮಾಡಿ ಸದೃಢ ಸಮಾಜದಲ್ಲಿ ಯುವ ತಂಡ ಬಲಿಷ್ಠವಾಗಿರಲು ಪದಾಧಿಕಾರಿಗಳ ಸಹಕಾರವನ್ನು ಕೋರಿ ನಮೋ ಯುವ ಭಾರತ್ ಕಾರ್ಯಕ್ರಮದ ಬಗ್ಗೆ ವಿವರಿಸಿದರು.

ಪ್ರಧಾನ ಕಾರ್ಯದರ್ಶಿಗಳಾದ ಭರತ್ ರಾಜ್ ಕೃಷ್ಣಾಪುರ ಸ್ವಾಗತಿಸಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ಧನ್ಯವಾದವಿತ್ತರು.

Related posts

ಶಿಶಿಲ ಸ.ಉ.ಹಿ.ಪ್ರಾ.ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗೇರುಕಟ್ಟೆ ಕುಳಾಯಿ ಶ್ರೀ ಮಹಮ್ಮಾಯಿ ದೇವರಿಗೆ ಗೋಂದಲ ಪೂಜೆ

Suddi Udaya

ನಾರ್ಯ ಪೊದುಂಬಿಲ ಕೆಸರ್ ದ ಕಂಡಡ್ ಪರ್ಬದ ಗೊಬ್ಬು ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆಯ ಸಿದ್ಧವನದಲ್ಲಿ ಶಂಕರ ಜಯಂತಿ

Suddi Udaya

ಬಿ ಆರ್ಕ್ ಫಲಿತಾಂಶ: ಎಕ್ಸೆಲ್ ಗುರುವಾಯನಕೆರೆ ಅದ್ಭುತ ಸಾಧನೆ

Suddi Udaya

ಸಾವ್ಯ ಕರ್ಪೋಟ್ಟು ಅನುರಾಧ ನಿವಾಸದ ಶ್ರೀಮತಿ ರಾಧಾ ಹೃದಯಾಘಾತದಿಂದ ನಿಧನ

Suddi Udaya
error: Content is protected !!