24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳಾಲು ಮೈತ್ರಿ ಯುವಕ ಮಂಡಲ ವತಿಯಿಂದ ಸರಸ್ವತಿ ಹಿ.ಪ್ರಾ. ಶಾಲಾ ಮುಂಭಾಗದಲ್ಲಿ ಬ್ಯಾರಿಕೆಡ್ ಅಳವಡಿಕೆ

ಬೆಳಾಲು : ಸರಸ್ವತಿ ಹಿರಿಯ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸುರಕ್ಷೆಯ ದೃಷ್ಟಿಯಿಂದ ಮೈತ್ರಿ ಯುವಕ ಮಂಡಲ (ರಿ.) ಬೆಳಾಲು ಇದರ ಪ್ರಾಯೋಜಕತ್ವದಲ್ಲಿ ಮಾ.14 ರಂದು 2 ಬ್ಯಾರಿಕೆಡ್ ಅಳವಡಿಸಲಾಯಿತು.

ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಶ್ರೀ ಸೌಧ ಚಾಲನೆ ನೀಡಿದರು. ಯುವಕ ಮಂಡಲದ ಈ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಇನ್ನಷ್ಟು ಸಮಾಜ ಕಾರ್ಯವು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಜತ್ತನ್ನ ಗೌಡ, ಪಂಚಾಯತ್ ಸದಸ್ಯರಾದ ಸತೀಶ್ ಗೌಡ ಎಳ್ಳುಗದ್ದೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಭಾಯಿ, ಯುವಕ ಮಂಡಲ ಗೌರವಾಧ್ಯಕ್ಷರಾದ ರಾಜೇಶ್, ಅಧ್ಯಕ್ಷರಾದ ನಿತಿನ್ ಮೋನಿಶ್, ಸಲಹೆಗಾರರಾದ ಡೀಕಯ್ಯ ಗೌಡ,ಕೇಶವ ಟೈಲರ್, ಶ್ಯಾಮರಾಯ ಆಚಾರ್ಯ ಕಾರ್ಯದರ್ಶಿ ವಿಗ್ನೇಶ್, ಮೆಸ್ಕಾಂ ಸಿಬ್ಬಂದಿ ಆನಂದ, ಬೆಳಾಲು ಸಿ.ಎ. ಬ್ಯಾಂಕ್ ನಿರ್ದೇಶಕರಾದ ವಿಜಯ ಗೌಡ,ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗ, ವಾಹನ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು ಸದಸ್ಯರು, ಯುವಕ ಮಂಡಲ ಸರ್ವ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ ಬೆಳಾಲು ಇದರ ಮುಖ್ಯ್ಯೊಪಾಧ್ಯಾಯರಾದ ಚಿದಾನಂದ ರವರು ಸ್ವಾಗತಿಸಿ, ಬೆಳಾಲು ಸಿ.ಎ ಬ್ಯಾಂಕ್ ನಿರ್ದೇಶಕರಾದ ಸುಲೈಮಾನ್ ಧನ್ಯವಾದವಿತ್ತರು.

Related posts

ವಸಂತ ಬಂಗೇರ ನಿಧನಕ್ಕೆ ಕೆ ಎಸ್ ಎಂ ಸಿ ಎ ಬೆಳ್ತಂಗಡಿ ಧರ್ಮ ಪ್ರಾಂತ್ಯ ಸಂತಾಪ

Suddi Udaya

ಬೆಳ್ತಂಗಡಿ ಪ.ಪಂ. ಮತ್ತು ರಾಜ ಕೇಸರಿ ಸಂಘಟನೆ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನಗೈದು ಮಾದರಿಯಾದ ಸುಪ್ರಾಶ್ವರಾಜ್ ಜೈನ್ ಶಿರ್ಲಾಲು

Suddi Udaya

ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮುಂದೂಡಿಕೆ

Suddi Udaya

ಧರ್ಮಸ್ಥಳ: ನೇತ್ರಾವತಿ ನದಿ ತೀರದಲ್ಲಿ ಸ್ವಚ್ಛತೆ ಮಾಡುವ ಮೂಲಕ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ

Suddi Udaya

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಗೂಡ್ಸ್ ಟೆಂಪೋ

Suddi Udaya
error: Content is protected !!