24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗೇರುಕಟ್ಟೆ ಫ್ರೌಡ ಶಾಲಾ ಹಿಂಬದಿ ಟವರ್ ಬುಡದಲ್ಲಿ ಬೆಂಕಿ ಜ್ವಾಲೆ: ದೊಡ್ಡ ಅನಾಹುತ ತಪ್ಪಿಸಿದ ಸ್ಥಳೀಯ ಯುವಕರ ತಂಡ

ಬೆಳ್ತಂಗಡಿ : ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ಸರಕಾರಿ ಫ್ರೌಡ ಶಾಲಾ ಸಮೀಪ ವಿದ್ಯುತ್ ಅವಘಡ ಸಂಭವಿಸಿ ಪಕ್ಕದ ರಬ್ಬರ್ ತೋಟಕ್ಕೆ ಮತ್ತು ಏರ್ಟೆಲ್ ಕಂಪನಿಯ ಮೊಬೈಲ್ ಟವರ್ ಬುಡದಲ್ಲಿ ಬೆಂಕಿ ತಗುಲಿದ ಘಟನೆ ಮಾ.18 ರಂದು ಸಂಜೆ ನಡೆಯಿತು.

ವಿಷಯ ತಿಳಿದು ತಕ್ಷಣ ಸ್ಥಳೀಯ ಯುವಕರಾದ ಹಮೀದ್ ಜಿ.ಡಿ,ಪ್ರಕಾಶ್ ಪೂಜಾರಿ ಮೆರ್ಲ,ಸೈಪುಲ್ಲ ಹೆಚ್,ಎಸ್,ಮತ್ತು ಸ್ಥಳೀಯರ ಮುತುವರ್ಜಿಯಿಂದ ಬೆಂಕಿ ನಂದಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದರು. ತಕ್ಷಣ ಸ್ಥಳೀಯರು ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.

ಅದೇ ಸಮಯದಲ್ಲಿ ತಾಲ್ಲೂಕಿನ ಬೇರೆ ಕಡೆಯಲ್ಲಿ ಬೆಂಕಿ ನಂದಿಸುನ ಕೆಲಸದಲ್ಲಿ ನಿರತರಾಗಿರುವುದರಿಂದ ಗೇರುಕಟ್ಟೆಗೆ ಬರಲು ಸಾಧ್ಯವಾಗಿಲ್ಲವೆಂದು ತಿಳಿದು ಬಂದಿದೆ. ಖಾಸಗಿ ಕಂಪನಿ ಮೊಬೈಲ್ ಟವರ್ ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್ ಪಾರ್ಮ್‌ನ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಜ್ವಾಲೆ ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮೊಬೈಲ್ ಟವರ್‌ನ ಕೆಳಭಾಗ ಸಂಪೂರ್ಣವಾಗಿ ಬೆಂಕಿಗಾಹುತಿಯಿದೆ.

Related posts

ಒಕ್ಕಲಿಗರ ಕ್ರಿಕೆಟ್ ಪಂದ್ಯಾಟ: ಪಟ್ರಮೆ ಬ್ರದರ್ಸ್ ತಂಡ ದ್ವಿತೀಯ ಸ್ಥಾನ

Suddi Udaya

ಸೆ.17: ನಾರಾವಿ ಸಂತ ಅಂತೋನಿ ಪದವಿ ಕಾಲೇಜು ಎನ್ ಎಸ್ ಎಸ್ ವತಿಯಿಂದ ಉಚಿತ ಫಿಸಿಯೋಥೆರಪಿ ಹಾಗೂ ಹೊಮಿಯೋಪತಿಕ್ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ಮುಳಿಯ ಜುವೆಲ್ಲರ್ಸ್ ವತಿಯಿಂದ ವನಮಹೋತ್ಸವ

Suddi Udaya

ತಾಲೂಕು ಪ್ರೌಢಶಾಲಾ ಕಬಡ್ಡಿ ಬೆಳಾಲು ಎಸ್ ಡಿ ಎಂ ಶಾಲಾ ತಂಡ ಪ್ರಥಮ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಹಿ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

Suddi Udaya

ಉಜಿರೆ: ಎಸ್‌ಡಿಪಿಐ ಕಕ್ಕೇಜಾಲ್ ಬ್ರಾಂಚ್ ವತಿಯಿಂದ ರಕ್ತದಾನ ಶಿಬಿರ

Suddi Udaya
error: Content is protected !!