23.5 C
ಪುತ್ತೂರು, ಬೆಳ್ತಂಗಡಿ
April 4, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿ

ಅಮೇರಿಕಾದ ಪ್ರತಿಷ್ಠಿತ ಹಾರ್ವರ್ಡ್ ಯೂನಿವರ್ಸಿಟಿ ಯ ಸ್ಟ್ರಾಟೆಜಿಕ್ ಲೀಡರ್ ಶಿಪ್ ಪ್ರೋಗ್ರಾಮ್ ಗೆ ಸುಳ್ಯದ ಪ್ರದೀಪ್ ಜೈನ್ ಬಲ್ನಾಡು ಪೇಟೆ ಆಯ್ಕೆ

ಸುಳ್ಯ: ಅಮೇರಿಕಾದ ಪ್ರತಿಷ್ಠಿತ ಹಾರ್ವರ್ಡ್ ಯೂನಿವರ್ಸಿಟಿ ಯ ಸ್ಟ್ರಾಟೆಜಿಕ್ ಲೀಡರ್ ಶಿಪ್ ಪ್ರೋಗ್ರಾಮ್ ಗೆ (strategic Leadership ) ಸುಳ್ಯ ತಾಲೂಕು ಮರ್ಕಂಜದ ಪ್ರದೀಪ್ ಜೈನ್ ಬಲ್ನಾಡು ಪೇಟೆ ಆಯ್ಕೆಯಾಗಿದ್ದು ಇದರಲ್ಲಿ ಭಾಗವಹಿಸಲು ಮಾ.16ರಂದು ಅಮೆರಿಕದ ಬೋಸ್ಟನ್ ಗೆ ತೆರಳಿದ್ದಾರೆ.

ಈ ಸಂದರ್ಭ ಅವರು ಅಮೆರಿಕದ ನ್ಯೂಯಾರ್ಕ್ ಮತ್ತು ವಾಷಿಂಗ್ಟನಿಗೂ ಭೇಟಿ ನೀಡಲಿದ್ದಾರೆ. ದೇಶದಾದ್ಯಂತ 25 ರಾಜ್ಯಗಳಲ್ಲಿ 750 ಶಾಖೆಗಳನ್ನು ಹೊಂದಿರುವ ಉಜ್ಜಿವನ್ ಬ್ಯಾಂಕ್ ಇದರ ಹೌಸಿಂಗ್ ಲೋನ್ ವಿಭಾಗದ ರಾಷ್ಟ್ರಮಟ್ಟದ ವ್ಯವಹಾರ ಮುಖ್ಯಸ್ಥರಾಗಿರುವ ಇವರು ಸುಳ್ಯ ತಾಲೂಕು ಬಲ್ನಾಡು ಪೇಟೆ ಬಸದಿಯ ಆಡಳಿತ ಮೋಕ್ತೆಸರರಾದ ಮತ್ತು ಯಕ್ಷಗಾನ ಸಂಘಟಕರಾದ ಮರ್ಕಂಜ ಯುವರಾಜ ಜೈನ್ ಮತ್ತು ಪ್ರಸನ್ನ ದಂಪತಿಯ ಕಿರಿಯ ಪುತ್ರರಾಗಿದ್ದಾರೆ.

Related posts

ಬೆಳ್ತಂಗಡಿ ಸ.ಪ್ರ.ದರ್ಜೆ ಕಾಲೇಜಿನಲ್ಲಿ ಉದ್ಯೋಗಾವಕಾಶಗಳ ಕಾರ್ಯಾಗಾರ

Suddi Udaya

ಪಣಕಜೆ : ಚರಂಡಿಗೆ ವಾಲಿದ ಕೆಎಸ್ಆರ್ ಟಿಸಿ ಬಸ್ಸು

Suddi Udaya

ಪಟ್ರಮೆ: ಡೆಚ್ಚಾರು ನಿವಾಸಿ ತಿಮ್ಮಪ್ಪ ಗೌಡ ನಿಧನ

Suddi Udaya

ಕೊಕ್ಕಡ: ಸೌತಡ್ಕ ಕಡೀರ ನಾಗಬನದಲ್ಲಿ ನಾಗದೇವರ ಪುನಃ ಪ್ರತಿಷ್ಠೆ, ರಕ್ತೇಶ್ವರಿ ಮತ್ತು ಕಟ್ಟೆಯಲ್ಲಿ ಪಂಜುರ್ಲಿ ದೈವಗಳ ಪ್ರತಿಷ್ಠೆ

Suddi Udaya

ಪಶುಸಂಗೋಪನಾ ಇಲಾಖೆಯ ಅಧಿಕಾರಿ ಜಯಕೀರ್ತಿ ಜೈನ್ ಸೇವಾ ನಿವೃತ್ತಿ

Suddi Udaya

ಜಿಯೋ ಭಾರತ್ 4g ಮೊಬೈಲ್ ಕೇವಲ 999 ಕ್ಕೆ

Suddi Udaya
error: Content is protected !!