24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾ.26-28: ಅಳದಂಗಡಿ ಅಂಗತ್ಯಾರು ಬಾಕಿಮಾರು ಶ್ರೀ ಬ್ರಹ್ಮ ಮೊಗೇರ್ಕಳ ಗರಡಿಯಲ್ಲಿ ವಾರ್ಷಿಕ ನೇಮೋತ್ಸವ

ಅಳದಂಗಡಿ: ಅಳದಂಗಡಿ ಅಂಗತ್ಯಾರು ಬಾಕಿಮಾರು ಶ್ರೀ ಬ್ರಹ್ಮ ಮೊಗೇರ್ಕಳ ಗರಡಿಯಲ್ಲಿ ಮಾ.26ರಿಂದ ಮಾ.28 ರವರೆಗೆ 77ನೇ ವರ್ಷದ ವಾರ್ಷಿಕ ನೇಮೋತ್ಸವವು ಜರಗಲಿರುವುದು.

ಮಾರ್ಚ್ 26ರಂದು ಬೆಳಿಗ್ಗೆ ಶ್ರೀ ಸೋಮನಾಥೇಶ್ವರಿ ದೇವಸ್ಥಾನದಿಂದ ತೀರ್ಥ ತರುವುದು. ದೈವಗಳ ಭಂಡಾರ ಶುದ್ಧೀಕರಿಸಿ ಗಣಹೋಮ, ಅಂಗತ್ಯಾರು ಬಾಕಿಮಾರು ಗದ್ದೆಯಲ್ಲಿ ಮುಗೇರ ದೈವಗಳಿಗೆ ಮಂಜ ಸೇವೆಯು ನಡೆಯಲಿರುವುದು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಾಂಜೆ ಕುಡ್ಡಲಬೆಟ್ಟು ದೈವಸ್ಥಾನದಿಂದ ದೈವಗಳ ಭಂಡಾರ ಬರುವುದು, ಓಂಕಾರೇಶ್ವರ ಭಜನಾ ಮಂಡಳಿ ಪಜಿರಡ್ಕ ಕಲ್ಮಂಜ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ, ನೆಲ್ಯರಾಯ ಪಂಜುರ್ಲಿ ನೇಮೋತ್ಸವ, ರಾತ್ರಿ12 ಕ್ಕೆ ಮಹಾಕಾಳಿ ದೈವದ ನೇಮೋತ್ಸವ ನಡೆಯಲಿರುವುದು. ಮಾ. 27ರಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಶ್ರೀ ಸೋಮನಾಥೇಶ್ವರಿ ಮಕ್ಕಳ ಕುಣಿತ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಬ್ರಹ್ಮ ಮೊಗೇರ ದೈವಗಳ ನೇಮೋತ್ಸವ, ರಾತ್ರಿ 12 ಕ್ಕೆ ತಂಗಡಿ ತನ್ನಿ ಮಾಣಿಗ ದೈವದ ನೇಮೋತ್ಸವ ಜರುಗಲಿರುವುದು.

ಮಾರ್ಚ್ 28ರಂದು ಬೆಳಿಗ್ಗೆ ಅಲೇರ ಪಂಜುರ್ಲಿ ದೈವದ ನೇಮೋತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಸಂಜೆ ದೈವಗಳ ಭಂಡಾರ ಇಳಿಯುವುದು ಎಂದು ಸಂಘಟಕರು ತಿಳಿಸಿದ್ದಾರೆ.

Related posts

ಸೇವಾಭಾರತಿಯಿಂದ ಈ ವರ್ಷದ “ಸೇವಾ ಶ್ರೇಷ್ಠ -2024” ಪುರಸ್ಕಾರ:

Suddi Udaya

ವಲಯ ಮಟ್ಟದ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ: ವಾಣಿ ಆಂ.ಮಾ.ಪ್ರೌ. ಶಾಲೆಗೆ ರನ್ನರ್‍ಸ್ ಚಾಂಪಿಯನ್ ಮತ್ತು ಹಲವು ಪ್ರಶಸ್ತಿಗಳು

Suddi Udaya

ಮಲವಂತಿಗೆ : 38ನೇ ವರ್ಷದ ಶ್ರೀವಿದ್ಯಾ ಗಣಪತಿ ಪೂಜ್ಯೋತ್ಸವದ ಪದಾಧಿಕಾರಿಗಳ ಆಯ್ಕೆ

Suddi Udaya

ನಾಳ ಗೋಪಾಲಕೃಷ್ಣ ಕಾಮತ್ ನಿಧನ

Suddi Udaya

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷಾ ಕೇಂದ್ರ

Suddi Udaya

ಕೊಯ್ಯೂರು ಸರಕಾರಿ ಶಾಲೆಯಲ್ಲಿ ಯಕ್ಷ ನಾಟ್ಯ ತರಬೇತಿ ಉದ್ಘಾಟನೆ

Suddi Udaya
error: Content is protected !!