30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರೆಖ್ಯ: ಬೋರ್‌ವೆಲ್ ವಿಷಯದಲ್ಲಿ ಮಾತುಕತೆ ,: ಹಲ್ಲೆ ಆರೋಪ ಪೊಲೀಸ್ ಠಾಣೆಗೆ ದೂರು

ರೆಖ್ಯ: ರೆಖ್ಯದ ಬೀಡು ನಿವಾಸಿ ಬಾಲಕೃಷ್ಣ ಗೌಡ ಅವರು ತೋಟಕ್ಕೆ ಹೋಗಿದ್ದ ಸಮಯದಲ್ಲಿ ಬೋರ್‌ವೆಲ್ ವಿಷಯವಾಗಿ ಮಾತುಕತೆ ನಡೆಯುತ್ತಿರುವ ಸಂದರ್ಭ ಗಂಗಾಧರ ಎಂಬವರು ಬಾಲಕೃಷ್ಣ ಗೌಡ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದರೆಂದು ಆರೋಪಿಸಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಕೃಷಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಬಾಲಕೃಷ್ಣರವರು ತಮ್ಮ ಸುರೇಶ್ ಎಂಬವರಿಗೆ ರೆಖ್ಯ ಗ್ರಾಮದ ದೇವಸ ಎಂಬಲ್ಲಿರುವ ಸುಮಾರು 2 ಎಕರೆ ಜಾಗದಲ್ಲಿ ತಂದೆ-ತಾಯಿ, ತಮ್ಮ ಒಟ್ಟಿಗೆ ಹಳೆ ಮನೆಯಲ್ಲಿ ಇದ್ದೇವೆ. ಇತ್ತೀಚಿಗೆ ಹೊಸಮನೆ ನಿರ್ಮಾಣದ ಕೆಲಸ ಆಗುತ್ತಿದ್ದು, ಈ ಬಗ್ಗೆ ನಾನು ನಿನ್ನೆ ದಿನ ರಾತ್ರಿ 10 ಗಂಟೆಗೆ ಮನೆಯ ಕೆಲಸದ ಬಗ್ಗೆ ಹೋದಾಗ, ತಮ್ಮನ ಜಾಗದ ಬದಿಯಲ್ಲಿ ಭವಾನಿ ಎಂಬವರು ಬೋರ್‌ವೆಲ್ ಕೊರೆಯುತ್ತಿದ್ದರು.

ಈ ಬಗ್ಗೆ ಅಲ್ಲಿಯ ಸ್ಥಳಿಯ ಪಂ. ಸದಸ್ಯರಾದ ನಾಗೇಶ್ ಎಂಬುವರು, ಯಾಕೆ ಬೋರ್‌ವೆಲ್ ಕೊರೆಯುವುದು ಎಂದು ಅವರೊಳಗೆ ಮಾತುಕತೆಯಾಗುತ್ತಿತ್ತು. ಆ ಸಮಯ ನಾನು ಯಾಕೆ ಮಾತನಾಡುವುದು ಅವರು ಪಾಪದವರು ಬೋರ್‌ವೆಲ್ ತೆಗೆಯಲಿ ಎಂದು ಹೇಳಿದಾಗ ಕೋಪಗೊಂಡ ಗಂಗಾಧರ ಬಂದು, ಬೈದು ಕೈಯಿಂದ ಹಲ್ಲೆ ನಡೆಸಿದರೆಂದು ಆರೋಪಿಸಿದ್ದಾರೆ, ಪೊಲೀಸರು ದೂರು ಸ್ವೀಕರಿಸಿದ್ದಾರೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಇಪಿಎಸ್ ತರಬೇತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್‌ ಇನ್ಸೆಕ್ಟ‌ರ್ ಆಗಿ ಬಸಲಿಂಗಯ್ಯ ಜಿ. ಸುಬ್ರಪುರಮಠ್ ನೇಮಕ

Suddi Udaya

ಬೆಳ್ತಂಗಡಿ: ಜಯಲಕ್ಷ್ಮಿ ಲೇತ್ ಅಂಡ್ ಇಂಜಿನಿಯರಿಂಗ್ ವರ್ಕ್ ಶಾಪ್ ಪುನರಾರಂಭ

Suddi Udaya

ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಕುಟುಂಬೋತ್ಸವ

Suddi Udaya

ಮತದಾನ ಮಾಡಿದ ದ.ಕ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ

Suddi Udaya

ಬೆಳ್ತಂಗಡಿಯಲ್ಲಿ ಬಿಸಿಲ ಬೇಗೆಗೆ ತಂಪು ಮಜ್ಜಿಗೆ ಹಂಚಿ ಬಾಯಾರಿಕೆ ತಣಿಸಿದ ‘ರೆಡ್ ಕ್ರಾಸ್’ ತಂಡ

Suddi Udaya
error: Content is protected !!