April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎ.10-19: ಉಜಿರೆ ಪ್ರಗತಿ ಮಹಿಳಾ ಮಂಡಲದಿಂದ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ “ಚಿಲಿಪಿಲಿ”

ಉಜಿರೆ : ಪ್ರಗತಿ ಮಹಿಳಾ ಮಂಡಲ ಉಜಿರೆ ಪ್ರಸ್ತುತಪಡಿಸುವ ಶ್ರೀಮತಿ ಭವ್ಯಶ್ರೀ ಕೀರ್ತಿರಾಜ್‌ ಇವರ ನೇತೃತ್ವದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ ಚಿಲಿಪಿಲಿ -2024 ಎ.10 ರಿಂದ 19 ರ ವರೆಗೆ ಉಜಿರೆ ಅನುಗ್ರಹ ಪ್ರೈಮರಿ ಶಾಲೆ ಸಭಾಂಗಣದಲ್ಲಿ ನಡೆಯಲಿದೆ.

ಬೆಳಿಗ್ಗೆ 9.30 ರಿಂದ ಸಂಜೆ 4.30ರವರೆಗೆ ಶಿಬಿರವು ನಡೆಯಲಿದ್ದು, 5ರಿಂದ 9 ವರ್ಷ, 10ರಿಂದ 16 ವರ್ಷ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು.

ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಭವ್ಯ ಕೀರ್ತಿರಾಜ್ ರವರು ಬ್ಯಾಗ್, ಪೌಚ್ ತಯಾರಿ, ಫ್ರೆಡ್ ಆರ್ಟ್, ಆರ್ಟ್ ಮತ್ತು ಕ್ರಾಫ್ಟ್ ಮತ್ತು ಗೊಂಬೆ ತಯಾರಿ ಬಗ್ಗೆ, ಶ್ರೀಮತಿ ಚೇತನ ಉಜಿರೆ ರವರು ಕಸದಿಂದ ರಸ , ಶ್ರೀಮತಿ ಅನ್ನಪೂರ್ಣ ಉಜಿರೆ ರವರು ಆರ್ಟ್ ಮತ್ತು ಕ್ರಾಫ್ಟ್ , ಡಾ| ದೀಪಾಲಿ ಡೋಂಗ್ರೆ ರವರು ದಂತ ಮಾಹಿತಿ ಮತ್ತು ತಪಾಸಣೆ, ಶ್ರೀಮತಿ ರೇವತಿ ಉಜಿರೆ ರವರು ಯೋಗದ ಬಗ್ಗೆ, ಸತೀಶ್ ಕಾನತ್ತೂರು ಸುಳ್ಯ ರವರು ವ್ಯಂಗ್ಯ ಚಿತ್ರದ ಬಗ್ಗೆ , ಧರ್ಮೇಂದ್ರ ಪೂಜೆಹಿತ್ಲು ರವರು ದೈಹಿಕ ಸಧೃಡತೆ ಯ ಬಗ್ಗೆ, ಶ್ರೀರಾಮ್ ಉಜಿರೆ ರವರು ಕ್ಲೇ ಆರ್ಟ್ ಬಗ್ಗೆ, ಶ್ರೀಮತಿ ಅರುಣ ಶ್ರೀನಿವಾಸ್ ಉಜಿರೆ ರವರು ಕಥಾ, ಕಾವ್ಯ, ಕಮ್ಮಟದ ಬಗ್ಗೆ, ಸಹನ್ ಎಂ. ಎಸ್., ಹಿಪ್ ಬಾಯ್ಸ್ ಡ್ಯಾನ್ಸ್ ಕ್ರೀವ್ ಉಜಿರೆ ರವರು ನೃತ್ಯದ ಬಗ್ಗೆ, ಅಶ್ವತ್ ಎಸ್. ಪುತ್ತೂರು ರವರು ರಂಗಭೂಮಿಯ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.

ಸಂಪರ್ಕಿಸಿ : 9731963325 / 8277141506

Related posts

ಕರಾಯ ಕಲ್ಲೇರಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟ : ಉಪ್ಪಿನಂಗಡಿ ಪೊಲೀಸರ ದಾಳಿ‌ ನಗದು ಸಹಿತ ಐವರು ವಶಕ್ಕೆ

Suddi Udaya

ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಜಿಲ್ಲಾವಾರು ಉತ್ತಮ ಸಂಘ ಪ್ರಶಸ್ತಿ ಪ್ರಧಾನ

Suddi Udaya

ತಣ್ಣೀರುಪoತ: ಬೈಕ್ ಗಳ ಮುಖಾಮುಖಿ ಡಿಕ್ಕಿ: ಓರ್ವ ಮೃತ್ಯು

Suddi Udaya

ಹೊಸಂಗಡಿಯಲ್ಲಿ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ವಶ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ವಾಣಿಜ್ಯ ಕಟ್ಟಡ ‘ಉನ್ನತಿ’ ಉದ್ಘಾಟನೆ

Suddi Udaya

ಮಾ.22: ಬೆಳ್ತಂಗಡಿಯಲ್ಲಿ ಐ ಕೇರ್ ಒಪ್ಟಿಕಲ್ಸ್ ಶುಭಾರಂಭ

Suddi Udaya
error: Content is protected !!