September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿ

ಪುತ್ತೂರು ನರಿಮೊಗರು ಕೊಡಿನೀರುನಲ್ಲಿ, ಮಾರುತಿ ಕಾರುಗಳ ನಡುವೆ ಅಪಘಾತ: ಕೊಕ್ಕಡದ ಮಹಿಳೆಗೆ ಗಾಯ ಆಸ್ಪತ್ರೆಗೆ ದಾಖಲು

ಬೆಳ್ತಂಗಡಿ: ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ, ಮಾರುತಿ ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕೊಕ್ಕಡದ ಮಹಿಳೆ ಗಾಯಗೊಂಡು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಕೊಕ್ಕಡ ನಿವಾಸಿ ದಿನೇಶ್‌ ಕುಮಾರ್‌ ಎಂಬವರು ಪೊಲೀಸ್ ರಿಗೆ ನೀಡಿದ ದೂರಿನಲ್ಲಿ, ಮಾ. 30 ರಂದು ಬೆಳಿಗ್ಗೆ, ಕೆ.ಎಂ. ಅಬೂಬಕ್ಕರ್‌ ಎಂಬವರು ತನ್ನ ಓಮ್ನಿ ಕಾರನ್ನು ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯಲ್ಲಿ ಚಲಾಯಿಸಿದ ಪರಿಣಾಮ, ನಾನು ಚಾಲಕನಾಗಿ ನನ್ನ ತಾಯಿ ಲೀಲಾವತಿ ಮತ್ತು ಅಜ್ಜಿ ವಿಜಯಲಕ್ಷ್ಮಿ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿ, ಹೋಗುತ್ತಿದ್ದ ಓಮ್ನಿ ಕಾರಿಗೆ ಡಿಕ್ಕಿ ಹೊಡೆದು ಅಪಘಾತವಾಗಿರುತ್ತದೆ. ಪರಿಣಾಮ ವಿಜಯಲಕ್ಷ್ಮಿರವರಿಗೆ ಗಾಯಗಳಾಗಿ, ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿರುತ್ತವೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ: 40/2024 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಉಜಿರೆ ಆಟೋ ಚಾಲಕರ ಮಹಾಸಭೆ

Suddi Udaya

ಕರ್ನಾಟಕ ವಿಧಾನಸಭಾ ಚುನಾವಣೆ: ಕೊಕ್ರಾಡಿ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಪೂರ್ವಭಾವಿ ಸಭೆ

Suddi Udaya

ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಕೆ. ವಸಂತ ಬಂಗೇರರ ಹಳೆಕೋಟೆಯ ಮನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ; ಕುಟುಂಬಸ್ಥರಿಗೆ ಸಾಂತ್ವಾನ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸಾಧನ ಪ್ರಶಸ್ತಿ

Suddi Udaya

ಬೆದ್ರಬೆಟ್ಟು ಮರಿಯಾoಬಿಕ ಆಂ.ಮಾ. ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಸ್ಪಾರ್ಕ್ -2024

Suddi Udaya

ಪಣಕಜೆ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ: ಧಾರ್ಮಿಕ ಸಭೆ

Suddi Udaya
error: Content is protected !!