25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮತ್ಸ್ಯತೀರ್ಥ ಪ್ರಖ್ಯಾತ ಶಿಶಿಲ ದೇವಾಲಯದ ಮೀನುಗಳಿಗೆ ಭಕ್ತರು ಅರಳು ಹಾಕುವುದಕ್ಕೆ ನಿಷೇಧ- ದೇವಾಲಯದ ಆಡಳಿತ ನಿಧಾ೯ರ

ಶಿಶಿಲ: ಮತ್ಸ್ಯತೀರ್ಥ ಪ್ರಖ್ಯಾತ ಶಿಶಿಲ ದೇವಾಲಯ ದಿನ ನಿತ್ಯ ಊರ ಪರವೂರ ಭಕ್ತಾದಿಗಳು ಆಗಮಿಸುತ್ತಾರೆ. ಶಿಶಿಲ ದೇವಾಲಯದಲ್ಲಿ ಸ್ವಾಮಿಯ ದರ್ಶನದಂತೆ ಮೀನುಗಳಿಗೂ ಹರಕೆ ಇಲ್ಲಿ ವಿಶೇಷ.

ಇತ್ತೀಚೆಗೆ ಇಲ್ಲಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ನಿತ್ಯ ಹರಿವು ನಿಂತಿದೆ. ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ನದಿಯ ಮೀನುಗಳಿಗೆ ಅತಿಯಾದ ಆಹಾರ ಹಾಕುವುದರಿಂದ ನೀರು ಕಲುಷಿತವಾಗಿ ದೇವರ ಮೀನುಗಳಿಗೆ ತೊಂದರೆ ಆಗಿದೆ. ಇದನ್ನು ಅರಿತ ದೇವಾಲಯದ ಆಡಳಿತ, ಮೀನುಗಳಿಗೆ ಭಕ್ತರು ಅರಳು ಹಾಕುವುದನ್ನು ನಿಷೇಧ ಮಾಡಿದೆ.

*ರಾಸಾಯನಿಕಯುಕ್ತ ಅರಳು: ಇತ್ತೀಚಿನ ದಿನಗಳಲ್ಲಿ ಎಲ್ಲೂ ಕಂಡುಬರುವ ರಾಸಾಯನಿಕಯುಕ್ತ ವಸ್ತುಗಳಲ್ಲಿ ಅರಳೂ ಸೇರಿಕೊಂಡಿದೆ. ಆರಳಿಗೂ ರಾಸಾಯನಿಕ ವಸ್ತು ಇದೆ ಎಂಬ ಸಂಶಯ ಮೂಡಲಾರಂಬಿಸಿದೆ. ಮೀನುಗಳ ಆಹಾರದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲ ಮತ್ತು ನೀರೂ ಕಲುಷಿತ ಮಾಡಬಲ್ಲ ಅರಳನ್ನು ನಿಷೇಧ ಮಾಡಲಾಗಿದೆ. ಹಿಂದಿನ ಪರಂಪರೆಯಂತೆ ಬಿಳಿ ಅಕ್ಕಿಯನ್ನು ಅಗತ್ಯ ಕಂಡು ಬಂದಲ್ಲಿ ಅಲ್ಪಪ್ರಮಾಣದಲ್ಲಿ ಹಾಕಬಹುದು ಮತ್ತು ಇತರ ಯಾವುದೇ ತಿಂಡಿಯನ್ನು ಹಾಕಬಾರದು. ಈ ಕುರಿತು ಎಲ್ಲಾ ಊರಿನ ಪರ ಊರಿನ ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳು ಮತ್ತು ಮತ್ಸ್ಯ ಹಿತರಕ್ಷಣಾ ವೇದಿಕೆ ವಿನಂತಿ ಮಾಡಿದೆ.

Related posts

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ಉಜ್ಜಲ ಉದ್ಯಮಿ ಪ್ರಶಸ್ತಿ

Suddi Udaya

ಕಣಿಯೂರು ವಲಯದ ಪದ್ಮುಂಜ ಕಾರ್ಯಕ್ಷೇತ್ರದಲ್ಲಿ ಶ್ರೀ ಗೌರಿ ಜ್ಞಾನ ವಿಕಾಸ ಕೇಂದ್ರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದದ ಸಮಾವೇಶ: ಬೃಹತ್ ಸಾರ್ವಜನಿಕ ಸಭೆ – ಜಾಥಾ ಮತ್ತು ಹಕ್ಕೊತ್ತಾಯ ಮಂಡನೆ

Suddi Udaya

ಧರ್ಮಸ್ಥಳ ಶಿವಶಕ್ತಿ ಅಯ್ಯಂಗಾರ್ ಬೇಕರಿ, ಉಜಿರೆಯ ಅಮರ್ಥ್ಯ ಬೇಕರಿಯಲ್ಲಿ ದೀಪಾವಳಿಯ ವಿಶೇಷ ಕೊಡುಗೆಗಳು

Suddi Udaya

ಉಜಿರೆಯಲ್ಲಿ ಚುನಾವಣಾ ಪ್ರಚಾರದ ಅಂಗವಾಗಿ ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ್ ಬಿಸ್ವಾಸ್ ಶರ್ಮ ಬೃಹತ್ ರೋಡ್ ಶೋ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರ ಮತ ಪ್ರಚಾರ

Suddi Udaya
error: Content is protected !!