24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎ.16-21: ಬೆಳ್ತಂಗಡಿ ಮಹಿಳಾ ವೃಂದದ ಆಶ್ರಯದಲ್ಲಿ ಝೇಂಕಾರ ಬೇಸಿಗೆ ಶಿಬಿರ

ಬೆಳ್ತಂಗಡಿ ಮಹಿಳಾ ವೃಂದದ ಆಶ್ರಯದಲ್ಲಿ 4ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಝೇಂಕಾರ ಬೇಸಿಗೆ ಶಿಬಿರವು ಎ.16 ರಿಂದ ಎ. 21 ರವರೆಗೆ ಬೆಳಿಗ್ಗೆ 9.30 ರಿಂದ ಸಂಜೆ 4.15 ರ ವರೆಗೆ ಮಹಿಳಾ ವೃಂದ ಸಭಾಂಗಣದಲ್ಲಿ ನಡೆಯಲಿದೆ.

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಶಸ್ತಿ ವಿಜೇತ ಜನಪದ ಕಲಾವಿದ ಉದಯ್ ಕುಮಾರ್ ಲಾಯಿಲ, ಶೃಂಗೇರಿ ಏಕತಾರಿ ಹಾಡುಗಾರರಾದ ನಾದ ಮಣಿನಾಲ್ಕೂರು, ಮಂಗಳೂರು ಚಿತ್ರಕಲಾವಿದ ತಾರಾನಾಥ್ ಕೈರಂಗಳ, ಬೆಳ್ತಂಗಡಿ ಸ್ಪೂರ್ತಿ ಯಕ್ಷಿಣಿ ಲೋಕ ರಾಜೀವ್ ಬಿ.ಹೆಚ್, ಉಜಿರೆ ಶಿಕ್ಷಕರು ಅನ್ನಪೂರ್ಣ ಭಟ್, ವಲಯ ತರಬೇತುದಾರರು ಜೆಸಿ ಹೇಮಾವತಿ.ಕೆ, ಬೆಳ್ತಂಗಡಿ ರಂಗಭೂಮಿ ಕಲಾವಿದ ಜೇಸಿಐ ಇಂಡಿಯಾ ಪ್ರಶಾಂತ್ ಬೆಳ್ತಂಗಡಿ ಭಾಗವಹಿಸಲಿದ್ದಾರೆ.

ಶಿಬಿರದಲ್ಲಿ ಮನೋರಂಜನಾ ಆಟಗಳು, ಜೀವನ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ, ವರ್ಲಿ ಚಿತ್ರಕಲೆ, ಕೊಲಾಜ್ ಮ್ಯಾಜಿಕ್ ಶೋ ಮತ್ತು ತರಬೇತಿ, ಕ್ರಾಫ್ಟ್, ಗ್ರೀಟಿಂಗ್ ಕಾರ್ಡ್, ಗೂಡು ದೀಪ ತಯಾರಿ, ಹಾಡು, ಅಭಿನಯ ಮತ್ತು ಹೊರಾಂಗಣ ಪರಿಸರ ಚಟುವಟಿಕೆಗಳು ಇರಲಿದೆ.

ಶಿಬಿರದಲ್ಲಿ ಊಟ ಉಪಾಹಾರದ ವ್ಯವಸ್ಥೆ ಇರುತ್ತದೆ ಎಂದು ಮಹಿಳಾ ವೃಂದದ ಅಧ್ಯಕ್ಷೆ ಆಶಾ ಸತೀಶ್ ತಿಳಿಸಿದ್ದಾರೆ.

Related posts

ಉಜಿರೆ : ಅರ್ಜುನ ಪ್ರಶಸ್ತಿ ಪುರಸ್ಕೃತೆ ಪೂವಮ್ಮ ಅವರಿಂದ ಎಸ್.ಡಿ.ಎಂ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

Suddi Udaya

ಗುಡ್ಡೆ ಜರಿದು ಶೌಚಾಲಯ ಹಾಗೂ ಮನೆಯ ಮೇಲೆ ಬಿದ್ದು ಸಂಪೂರ್ಣಹಾನಿ

Suddi Udaya

ಮಲ್ ಜಅ ದಅವಾ ಕೇಂದ್ರದಿಂದ ಒಂದು ಸಾವಿರ ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

Suddi Udaya

ನಾರಾವಿ ಕ್ಯಾಂಪ್ಕೋ ಶಾಖೆಯಲ್ಲಿ ಕಾಳುಮೆಣಸು ಖರೀದಿ ಆರಂಭ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ರೋಗ ತಪಾಸಣಾ ಶಿಬಿರ

Suddi Udaya

ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯದ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!