25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ರೆಖ್ಯ ,ಕಳೆಂಜ, ಕೊಕ್ಕಡ, ಶಿಶಿಲ ರಸ್ತೆಗಳಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ವೇಗ ನಿಯಂತ್ರಕ ಉಬ್ಬುಗಳಿಗೆ ಬಣ್ಣ ಬಳಿಯುವ ಕಾರ್ಯ

ಬೆಳ್ತಂಗಡಿ: ರೆಖ್ಯ, ಕೊಕ್ಕಡ, ಶಿಶಿಲ, ಕಳೆಂಜ ಈ ರಸ್ತೆಗಳಲ್ಲಿ ಅನೇಕ ಕಡೆ ವೇಗ ನಿಯಂತ್ರಕ ಉಬ್ಬುಗಳಿದ್ದು ಈ ಬಗ್ಗೆ ಯಾವುದೇ ಸೂಚನಾ ಫಲಕಗಳು ಇಲ್ಲದೆ ಇರುವುದರಿಂದ ಅನೇಕ ದ್ವಿಚಕ್ರ ವಾಹನಗಳಿಗೆ ತುಂಬಾ ಅಪಘಾತಗಳು ಆಗುತ್ತಿದ್ದವು. ಇದನ್ನು ಮನಗಂಡ ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸೇವಾ ಪ್ರತಿನಿಧಿ ಮತ್ತು ಘಟಕ ಪ್ರತಿನಿಧಿಯವರು, ಶೌರ್ಯ ವಿಪತ್ತು ನಿರ್ವಹಣೆ ಘಟಕದ ಯೋಜನಾಧಿಕಾರಿಯವರಾದ ಜೈವಂತ್ ಪಟ್ಕರ್ ಇವರಲ್ಲಿ ತಿಳಿಸಿದಾಗ ಇವರು ಈ ಕೆಲಸವನ್ನು ಉತ್ತೇಜಿಸಿ ರೆಖ್ಯ, ಕೊಕ್ಕಡ, ಕಳೆಂಜ, ಶಿಶಿಲ ರಸ್ತೆಗಳಲ್ಲಿ ವೇಗ ನಿಯಂತ್ರಣ ಉಬ್ಬುಗಳಿಗೆ ಬಣ್ಣ ಬಳಿದು ಅವುಗಳು ದೂರದಿಂದಲೇ ಸ್ಪಷ್ಟವಾಗಿ ಗೋಚರಿಸುವಂತಹ ಕೆಲಸವನ್ನು ಅರಸಿನಮಕ್ಕಿ ಶಿಶಿಲದ ಶೌರ್ಯ ವಿಪತ್ತು ನಿರ್ವಹಣಾ ತಂಡವು ಮಾಡಿದರು.

ವಿಪತ್ತು ತಂಡದ ಸದಸ್ಯರಾದ ಪ್ರವೀಣ್, ಅವಿನಾಶ್ ಭಿಡೆ, ಸುರೇಶ, ಹರೀಶ್, ಶೀನಪ್ಪ ಆನಂದ, ಚೇತನ್, ರಾಧಾಕೃಷ್ಣ, ರಶ್ಮಿತ ಇವರೊಂದಿಗೆ ಸ್ಥಳೀಯ ಜನಪ್ರತಿನಿಧಿಗಳಾದ ನವೀನ್ ರೆಖ್ಯ ಮತ್ತು ಕರುಣಾಕರ್ ಶಿಶಿಲ ಸಹಕರಿಸಿದ್ದು ಈ ಕೆಲಸಕ್ಕೆ ತಗುಲುವ ಪೇಂಟಿನ ವೆಚ್ಚವನ್ನು ಎಸ್ ಕೆ ಡಿ ಆರ್ ಡಿ ಪಿ ಸಂಸ್ಥೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಬಿ. ಜಯರಾಮ್ ನೆಲ್ಲಿತ್ತಾಯ ಇವರು ಮತ್ತು ಹತ್ಯಡ್ಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ಇವರು ಭರಿಸಿರುತ್ತಾರೆ.

Related posts

ದಿವ್ಯಾಂಗರ ಬಾಳಿಗೆ ಬೆಳಕಾದ ಕನ್ಯಾಡಿ ಸೇವಾ ಭಾರತಿ ಸಂಸ್ಥೆಗೆ 20 ವರ್ಷ: ನ.14 : ಸೇವಾನಿಕೇತನದಲ್ಲಿ ನೂತನ ಕಟ್ಟಡಕ್ಕೆ ಭೂಮಿಪೂಜೆ ಹಾಗೂ ಶಿಲಾನ್ಯಾಸ

Suddi Udaya

ಕನ್ಯಾಡಿ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಅಯೋಧ್ಯೆ ರಾಮಮಂದಿರದ ಮಂತ್ರಾಕ್ಷತೆ ವಿತರಣೆ

Suddi Udaya

ಬಳಂಜ:ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ದೀಪಾವಳಿ ಸಂಭ್ರಮ

Suddi Udaya

ಅರಸಿನಮಕ್ಕಿ ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya

ವಿಶ್ವ ರಜೋನಿವೃತ್ತಿ (ಮೆನೋಪಾಸ್) ದಿನಾಚರಣೆಯ ಅಂಗವಾಗಿ ಬೆನಕ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರ

Suddi Udaya

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ರವರನ್ನು ಭೇಟಿಯಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು

Suddi Udaya
error: Content is protected !!