April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ: ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಆರ್ ಚುನಾವಣಾ ಪ್ರಚಾರ ಸಭೆ

ಅಳದಂಗಡಿ: ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಆರ್ ಚುನಾವಣಾ ಪ್ರಚಾರ ಸಭೆಯು ಎ. 17ರಂದು ಅಳದಂಗಡಿಯಲ್ಲಿ ನಡೆಯಿತು.

ನಾರಾವಿಯಿಂದ ಅಳದಂಗಡಿಯವರೆಗೆ ಬೈಕ್ ಮೆರವಣಿಗೆಯ ಮೂಲಕ ಅಭ್ಯರ್ಥಿ ಪದ್ಮರಾಜ್ ಆಗಮಿಸಿದರು.

ಖ್ಯಾತ ವಾಗ್ಮಿ ವಿವೇಕ್ ರಾಜ್ ಮೌರ್ಯ ಮಾತನಾಡಿ ಪದ್ಮರಾಜ್ ಧಣಿಕನಲ್ಲ, ರಾಜಕೀಯ ಹಿನ್ನಲೆಯಿದ್ದವರಲ್ಲ, ಪದ್ಮರಾಜ್ ಒರ್ವ ಜನಪರ ವ್ಯಕ್ತಿ, ಸಾಮಾನ್ಯ ವ್ಯಕ್ತಿ, ಬಡವರ ಮಕ್ಕಳು ಗೆಲ್ಲಬೇಕು. ಪದ್ಮರಾಜ್ ಗೆದ್ದರೆ ಬ್ರಹ್ಮಶ್ರೀ ನಾರಾಯಣ ಗುರುಗಳ ವಾಣಿ ಗೆದ್ದಂತೆ, ಸಂವಿಧಾನದ ಆಶಯ ಗೆದ್ದಂತೆ ಎಂದರು.

ಸರಕಾರದ ಗ್ಯಾರಂಟಿ ಯೋಜ‌ನೆಗಳಿಂದ ಹಲವಾರು ಕುಟುಂಬಗಳು ಸಂತೋಷ ಹಾಗೂ ಸ್ವಾಭಿಮಾನದಿಂದ ಜೀವನ ಸಾಗಿಸುತ್ತಿದ್ದಾರೆ. ದಕ್ಷಿಣ ಕನ್ನಡದ ಜನ ವಿದ್ಯಾವಂತರು.ಗೊತ್ತಿದೆ ಈ ಬಾರಿ ಯಾರನ್ನು ಗೆಲ್ಲಿಸಬೇಕೆಂದು. ಕಾಂಗ್ರೆಸ್ ಪಕ್ಷ ಖಂಡಿತವಾಗಿ ಗೆದ್ದೆ ಗೆಲ್ಲುತ್ತದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿ ನಮ್ಮ ಅಭ್ಯರ್ಥಿ ಪದ್ಮರಾಜ್ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿಯವರ ಶಿಷ್ಯ. ಅವರ ಗೆಲುವು ಅದು ನಮ್ಮ ಗೆಲುವು. ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಬಹುಮತದಿಂದ ಗೆಲುವನ್ನು ಸಾಧಿಸಲಿದೆ ಎಂದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಮಾಜಿ ಸಚಿವರಾದ ರಮಾನಾಥ ರೈ, ಗಂಗಾಧರ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್,ಬ್ಕಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಸತೀಶ್ ಕಾಶಿಪಟ್ಣ,ನಾಗೇಶ್ ಗೌಡ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜನ್ ಜಿ.ಗೌಡ, ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್,ಕಾಂಗ್ರೆಸ್ ಮುಖಂಡರಾದ ರಾಜ್ ಶೇಖರ್ ಅಜ್ರಿ,ಸಾಹುಲ್ ಹಮೀದ್, ಧರಣೇಂದ್ರ ಕುಮಾರ್,ಶೇಖರ್ ಕುಕ್ಕೇಡಿ,ಲಕ್ಷ್ಮೀಶ, ಮೋಹನ್ ಕಲ್ಮಂಜ, ಕೇಶವ ಬೆಳಾಲ್, ಪ್ರತಿಭಾ ಕುಳಾಯಿ, ವಂದನ ಭಂಢಾರಿ, ಸುಂದರ ಗೌಡ ಇಚ್ಚಿಲ, ಹಾಗೂ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೀತಾಂಬರ ಹೆರಾಜೆ, ರಾಜು ಪೂಜಾರಿ ಕಾಶಿಪಟ್ಣ, ಯೋಗೀಶ್ ಕುಮಾರ್ ನಡಕ್ಕರ, ಭರತ್ ರಾಜ್ ರಾಜ್ ಶೇಖರ್ ರೈ,ಸುಭಾಶ್ಚಂದ್ರ ರೈ,ಪುನೀತ್ ಮಡಂತ್ಯಾರು, ಬಾಲಕೃಷ್ಣ ಕೇರಿಮಾರ್,ರವೀಂದ್ರ ಪೂಜಾರಿ ನಾರಾವಿ,ಸಂಜೀವ ಪೂಜಾರಿ ಕೊಡಂಗೆ, ಶಾಂತಲ ಗಟ್ಟಿ, ದೇವಿಪ್ರಸಾದ್ ಅರ್ವ, ಪ್ರಶಾಂತ್ ವೇಗಸ್, ಸಂತೋಷ್ ಕುಮಾರ್ ಲಾಯಿಲ,ಸಂದೀಪ್ ಅರ್ವ, ಜಯವಿಕ್ರಮ್, ಮನೋಹರ್ ಇಳಂತಿಳ, ವಿನ್ಸೆಂಟ್ ಮಡಂತ್ಯಾರು, ಪದ್ಮನಾಭ ಸಾಲಿಯಾನ್ ಮಾಲಾಡಿ, ಅರವಿಂದ್ ಜೈನ್ ಮಡಂತ್ಯಾರು,ಸತೀಶ್ ಕುಮಾರ್ ಮಿತ್ತಮಾರ್, ನಿತೇಶ್ ಕೋಟ್ಯಾನ್, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಕಲ್ಮಂಜ ಪ್ರೌಢಶಾಲೆಯ ವಿದ್ಯಾರ್ಥಿಗಳು ಯೋಗಾಸನದಲ್ಲಿ ವಿಭಾಗಮಟ್ಟಕ್ಕೆ ಆಯ್ಕೆ

Suddi Udaya

ಸಹಕಾರ ಸಂಘಗಳ ಅಧಿಕಾರಕ್ಕೆ ತಡೆ ನೀಡಿದ್ದ ಸರಕಾರದ ಸುತ್ತೋಲೆಗೆ ಹೈಕೋರ್ಟ್ ತಡೆಯಾಜ್ಞೆ

Suddi Udaya

ಬೆಳ್ತಂಗಡಿ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಇದರ ಸಹ ಘಟಕವಾದ ರಾಜಕೇಸರಿ ಬಂಟ್ವಾಳ ತಾಲೂಕು ಇದರ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆ: ಪಾದಚಾರಿಗಳ ಮೇಲೆ ಹರಿದ ಲಾರಿ: ಇಬ್ಬರು ಸಾವು

Suddi Udaya

ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಉಜಿರೆ ಮುಂಡತ್ತೋಡಿ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಚಾವಡಿಯಲ್ಲಿ ಶ್ರಮದಾನ

Suddi Udaya

ಜೆಡಿಎಸ್ ಪಕ್ಷದ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀರಾಮ ಕ್ಷೇತ್ರ, ಕಾಜೂರು ದಗಾ೯ಕ್ಕೆ ಭೇಟಿ

Suddi Udaya
error: Content is protected !!