September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಬೆಳ್ತಂಗಡಿ : ವಿಕಲಚೇತನ ವ್ಯಕ್ತಿಯನ್ನು ಮನೆಯವರು ಎತ್ತಿಕೊಂಡು ಮತಗಟ್ಟೆಗೆ ಹೋಗಿ ಮತ ಚಲಾವಣೆ

ಬೆಳ್ತಂಗಡಿ; ಚುನಾವಣಾ ಆಯೋಗ ಸರಕಾರ ವಿಕಲಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ನೀಡಿದೆ ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಬೆಳ್ತಂಗಡಿ ನಗರದಲ್ಲಿ ವಿಕಲಚೇತನ ವ್ಯಕ್ತಿಯನ್ನು ಮನೆಯವರು ಎತ್ತಿಕೊಂಡು ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕಾಗಿ ಬಂತು.


ಬೆಳ್ತಂಗಡಿ ನಗರದ ನಿವಾಸಿ ಬಿ.ಎ ಮೊಹಮ್ಮದ್ ಅವರು ಎಂಡೋ ಸಲ್ಫಾನ್ ಸಂತ್ರಸ್ತರು, ಎದ್ದು ನಡೆಯಲು ಶಕ್ತಿಯಿಲ್ಲದ 30ವರ್ಷ ಪ್ರಾಯದ ಇವರು ಚಾಪೆಹಿಡಿದು ಮಲಗಿದ್ದಲ್ಲಿಯೇ ಇದ್ದಾರೆ. ಹಿಂದೆಲ್ಲ ಇವರನ್ನು ಅವರ ತಂದೆಯೇವರೇ ಎತ್ತಿಕೊಂಡು ಹೋಗಿ ಮತಚಲಾಯಿಸುತ್ತಿದ್ದರು. ಅವರಿಗೆ ಒಂದೂವರೆ ವರ್ಷದ ಹಿಂದೆ ನಡೆದ ಅಪಘಾತದ ಬಳಿಕ ಅವರಿಗೇ ನಡೆಯಲು ಕಷ್ಟವಾಗಿದೆ. ಎಂಡೋ ಪೀಡಿತರಾಗಿರುವ ಇವರ ಹೆಸರನ್ನು ವಿಕಲಚೇತನರ ಪಟ್ಟಿಯಲ್ಲಿ ಸೇರಿಸಿ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ನೀಡಬೇಕು ಎಂದು ಪಟ್ಟಣ ಪಂಚಾಯತಿನ ವಿಕಲಚೇತನರ ಪುನರ್ವಸತಿ ವಿಭಾಗದಿಂದ ಕಂದಾಯ ಇಲಾಖೆಗೆ ಪಟ್ಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ ಕಂದಾಯ ಇಲಾಖೆ ಈ ಬಗ್ಗೆ ಗಮನಹರಿಸಿಲ್ಲ. ಆ ಕಾರಣಕ್ಕಾಗಿ ಈ ಬಾರಿಯ ಚುನಾವಣೆಯಲ್ಲೂ ಅವರ ಹೆಸರು ವಿಕಲಚೇತನ ಮತದಾದರರ ಪಟ್ಟಿಯಲ್ಲಿ(ಪಿಡಬ್ಕ್ಯುಡಿ) ನಾಪತ್ತೆಯಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯತಿನಲ್ಲಿ ವಿಚಾರಿಸಿದರೆ ನಾವು ಕಳುಹಿಸಿದ್ದೇವೆ ಆದರೆ ಎಂಟ್ರಿ ಆಗಿಲ್ಲ ಎಂಬ ಉತ್ತರ ಬರುತ್ತಿದೆ.
ಇಂದು ಬಿ.ಎ.ಮೊಹಮ್ಮದ್ ಅವರನ್ನು ಅವರ ಸಂಬಂಧಿಕರೇ ಎತ್ತಿಕೊಂಡು ಬೆಳ್ತಂಗಡಿ ಮಾದರಿ ಶಾಲೆಯ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಅಧಿಕಾರಿಗಳ ನಿರ್ಲಕ್ಷ್ಯದ ನಡುವೆಯೂ ವಿಕಲ ಚೇತನರಾಗಿರುವ ಇವರು ತಮ್ಮ ಮತದಾನದ ಹಕ್ಕನ್ನು ಸಮರ್ಪಕ ವಾಗಿ ಚಲಾಯಿಸಿದ್ದಾರೆ.

Related posts

ಉಜಿರೆ: ಅನುಗ್ರಹ ಕಾಲೇಜಿನಲ್ಲಿ ಕನ್ನಡ ಸಂವರ್ಧನೆ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಸುಜಿತಾ ವಿ. ಬಂಗೇರ ಮತ್ತು ಬಿನುತಾ ಬಂಗೇರ ಭೇಟಿ

Suddi Udaya

ಗುರುವಾಯನಕೆರೆ: ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವ: ತುಳುನಾಡ ದೈವಾರಾಧಕರ ಮಹಾ ಸಮ್ಮೇಳನ‌ ಪರ್ವ-2024 ಉದ್ಘಾಟನೆ

Suddi Udaya

ಕರಂಬಾರು: ಮಾನಸಿಕ ಖಿನ್ನತೆಗೆ ಒಳಗಾಗಿ ನಾಗೇಶ್ ನೇಣು ಬಿಗಿದು ಆತ್ಮಹತ್ಯೆ

Suddi Udaya

ಮಾಲಾಡಿ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!