24.5 C
ಪುತ್ತೂರು, ಬೆಳ್ತಂಗಡಿ
April 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನ ಪ್ರಾಧ್ಯಾಪಕ ಡಾ. ಶರತ್ ಕುಮಾರ್ ಟಿ ಕೆ ರವರಿಗೆ ಬೀಳ್ಕೊಡುಗೆ

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿನ ಪ್ರಾಧ್ಯಾಪಕರಾದ ಡಾ. ಶರತ್ ಕುಮಾರ್ ಟಿ ಕೆ ಇವರು ಏ. 30ರಂದು ಸರ್ಕಾರಿ ಸೇವೆಯಿಂದ ನಿವೃತ್ತಿ ಪಡೆದಿದ್ದು. ಇವರನ್ನು ಕಾಲೇಜಿನ ವಿದ್ಯಾರ್ಥಿ ವೃಂದ ಹಾಗೂ ಎಲ್ಲಾ ಅಧ್ಯಾಪಕ- ಅಧ್ಯಾಪಕೇತರ ವೃಂದದವರು ಶರತ್ ಕುಮಾರ್ ದಂಪತಿಗಳನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಇಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಪ್ರಾರಂಭಿಸಿ ನಂತರ ಸರ್ಕಾರಿ ಸೇವೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸದುರ್ಗದಲ್ಲಿ ನೇಮಕಗೊಂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಹಾಗೂ ಬೆಳ್ತಂಗಡಿಯಲ್ಲಿ ಸುಮಾರು 37 ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತಿಯನ್ನು ಹೊಂದಿದ್ದಾರೆ. ಶ್ರೀಯುತರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿ ಪ್ರಾಂಶುಪಾಲರಾಗಿ ಕಾಲೇಜು ನ್ಯಾಕ್ ನಲ್ಲಿ ಉತ್ತಮ ಶ್ರೇಣಿ ಪಡೆಯಲು ಕಾರಣಿಭೂತರಾಗಿದ್ದಾರೆ.

Related posts

ಎ.30: ಬೆನಕ ಹೆಲ್ತ್ ಸೆಂಟರ್ ನಲ್ಲಿ ರೇಡಿಯೋಲಜಿ ವಿಭಾಗ ಸಿ.ಟಿ. ಸ್ಕ್ಯಾನಿಂಗ್ Siemens Somatom Go Now 32 Slice ಪ್ರಾರಂಭೋತ್ಸವ

Suddi Udaya

ಅಭ್ಯಾಸ್ ಮತ್ತು ಪೈ ಅಕಾಡೆಮಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತಾ ತರಬೇತಿ ಕಾರ್ಯಾಗಾರ

Suddi Udaya

ನಾವೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀರಾಮೋತ್ಸವ: ಕರಸೇವಕರಿಗೆ ಗೌರವಾರ್ಪಣೆ

Suddi Udaya

ವೇಣೂರು: ಅನಾಥರಾಗಿ ತಿರುಗಾಡುತ್ತಿರುವ ವಯೋವೃದ್ಧ: ವಾರಸುದಾರರ ಪತ್ತೆಗಾಗಿ ಮನವಿ

Suddi Udaya

ಕಳಿಯ ಗ್ರಾ.ಪಂ. ವ್ಯಾಪ್ತಿಯ ಅಂಗನವಾಡಿಯ ಜಾಗವನ್ನು ಸ್ಥಳೀಯರೊಬ್ಬರು ಅತಿಕ್ರಮಿಸಿದ ಪ್ರಕರಣ: ಸಾರ್ವಜನಿಕರು ಮತ್ತು ಅಂಗನವಾಡಿ ಬಾಲ ವಿಕಾಸ ಸಮಿತಿ ವತಿಯಿಂದ ಆಕ್ಷೇಪ: ತಹಶೀಲ್ದಾರರಿಗೆ ಹಾಗೂ ಪೋಲಿಸ್ ಠಾಣೆಗೆ ದೂರು

Suddi Udaya

ನಡ: ಮಳೆಯಿಂದ ಹಾನಿಗೊಳಗಾದ ಸ್ಥಳಕ್ಕೆ ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಭೇಟಿ

Suddi Udaya
error: Content is protected !!