ಬೆಳ್ತಂಗಡಿ: ಬಡವರ ಸೇವೆಯೇ ನಮ್ಮ ಧ್ಯೇಯ ಎಂಬ ಪರಿಕಲ್ಪನೆಯೊಂದಿಗೆ ಸುಮಾರು 82 ಅಶಕ್ತ ಬಡಕುಟುಂಬಗಳಿಗೆ ಸಹಾಯಹಸ್ತ ನೀಡಿ ಯುವಕರ ಸ್ಪೂರ್ತಿಯ ಚಿಲುಮೆಯಾದ “ವೀರಾಂಜನೇಯ ಸೇವಾ ಸಮಿತಿ” ವತಿಯಿಂದ 78, 79ನೇ ಸೇವಾಯೋಜನೆಯನ್ನು ಎರಡು ಬಡಕುಟುಂಬಕ್ಕೆ ಸಹಾಯಹಸ್ತ ನೀಡಲಾಯಿತು.
78ನೇ ಸೇವಾಯೋಜನೆಯ ಹಸ್ತಾಂತರ:-
ಕಡಬ ತಾಲೂಕಿನ ಏನೇಕಲ್ಲು ಗ್ರಾಮದ 4 ವರ್ಷ ಪ್ರಾಯದ ವಂಶಿ ಎಂಬ ಪುಟ್ಟ ಕಂದಮ್ಮ ಕಳೆದ ಎರಡು ತಿಂಗಳುಗಳಿಂದ blood ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದಳು. ಇವಳು ಕೆಎಂಸಿ ಹಾಸ್ಪಿಟಲ್ ಅತ್ತಾವರದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಇದುವರೆಗೆ ಅಂದಾಜು 4 ಲಕ್ಷದವರೆಗೆ ಹಾಸ್ಪಿಟಲ್ ವೆಚ್ಚವನ್ನು ಭರಿಸಿರುತ್ತಾರೆ. ಮುಂದಿನ ಚಿಕಿತ್ಸೆ ನಡೆಸಲು 15 ಲಕ್ಷಕ್ಕಿಂತಲೂ ಅಧಿಕ ಹಣದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿರುತ್ತಾರೆ. ಈ ಬಡಕುಟುಂಬದ ಕಷ್ಟವನ್ನು ಗುರುತಿಸಿದ ಶ್ರೀ ವೀರಾಂಜನೇಯ ಸೇವಾ ಸಮಿತಿಯು ತಮ್ಮ ತಂಡದಿಂದ ಸಂಗ್ರಹಿಸಿದ 12,000ರೂ ಸಹಾಯಧನದ ಚೆಕ್ಕನ್ನು ತಂಡದ ಸಹೋದರರ ಸಮ್ಮುಖದಲ್ಲಿ ವಂಶಿ ಇವರ ತಂದೆ ಕೈಯಲ್ಲಿ ಸಹಾಯಧನವನ್ನು ಹಸ್ತಾಂತರಿಸಲಾಯಿತು.
79ನೇ ಸೇವಾಯೋಜನೆಯ ಹಸ್ತಾಂತರ:-
ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ನಿವಾಸಿಯಾದ ಗೌತಮ್ ಇವರು, ರಸ್ತೆ ಅಪಘಾತಕ್ಕೊಳಗಾಗಿ ತನ್ನ ಹೊಟ್ಟೆಗೆ ಬಲವಾಗಿ ಪೆಟ್ಟು ಬಿದ್ದು ಪ್ರಸ್ತುತ ಕೆ.ಎಸ್ ಹೆಗ್ಡೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗಾಗಿ ಸುಮಾರು 2 ಲಕ್ಷಕ್ಕೂ ಅಧಿಕ ಹಣ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ. ಇವರ ತಂದೆ ಮತ್ತು ತಾಯಿ ಇಬ್ಬರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದು ಮಗನ ಚಿಕಿತ್ಸಾ ವೆಚ್ಚ ಭರಿಸಲು ಕಂಗಾಲಾಗಿದ್ದರು. ಈ ಬಡಕುಟುಂಬದ ಕಷ್ಟವನ್ನು ಗುರುತಿಸಿದ ಶ್ರೀ ವೀರಾಂಜನೇಯ ಸೇವಾ ಸಮಿತಿಯು ತಮ್ಮ ತಂಡದಿಂದ ಸಂಗ್ರಹಿಸಿದ 12,000ರೂ ಸಹಾಯಧನದ ಚೆಕ್ಕನ್ನು ತಂಡದ ಸಹೋದರರ ಸಮ್ಮುಖದಲ್ಲಿ ಗೌತಮ್ ಇವರ ತಾಯಿಯ ಕೈಯಲ್ಲಿ ಸಹಾಯಧನವನ್ನು ಹಸ್ತಾಂತರಿಸಲಾಯಿತು.