September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪೆರಿಯಶಾಂತಿಯಲ್ಲಿ ಸ್ಕಿಡ್ ಆಗಿ ಬಿದ್ದ ಬೈಕ್ : ಬೈಕ್ ಸವಾರನಿಗೆ ಗಾಯ: ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಕೌಕ್ರಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ರಾ ಹೇ 75 ರಲ್ಲಿ ಮೋಟಾರು ಸೈಕಲ್ ಸ್ಕಿಡ್ ಯಾಗಿ ಬಿದ್ದು ಗಾಯಗೊಂಡ ಘಟನೆ ಮೇ 6 ರಂದು ನಡೆದಿದೆ.

ರೆಖ್ಯಾ ನಿವಾಸಿ ನವೀನ್‌ ನೀಡಿದ ದೂರಿನಂತೆ ಮೇ 06 ರಂದು ನವೀನ್ ರವರ ದೊಡ್ಡಪ್ಪನ ಮಗ ಮನೀಷ್ ರವರು ಕೌಕ್ರಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ರಾ ಹೇ 75 ರಲ್ಲಿ ಮನೀಷ್‌ ನ ಮೋಟಾರು ಸೈಕಲ್ ಕೆಎ-21-ಇಎ-1440 ನೇಯದು ಸ್ಕಿಡ್ ಆಗಿ ಬಿದ್ದು ಗಾಯಗೊಂಡಿರುವ ವಿಚಾರ ತಿಳಿದಂತೆ ನವೀನ್ ಮತ್ತು ಅವರ ದೊಡ್ಡಪ್ಪ ಉಲಹನ್ನನ್ ರವರು ಸ್ಥಳಕ್ಕೆ ಹೋಗಿ ಮನೀಷ್ ರವರನ್ನು ಚಿಕಿತ್ಸೆಯ ಬಗ್ಗೆ ನೆಲ್ಯಾಡಿ ಆಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿದ್ದು, ಈ ಆಪಘಾತದ ಬಗ್ಗೆ ವಿಚಾರವನ್ನು ತಿಳಿಯಲಾಗಿ ಮೇ 06 ರಂದು ಮದ್ಯಾಹ್ನ ಕೌಕ್ರಾಡಿ ಗ್ರಾಮದ ಪೆರಿಯ ಶಾಂತಿ ಎಂಬಲ್ಲಿ ರಾ ಹೇ 75 ರಲ್ಲಿ ಮನೀಷ್ ನು ಅವನ ಮೋಟಾರು ಸೈಕಲ್ ನ್ನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿದ್ದರಿಂದ ಮೋಟಾರು ಸೈಕಲ್ ಸ್ಕಿಡ್ ಆಗಿ ಬಿದ್ದು ಗಂಭೀರ ಸ್ವರೂಪದ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ:54/2024 ಕಲಂ:279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಗುರುವಾಯನಕೆರೆ: ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವ: ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಕೊಯ್ಯೂರು ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮಸಭೆ

Suddi Udaya

ರೆಖ್ಯಾ: ಮಕ್ಕಳ ಕುಣಿತ ಭಜನಾ ಸಮಾರೋಪದ ಉದ್ಘಾಟನಾ ಸಮಾರಂಭ

Suddi Udaya

ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ – ಶಾಲಾ ಅಭಿವೃದ್ಧಿ ಸಮಿತಿ ರಚನೆ

Suddi Udaya

ಮೇ 31: ಉಜಿರೆಯಲ್ಲಿ ಡಿ.ಡಿ ಮೆನ್ಸ್ & ವಿಮೆನ್ಸ್ ಸೆಂಟರ್ ಮಲ್ಟಿ ಶೋರೂಮ್ ಉದ್ಘಾಟನೆ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಳಿ ನಿವಾಸಿ ಶ್ರೀಮತಿ ಕಮಲ ನಿಧನ

Suddi Udaya
error: Content is protected !!