ಗುರುವಾಯನಕೆರೆ: ವಿದ್ವತ್ ಆಡಳಿತ ಮಂಡಳಿ ಪ್ರತಿಭಾನ್ವಿತ ಪಿ.ಯು ಆಕಾಂಕ್ಷಿಗಳನ್ನು ದತ್ತು ಪಡೆದು ಎರಡು ವರ್ಷಗಳ ಉಚಿತ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದೆ. “ವಿದ್ವತ್ ಪ್ರವೇಶ ಪರೀಕ್ಷೆಯಲ್ಲಿ” ಶೇ.90 ಗಿಂತ ಅಧಿಕ ಅಂಕಗಳಿಸಿದ ಎಲ್ಲಾ ಪ್ರತಿಭಾನ್ವಿತರನ್ನು ದತ್ತು ಪಡೆಯಲು ಸಂಸ್ಥೆ ನಿರ್ಧರಿಸಿದೆ. ಅದರೊಂದಿಗೆ ಶೇ.85 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ, ಶೇ.80 ಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ ಕಾಲೇಜು ಶುಲ್ಕದಲ್ಲಿ 75% ರಷ್ಟು ರಿಯಾಯಿತಿ, ಶೇ. 75 ಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ ಕಾಲೇಜು ಶುಲ್ಕದಲ್ಲಿ 50% ರಷ್ಟು ರಿಯಾಯಿತಿಯನ್ನು ಕೊಡಲು ಸಂಸ್ಥೆ ನಿರ್ಧರಿಸಿದೆ. ಮೇ 10 ರಿಂದ 19 ರೊಳಗೆ ಯಾವುದೇ ದಿನ ವಿದ್ವತ್ ಕಾಲೇಜಿಗೆ ಬಂದು ಪ್ರವೇಶ ಪರೀಕ್ಷೆ ಬರೆಯಬಹುದು. ಪ್ರಶ್ನೆಗಳು ಒಅಕಿ’s ಮಾದರಿಯಲ್ಲಿದ್ದು ಹತ್ತನೇ ತರಗತಿ ಗಣಿತದ 20, ವಿಜ್ಞಾನದ 20, ಹಾಗೂ ಇಂಗ್ಲೀಷ್‌ನ 10 ಪ್ರಶ್ನೆಗಳನ್ನು ಹೊಂದಿರುವವು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 95% ದಿಂದ 100% ದ ವರೆಗೆ ಅಂಕಗಳಿಸಿದ ವಿದ್ಯಾರ್ಥಿಗಳು ವಾಣಿಜ್ಯ (ಕಾಮರ್ಸ್) ವಿಷಯವನ್ನು ಓದುವ ಆಸಕ್ತಿ ಹೊಂದಿದ್ದರೆ, ಆ ವಿದ್ಯಾರ್ಥಿಗಳಿಗೆ ಕಾಲೇಜು ಮತ್ತು ಹಾಸ್ಟೆಲ್ ಶುಲ್ಕದಲ್ಲಿ ಭಾರೀ ರಿಯಾಯಿತಿ ಅಥವಾ ಸಂಪೂರ್ಣ ವಿನಾಯಿತಿಯನ್ನು ನೀಡಲಾಗುವುದು.
ವಿದ್ವತ್ ಪಿ.ಯು ಕಾಲೇಜು, ಗುರುವಾಯನಕೆರೆ, ಬೆಳ್ತಂಗಡಿ, ದ.ಕ
ವೆಬ್ ಸೈಟ್ – www.vidvath.org
ಹೆಚ್ಚಿನ ಮಾಹಿತಿಗಾಗಿ ಸಂರ‍್ಕಿಸಿ :8050902319, 7618718791, 7618718794