23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಲ್ಲಿ ದೇವಸ್ಥಾನದ ವಠಾರದಲ್ಲಿ ಸಂಗಮ ಕಲಾವಿದರು ಉಜಿರೆ ಇದರ 14ನೇ ವರ್ಷದ ವಾರ್ಷಿಕೋತ್ಸವ; ಸನ್ಮಾನ

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿ ಹಾಗೂ ಗಣಪತಿ ದೇವರಿಗೆ ಮೇ 11ರಂದು ನೀಲೇಶ್ವರದ ವೇದಮೂರ್ತಿ
ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ, ಗಣ ಹೋಮ ಬಿಂಬಶುದ್ದಿ ಕಲಶ ಪೂಜೆ, ಕಲಶಾ ಅಭಿಷೇಕ ನೆರವೇರಿತು,

ಸಂಜೆ ನಡೆದ ಉಜಿರೆ ಸಂಗಮ ಕಲಾವಿದರ ವತಿಯಿಂದ, 14ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಕೆ ಧನಂಜಯ ರಾವ್ ವಹಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮುನಿರಾಜ ಅಜ್ರಿ ಮಾಜಿ ಅಧ್ಯಕ್ಷ ವ್ಯವಸಾಯ ಸೇವಾ ಸಹಕಾರಿ ಸಂಘ ಬೆಳ್ತಂಗಡಿ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ವಾಸುದೇವ ರಾವ್ ಕಕ್ಕೆನೇಜಿ, ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯ ಸೇನರಬೆಟ್ಟು, ಕೊಲ್ಲಿ ದೇವಸ್ಥಾನ ಆಡಳಿತ ಅಧಿಕಾರಿ ಮೋಹನ್ ಬಂಗೇರ , ಕೇಶವ ಪಡಕೆ, ಪ್ರಧಾನ ಕಾರ್ಯದರ್ಶಿ ದಾಸಪ್ಪ ಗೌಡ ಕಾಂಜಾನು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲೋಕೇಶ್ ರಾವ್, ಹಿರಿಯ ರಂಗ ಕಲಾವಿದ ಹಾಗೂ ಸಾಹಿತಿ, ಸದಾನಂದ, ಬಿ, ಮುಂಡಾಜೆ, ಗಿರೀಶ್ ಹೊಳ್ಳ, ಚಿದಾನಂದ ರಾವ್, ಉಪಸ್ಥಿತರಿದ್ದರು,


ಈ ವೇಳೆ ಸಂಗಮ ಕಲಾವಿದರ ವತಿಯಿಂದ ಸದಾನಂದ ಮುಂಡಾಜೆ ಅವರನ್ನು ಸನ್ಮಾನಿಸಲಾಯಿತು. ಹಾಗೂ ಬಿಕೆ ಧನಂಜಯರಾವ್, ಲೋಕೇಶ್ ರಾವ್ ಬಿಕೆ, ಅರಣ್ಯ ಇಲಾಖೆ ಸಿಬ್ಬಂದಿ ರಾಜು, ಹಾಗೂ ಇತರ ಸಮಿತಿಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸದಾನಂದ ಮುಂಡಾಜೆ ರವರು ಮನುಷ್ಯನ ದೇಹಕ್ಕೆ ಮಾತ್ರ ವಯಸ್ಸು ಕಲಾ ಸೇವೆಗೆ ವಯಸ್ಸಿನ ಅಡ್ಡಿ ಬರುವುದಿಲ್ಲ ನನ್ನ ಜೀವನದಲ್ಲಿ ಸುಮಾರು 25ಕ್ಕೂ ಹೆಚ್ಚು ಜನರಿಗೆ ಯಕ್ಷಗಾನದ ತರಬೇತಿ ನೀಡಿ, ಅವರ ಪ್ರತಿಭೆಯನ್ನು, ದೇಶದಾದ್ಯಂತ, ಪಸರಿಸುವಂತೆ ಮಾಡಿದ ತೃಪ್ತಿ ನನಗಿದೆ, ಅಂತ ಪ್ರತಿಭೆಗಳನ್ನು, ಗುರುತಿಸುವ ಇನ್ನಷ್ಟು ವೇದಿಕೆಗಳು, ಅವರಿಗೆಲ್ಲಾ ಸಿಗಲಿ, ನನ್ನ ವೃತ್ತಿಜೀವನಕೆ ಅಂಕದ ಪರದೆ ಬಿದ್ದಿರಬಹುದು, ಆದರೆ ನನ್ನ ಪ್ರತಿಭೆಗೆ ಬಿದ್ದಿಲ್ಲ, ಇನ್ನು ಮುಂದೆ ಕೂಡ ನನ್ನ ಸೇವೆ ಮುಂದುವರಿಯಲಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಲ್ಲಿ, ಭುಜಬಲಿ ಧರ್ಮಸ್ಥಳ, ಸತೀಶ್ ರಾವ್, ಕೃಷ್ಣಪ್ಪ ಪೂಜಾರಿ ಕಿಲ್ಲೂರು, ಸಂಗಮ ತಂಡದ ಸದಸ್ಯ ಅಶೋಕಚಾರ್ಯ, ಗಿರೀಶ್ ಹೊಳ್ಳ, ಹಾಗೂ ತಂಡದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಜ್ಯೋತಿ ವಿಜಯ ಗೌಡ ಇವರ ತಂಡದ ವತಿಯಿಂದ, ಕೊಲ್ಲಿ ಡುಂತಿ ದುರ್ಗೆ, ತುಳು ಭಕ್ತಿದ ಸುಗಿಪು, ಪೋಸ್ಟರ್ ಬಿಡುಗಡೆ ಮಾಡುವುದರ ಜೊತೆಗೆ ಇದನ್ನುಲೆಡ್ ಪರದೆಯಲ್ಲಿ ವಿಸ್ತರಿಸಲಾಯಿತು
ವಿನಯ ಚಂದ್ರ ಸೇನರ ಬೆಟ್ಟು ಸ್ವಾಗತಿಸಿ, ರಮೇಶ್ ಫೈಲಾರ್ ವಂದಿಸಿದರು, ಪುಷ್ಪಕಲಾ ಕೊಲ್ಲಿ ಪಾಲು ನಿರೂಪಿಸಿದರು,

ನಂತರ ಸಂಗಮ ಕಲಾವಿದರ ತಂಡದಿಂದ ಸುಬ್ಬು ಸಂಟ್ಯಾರ್ ವಿರಚಿತ ”ಪಚ್ಚು ಪಾತೆರೊಡು” ನಾಟಕ
ಪ್ರದರ್ಶನಗೊಂಡಿತು

Related posts

ಶಿಬಾಜೆ: ಜಮೀನಿಗೆ ಅಳವಡಿಸಿದ ಮರದ ಬೇಲಿಯನ್ನು ತೆಗೆದು ಹಾಕಿ ಅಡಿಕೆಕೊಂಡು ಹೋದ ಪ್ರಕರಣ: ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲು

Suddi Udaya

ಕರಾಯ: ನೀರು ಕುಡಿಯುವ ನೆಪದಲ್ಲಿ ಮನೆಯೊಳಗೆ ಬಂದು ಮಹಿಳೆಯ ಚಿನ್ನಾಭರಣ ದೋಚಿ ಪರಾರಿ

Suddi Udaya

ಹರೀಶ್ ಪೂಂಜರವರ ಗೆಲುವಿಗಾಗಿ ಅಭಿಮಾನಿಗಳಿಂದ ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆಯ ಸಂಕಲ್ಪ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ., ಪಟ್ಟಣ ಪಂಚಾಯತ್ ಸದಸ್ಯರ ಮತ್ತು ಕಾರ್ಯಕರ್ತರ ಸಭೆ

Suddi Udaya

ಉಜಿರೆ ಶ್ರೀ ಧಂ.ಮಂ. ಪ.ಪೂ ಕಾಲೇಜು : ಎನ್ನೆಸ್ಸೆಸ್ ವತಿಯಿಂದ ಸ್ವಚ್ಛತಾ ಹೀ ಸೇವಾ ಅಭಿಯಾನ

Suddi Udaya

ಕಡಿರುದ್ಯಾವರ ಹೇಡ್ಯದಲ್ಲಿ ಅಂಚೆ ಕಛೇರಿ ಸ್ಥಳಾಂತರಗೊಂಡು ಉದ್ಘಾಟನೆ

Suddi Udaya
error: Content is protected !!