September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು ಐಟಿಐ : ಟೊಯೋಟೊ ನೇಮಕಾತಿ ಶಿಬಿರ

ವೇಣೂರು: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಯಲ್ಲಿ ಪ್ರಖ್ಯಾತ ಟೊಯೋಟಾ ಸಂಸ್ಥೆಯವರು ಎರಡು ದಿನಗಳ ನೇಮಕಾತಿ ಶಿಬಿರವನ್ನು ನಡೆಸಿದ್ದು, ವೇಣೂರು ಐಟಿಐ ಮತ್ತು ಆಸುಪಾಸಿನ ಕೆಲವು ಐಟಿಐಗಳ ವಿದ್ಯಾರ್ಥಿಗಳ ಸಹಿತ ಒಟ್ಟು 273 ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುತ್ತಾರೆ.

ಬರಹ ಪರೀಕ್ಷೆ, ಮೌಖಿಕ ಸಂದರ್ಶನ, ದೈಹಿಕ ಆರೋಗ್ಯ ಪರೀಕ್ಷೆ ಮುಂತಾದ ಮೂರು ಹಂತಗಳಲ್ಲಿ ಆಯ್ಕೆ ನಡೆಸಲಾಯಿತು. ಟೊಯೋಟಾ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳಾದ ದಯಾನಂದ ಆರ್., ರೋಷನ್, ರುದ್ರ ಅವರಲ್ಲದೇ ತಾಂತ್ರಿಕ ಪರಿಣಿತರನ್ನೊಳಗೊಂಡ ಇನ್ನಿತರ ಅಧಿಕಾರಿಗಳು ಆಯ್ಕೆ ಶಿಬಿರವನ್ನು ನಡೆಸಿದರು.

ದಯಾನಂದ್ ಆರ್. ರವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಆಧುನಿಕ ಜಗತ್ತಿನಲ್ಲಿ ತಾಂತ್ರಿಕ ಕೌಶಲ್ಯಕ್ಕೆ ವಿಪರೀತ ಬೇಡಿಕೆಗಳಿದ್ದು, ತಾಂತ್ರಿಕ ಕೌಶಲ್ಯವನ್ನು ಹೊಂದಿರುವ ಯಾವುದೇ ವ್ಯಕ್ತಿಗೆ ಉತ್ತಮ ಭವಿಷ್ಯವಿದೆ. ಕಂಪನಿಗಳಲ್ಲಿ ಇದೀಗ ಮಹಿಳೆಯರನ್ನು ನೇಮಕಾತಿ ಮಾಡುತ್ತಿದ್ದು, ಐಟಿಐ ಕಲಿತ ಮಹಿಳೆಯರಿಗೆ ಕೂಡಲೇ ಬಹುರಾಷ್ಟ್ರೀಯ ಕಂಪನಿಗಳಲ್ಲಿ ನೌಕರಿ ಸಿಗುವುದು ನಿಶ್ಚಿತ ಎಂದು ತಿಳಿಸಿದರು. ಸಂಸ್ಥೆಯ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇಣೂರಿನ ಎಸ್.ಡಿ.ಎಂ. ಐಟಿಐ ಮಾತ್ರವಲ್ಲದೆ ಆಸುಪಾಸಿನ ಏಳು ಐಟಿಐ ಸಂಸ್ಥೆಗಳಿಂದ ನೇಮಕಾತಿ ಶಿಬಿರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ವಸಂತ ಬಂಗೇರರ ಹುಟ್ಟುಹಬ್ಬ ಪ್ರಯುಕ್ತ ನಡೆಯುವ ರಕ್ತದಾನ ಮತ್ತು ಕಬಡ್ಡಿ ಪಂದ್ಯಾಟಗಳಲ್ಲಿ ಭಾಗವಹಿಸುವಂತೆ ಪ್ರೀತಿತಾ ಬಂಗೇರ ಮನವಿ

Suddi Udaya

ಜೈನರಿಗೆ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹಿರಿಯೂರಿನ ಶಾಸಕ ಡಿ. ಸುಧಾಕರ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ನೀಡಿ: ನಿರಂಜನ್ ಜೈನ್ ಕುದ್ಯಾಡಿ‌

Suddi Udaya

ಎಸ್‌ಡಿಟಿಯು ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಮಾಸಿಕ ಸಭೆ.

Suddi Udaya

ಎಲ್.ಸಿ. ಆರ್. ಇಂಡಿಯನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆ

Suddi Udaya

ಅಪಘಾತದಲ್ಲಿ ಗಂಭೀರ ಗಾಯಗೊಂಡ ಉಜಿರೆಯ ಸುರೇಂದ್ರ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಬೆಳ್ತಂಗಡಿ ಸಂತ ತೆರೇಸಾ ಪ್ರೌಢ ಶಾಲೆಗೆ ಶೇ.88.60 ಫಲಿತಾಂಶ

Suddi Udaya
error: Content is protected !!