September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಳಂಜ: ತಾಯಿ-ಮಗನಿಗೆ ಜೀವ ಬೆದರಿಕೆ: ವೇಣೂರು ಪೊಲೀಸ್ ಠಾಣೆಗೆ ದೂರು

ಬೆಳ್ತಂಗಡಿ: ತನಗೆ ಹಾಗೂ ತನ್ನ ಮಗನಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಸಾರ್ವಜನಿಕರ ಎದುರಿನಲ್ಲಿ ಅನುಚಿತವಾಗಿ ವರ್ತಿಸಿರುವುದಲ್ಲದೇ, ನನ್ನ ಮಗನಿಗೆ ಜೀವ ಬೆದರಿಕೆ ಹಾಕಿರುವುದಾಗಿ ಬಳಂಜ ನಿವಾಸಿ ರತ್ನಾವತಿ ಅವರು ಬಳಂಜ ಪ್ರಕಾಶ್ ಶೆಟ್ಟಿ ಎಂಬವರ ವಿರುದ್ಧ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.


ಸಂತ್ರಸ್ತ ಮಹಿಳೆ ರತ್ನಾವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ತನ್ನ ಮಗ, ಅಶ್ವಿನ್ ಹಾಗೂ ಬಳಂಜ ನಿವಾಸಿ ಪ್ರಕಾಶ್‌ ಶೆಟ್ಟಿ ಎಂಬಾತನಿಗೂ ಈ ಹಿಂದೆಯೇ ಮನಸ್ತಾಪವಿದ್ದು, ಮೇ 20 ರಂದು ರಾತ್ರಿ, ಬಳೆಂಜ ಗ್ರಾಮದ ಮೂಡಾಯಿಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ, ವಿದ್ಯುತ್ ಸ್ಥಗಿತಗೊಂಡಿದ್ದು, ನನ್ನ ಮಗ ಹಾಗೂ ಮತ್ತೋರ್ವ ಜನರೇಟರ್ ಸ್ಟಾರ್ಟ್ ಮಾಡಲು ಹೋದಾಗ, ಕತ್ತಲಿನಲ್ಲಿ ನನ್ನ ಮಗ ಆಕಸ್ಮಿಕವಾಗಿ ಪ್ರಕಾಶ್ ಶೆಟ್ಟಿಯವರಿಗೆ ತಾಗಿರುತ್ತಾನೆ. ಆಗ ಆರೋಪಿತನು ನನ್ನ ಮಗನಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು, ಗಲಾಟೆಯ ಶಬ್ದ ಕೇಳಿ ಸ್ಥಳಕ್ಕೆ ಬಂದ ನನಗೂ ಅವ್ಯಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಸಾರ್ವಜನಿಕರ ಎದುರಿನಲ್ಲಿ ಅನುಚಿತವಾಗಿ ವರ್ತಿಸಿರುವುದಲ್ಲದೇ, ಮಗನನ್ನುದ್ದೇಶಿಸಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಆರೋಪಿಸಿ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.


ಹಲ್ಲೆಯಿಂದ ಗಾಯಗೊಂಡ ರತ್ನಾವತಿ ಹಾಗೂ ಹಾಗೂ ಅವರ ಮಗ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿ ನೀಡಿದ ದೂರಿನ ಮೇರೆಗೆ, ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ : 504, 323, 354, 506 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಬೆಳ್ತಂಗಡಿ: ಉಪನ್ಯಾಸಕ ಪುನೀತ್ ಕುಮಾರ್ ಬಯಲು ಅವರಿಗೆ ನುಡಿನಮನ ಕಾರ್ಯಕ್ರಮ

Suddi Udaya

ವಲಯ ಮಟ್ಟದ ಕ್ರೀಡಾಕೂಟ: ಎಲ್.ಸಿ.ಆರ್ ವಿದ್ಯಾ ಸಂಸ್ಥೆಗೆ ಪ್ರಶಸ್ತಿ

Suddi Udaya

ವೇಣೂರಿನಲ್ಲಿ ಶ್ರೀಕೃಷ್ಣ ಮಾರ್ಟ್ ಶುಭಾರಂಭ

Suddi Udaya

ಶತಾಯುಷಿ ಪಟ್ರಮೆ ಅಶ್ಚತ್ತಡಿ ನಿವಾಸಿ ಪಮಣ ಗೌಡ ನಿಧನ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ

Suddi Udaya

ಮರೋಡಿ: ಪಾಣಾಲು-ಉಚ್ಚೂರು ಸಂಪರ್ಕ ರಸ್ತೆಗೆ ದಾನಿಗಳಿಂದ ವೃತ್ತ ನಿರ್ಮಾಣ

Suddi Udaya
error: Content is protected !!