April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಕ್ಸೆಲ್ ನಲ್ಲಿ ದ್ವಿತೀಯ ಪಿಯುಸಿ ರಾಜ್ಯ ಟಾಪರ್ಸ್ ಗೆ ಲಕ್ಷ ಮೊತ್ತದೊಂದಿಗೆ, ಸನ್ಮಾನ

ಗುರುವಾಯನಕೆರೆ: ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ 597 ಅಂಕಗಳ ಮೂಲಕ ರಾಜ್ಯ ಕ್ಕೆ ಎರಡನೆಯ ಸ್ಥಾನ ಪಡೆದ ಧನ್ವಿ ಭಟ್ ಹಾಗೂ 595 ಅಂಕಗಳ ಮೂಲಕ ರಾಜ್ಯಕ್ಕೆ ನಾಲ್ಕನೆಯ ಸ್ಥಾನ ಪಡೆದ ಅನುಪ್ರಿಯ ಇವರನ್ನು ಆಕ್ಷರೋತ್ಸವ – ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.

ಶಾಲು ಹೊದಿಸಿ, ಪೇಟಾ ತೊಡಿಸಿ, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆಯ ಜೊತೆಗೆ, ತಲಾ ಒಂದು ಲಕ್ಷ ರೂಪಾಯಿ ನಗದು ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಧನ್ವಿ ಭಟ್ ಅವರ ತಾಯಿ ಪ್ರೀತಿಕಾ, ಅನುಪ್ರಿಯಾ ಹೆತ್ತವರಾದ ಚಂದ್ರಶೇಖರ ಪಿಕೆ, ಪೂರ್ಣಿಮಾ ಈ ಸಂದರ್ಭದಲ್ಲಿ ಜೊತೆಗಿದ್ದರು. ಅತಿಥಿಗಳಾದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ.ಸುಬ್ಬಣ್ಣ ರೈ, ಡಾ.ಶ್ರೀನಾಥ್ ಎಂ. ಪಿ, ಸಂಪತ್ ಸುವರ್ಣ ಹಾಗೂ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿ ಅಭಿರಾಮ್ ಬಿ.ಎಸ್, ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

ಧರ್ಮಸ್ಥಳ: ಮುಳಿಕ್ಕಾರ್ ಭಾರಿ ಗಾಳಿ ಮಳೆಗೆ ಹಾನಿಯಾದ ಮನೆಗೆ ಧರ್ಮಸ್ಥಳ ಗ್ರಾ.ಪಂ. ನಿಂದ ಆರ್ಥಿಕ ನೆರವು

Suddi Udaya

ಅ.3 -13: ಉಪ್ಪಿನಂಗಡಿ ಸವಿ ಫೂಟ್ ವೆರ್ ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಆಫರ್

Suddi Udaya

ಉಜಿರೆಯ ಎಸ್.ಡಿ.ಎಂ ಪ.ಪೂ ಕಾಲೇಜಿನ ಐವತ್ತು ವಿದ್ಯಾರ್ಥಿಗಳಿಗೆ ಸಂಸ್ಕೃತಭಾಷಾ ವಿದ್ಯಾರ್ಥಿವೇತನ

Suddi Udaya

ಬಹರೈನ್, ದುಬೈಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜಯಂತಿಯಲ್ಲಿ ಬ್ರಹ್ಮಾನಂದ ಶ್ರೀಗಳಿಂದ ಆಶೀರ್ವಚನ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸೇವೆಯಾಟ ಪ್ರಾರಂಭದ ಸಭಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಅಧಿಕ ರಕ್ತದೊತ್ತಡದಿಂದ ಪ್ರವೀಣ್ ಆಚಾರ್ಯ ನಿಧನ

Suddi Udaya
error: Content is protected !!