23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸ್ಪಂದನಾ ಸೇವಾ ಸಂಘದ ಯೋಜನೆಯಿಂದ ಚಿಕಿತ್ಸಾ ನೆರವು

ಬೆಳ್ತಂಗಡಿ: ಅನ್ನ ಬಸಿಯುತ್ತಿರುವಾಗ ಆಕಸ್ಮಿಕವಾಗಿ ಅನ್ನದ ಪಾತ್ರೆಯು ಮೈ ಮೇಲೆ ಬಿದ್ದು ತೀವ್ರ ಸುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ಚೇತರಿಸಿಕೊಳ್ಳುತ್ತಿರುವ ಕೊಯ್ಯೂರು ಗ್ರಾಮದ ಕಿರಿಯಾಡಿ ಕೊಡಂಗೆ ನಿವಾಸಿ ಯಶೋಧರ ಇವರಿಗೆ ಸ್ಪಂದನಾ ಸೇವಾ ಸಂಘದ ಸೇವಾ ಯೋಜನೆಯಿಂದ ಚಿಕಿತ್ಸಾ ಸಹಾಯಾರ್ಥವಾಗಿ ರೂ.20,000/-ದ ಚೆಕ್ ನ್ನು ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿಕಟಪೂರ್ವ ನಿರ್ದೇಶಕ ಆನಂದ ಗೌಡ ಉಜಿರೆ ಇವರ ಮೂಲಕ ಫಲಾನುಭವಿಯ ಪತ್ನಿಗೆ ಹಸ್ತಾಂತರ ಮಾಡಲಾಯಿತು.


ಈ ಸಂಧರ್ಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿಕಟಪೂರ್ವ ಕಾರ್ಯದರ್ಶಿ ಹಾಗೂ ಸ್ಪಂದನಾ ಸೇವಾ ಸಂಘದ ಸಂಚಾಲಕ ಮೋಹನ ಗೌಡ ಕೊಯ್ಯೂರು, ಸೀತಾರಾಮ್ ಸೌರಭ ಬೆಳಾಲು, ವಾಣಿ ಸೌಹಾರ್ದ- ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಸುರೇಶ್ ಕೌಡಂಗೆ, ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರುಗಳಾದ ಮಹಾಬಲ ಗೌಡ ಮತ್ತು ಮೀನಾಕ್ಷಿ ಮಹಾಬಲ ಗೌಡ ಉಪಸ್ಥಿತರಿದ್ದರು.

Related posts

ಹಿರಿಯ ಸಾಹಿತಿ, ಪತ್ರಕರ್ತ ಉಜಿರೆ ಶ್ರೀಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ನಾ ವುಜಿರೆ ನಿಧನ

Suddi Udaya

ಪದ್ಮುಂಜ : ಸಜನಿ ಕೊಬ್ಬರಿ ಎಣ್ಣೆ ಮತ್ತು ಹಿಟ್ಟಿನ ಗಿರಣಿ ಶುಭಾರಂಭ

Suddi Udaya

ಎ. 22: ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಳ್ತಂಗಡಿಗೆ

Suddi Udaya

ಮದ್ದಡ್ಕ: ಚರಂಡಿಯಲ್ಲಿ ಬಾಕಿಯಾದ ಗ್ಯಾಸ್ ಸರಬರಾಜು ಮಾಡುವ ಪಿಕಪ್

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಬೆಳ್ತಂಗಡಿ ಧರ್ಮಾಧ್ಯಕ್ಷರ ಆಪ್ತ ಸಹಾಯಕನಿಗೆ ಸನ್ಮಾನ

Suddi Udaya

ರಾಜ್ಯಮಟ್ಟದ ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ ಎಸ್ ಡಿ ಎಂ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಭಾರಿ ಸಾಧನೆ

Suddi Udaya
error: Content is protected !!