July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳಾಲು: ಕೊಲ್ಪಾಡಿ ಶಾಲೆಯಲ್ಲಿ ಸಂಭ್ರಮದ ಪ್ರಾರಂಭೋತ್ಸವ

ಬೆಳಾಲು: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ನಡೆಸಲಾಯಿತು.


ಶಾಲಾ ಪ್ರವೇಶ ದ್ವಾರದಲ್ಲಿ ಶಿಕ್ಷಕರು, ಪೋಷಕರು, ಎಸ್‌.ಡಿ.ಎಂ.ಸಿ.ಯವರು ಮಕ್ಕಳನ್ನು ಆರತಿ ಬೆಳಗಿ, ದಾರಿಯುದ್ದಕ್ಕೂ ಹೂ ಚೆಲ್ಲಿ ಕರೆತಂದರು. ನಂತರ ಮಕ್ಕಳಿಗೆ ಸಿಹಿ ಹಂಚಿ ಶಾಲಾ ತರಗತಿಗಳಿಗೆ ಸ್ವಾಗತಿಸಲಾಯಿತು. ಹೊಸದಾಗಿ ದಾಖಲಾಗುವ ಮಕ್ಕಳಿಗೆ ಗುಲಾಬಿ ನೀಡಿ ಬರಮಾಡಿಕೊಳ್ಳಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಸರಕಾರದಿಂದ ನೀಡಲಾದ ಎರಡು ಜೊತೆ ಸಮವಸ್ತ್ರ ಗಳನ್ನು ಮತ್ತು ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.


ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಮಾಚಾರ್ ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳ ಬಗ್ಗೆ ತಿಳಿಸಿದರು.

ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಮಾಧವ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ,’ ನಾವೆಲ್ಲರೂ ಸೇರಿ ಮಕ್ಕಳನ್ನು ಸಂಭ್ರಮದಿಂದ ಬರ ಮಾಡಿಕೊಂಡಿದ್ದೇವೆ. ಮುಂದಕ್ಕೆ ಶಾಲಾಭಿವೃದ್ಧಿಯ ಕಾರ್ಯಗಳನ್ನು ಕೂಡಾ ಎಲ್ಲರೂ ಕೈ ಜೋಡಿಸಿ ಜೊತೆ ಸೇರಿ ಮಾಡೋಣ’ ಎಂದರು.

ಉಪಾಧ್ಯಕ್ಷರಾದ ಶ್ರೀಮತಿ ಲೇಖಾವತಿ ಉಪಸ್ಥಿತರಿದ್ದರು. ಗೌರವ ಶಿಕ್ಷಕರಾದ ಕರಿಯಣ್ಣ ಗೌಡ ಸ್ವಾಗತಿಸಿದರು. ಅತಿಥಿ ಶಿಕ್ಷಕಿ ಹರಿಣಾಕ್ಷಿ ಎನ್ ನಿರ್ವಹಿಸಿದರು.

Related posts

ವೃಕ್ಷಮಾತೆ, ಶತಾಯುಷಿ ಸಾಲುಮರದ ತಿಮ್ಮಕ್ಕ ವಿಧಿವಶ

Suddi Udaya

ಸ್ಪೀಚ್ ಕ್ರಾಪ್ಟ್ ತರಬೇತಿಯಲ್ಲಿ ಚಂದ್ರಹಾಸ ಬಳಂಜರವರಿಗೆ ಪ್ರಶಸ್ತಿ

Suddi Udaya

ಬೆಳಾಲು: ಶ್ರೀ ಧ. ಮಂ. ಪ್ರೌ. ಶಾಲೆಯಲ್ಲಿ ಯಕ್ಷಗಾನ ತರಬೇತಿ ಶಿಬಿರ ಉದ್ಘಾಟನೆ

Suddi Udaya

ಕು.ಸೌಜನ್ಯ ಪ್ರಕರಣ: ಮರು ತನಿಖೆಗೆ ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಸೆ. 8ರಂದು (ಇಂದು)ಹೈಕೋರ್ಟಿನಲ್ಲಿ ವಿಚಾರಣೆ

Suddi Udaya

ವಿವೇಕರಥ- ಯುವ ಪಥ ಯುವ ಜಾಗೃತಿ ಜಾಥಾ’ ರಥಯಾತ್ರೆಗೆ‌ ಬೆಳ್ತಂಗಡಿ ತಾಲೂಕಿಗೆ ಸ್ವಾಗತ

Suddi Udaya

ಉಜಿರೆಯಲ್ಲಿ 5ನೇ ವರ್ಷದ ಕೇರಳ ಸಾಂಪ್ರದಾಯಿಕ “ವಿಷುಕಣಿ” ಆಚರಣೆ

Suddi Udaya
error: Content is protected !!