29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಾಯಿಲ ಶ್ರೀ ರಾಘವೇಂದ್ರ ಮಠಕ್ಕೆ ಶಿರೂರು ಪೀಠಾಧಿಪತಿಗಳ ಭೇಟಿ: ಅಳದಂಗಡಿಯ ಶ್ರೀನಾಥ್ ಜೋಶಿಯವರಿಂದ ದೀಪಗಳ ಸಮರ್ಪಣೆ

ಬೆಳ್ತಂಗಡಿ: ಲಾಯಿಲ ಶ್ರೀ ರಾಘವೇಂದ್ರ ಮಠಕ್ಕೆ ಶ್ರೀಮಾನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉಡುಪಿ ಶಿರೂರು ಮಠದ ಪ್ರಸ್ತುತ ಶ್ರೀ ಮಠದ ಪೀಠಾಧಿಪತಿಗಳಾದ ವೇದವರ್ಧನ ಶ್ರೀಪಾದಂಗಳವರು ಮೇ 30ರಂದು ಆಗಮಿಸಿದರು.

ಅವರನ್ನು ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೆರಾಜೆ, ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಕೋಶಾಧಿಕಾರಿಗಳಾದ ವಸಂತ ಸುವರ್ಣ, ಜೊತೆ ಕಾರ್ಯದರ್ಶಿ ಶಂಕರ ಹೆಗಡೆ, ಕೃಷ್ಣ ಶೆಟ್ಟಿ, ಜಯರಾಮ ಬಂಗೇರ, ಸುರೇಶ್ ಶೆಟ್ಟಿ ಹಾಗೂ ಇತರ ಗಣ್ಯರು ಕ್ಷೇತ್ರದ ಮುಖ್ಯ ಪುರೋಹಿತರಾದ ರಾಘವೇಂದ್ರ ಬಾಂಗೀಣ್ಣಾಯರವರ ನೇತೃತ್ವದಲ್ಲಿ ಸ್ವಾಗತಿಸಿದರು.

ರಾತ್ರಿ ಮಠದ ಪಟ್ಟದ ದೇವರ ತೊಟ್ಟಿಲು ಪೂಜಾ ಕಾರ್ಯಕ್ರಮದ ನಂತರ ಕ್ಷೇತ್ರದಲ್ಲಿ ಮುಕ್ಕಾಂ ಹೂಡಿದ್ದು, ಇಂದು(ಮೇ 31) ಮಧ್ಯಾಹ್ನ 12ಕ್ಕೆ ಶ್ರೀದೇವರ ಸಂಸ್ಥಾನ ಪೂಜೆ ನಡೆಯಲಿದೆ.

ಈ ವೇಳೆ ಕ್ಷೇತ್ರಕ್ಕೆ ಅಳದಂಗಡಿಯ ಸೂಳಬೆಟ್ಟು ನಿವಾಸಿ ಕಸ್ತೂರಿ ಟಿವಿ ವಾಹಿನಿಯ ನಿರೂಪಕ ಶ್ರೀನಾಥ ಜೋಶಿ ಅವರು ತಮ್ಮ ಮಾತೃಶ್ರೀಯೊಂದಿಗೆ ಆಗಮಿಸಿ ತಮ್ಮ ಹರಕೆಯೊಂದಿಗೆ ದೀಪಗಳನ್ನು ಸಮರ್ಪಿಸಿದರು.

Related posts

ಇಂದಬೆಟ್ಟು ಗ್ರಾ.ಪಂ. ನಲ್ಲಿ ಮಹಿಳಾ ಹಾಗೂ ಮಕ್ಕಳ ಗ್ರಾಮ ಸಭೆ

Suddi Udaya

ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ ಸೌಖ್ಯವನ ಪರೀಕದ ಬ್ರಹ್ಮಕಲಶೋತ್ಸವದ ಕಛೇರಿ ಉದ್ಘಾಟನೆ

Suddi Udaya

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ – ಮಕ್ಕಳ ರಜಾ ಶಿಬಿರ- ಚಿಲಿಪಿಲಿ 2023 ಹಾಗೂ ಮಾಸಿಕ ಬೆಂಬಲ ಸಭೆ

Suddi Udaya

ಓಡಿಲ್ನಾಳ : ಭದ್ರಕಜೆ ಯುವಶಕ್ತಿ ಫ್ರೆಂಡ್ಸ್ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಪಟ್ರಮೆ: ಕುಶಾಲಪ್ಪ ನಾಯ್ಕ್ ರ ಮನೆಗೆ ತೆಂಗಿನ ಮರ ಬಿದ್ದು, ಹಾನಿ

Suddi Udaya

ಜ.24-30: ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ