29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಶ್ರೀ. ಧ.ಮಂ. ಆಂ.ಮಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಮಳೆನೀರಿನ ಕೊಯ್ಲು ಪ್ರಾತ್ಯಾಕ್ಷಿತೆ

ಉಜಿರೆ :, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯಕ್ರಮ), ಇಲ್ಲಿ “ವಿಶ್ವ ಪರಿಸರ ದಿನ ” ವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀರಾಮ ಕುಮಾರ್ ಕೃಷಿ ಅಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ ಮಾಭಿವೃದ್ಧಿ ಯೋಜನೆ, ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು, ಅಲ್ಲದೇ ಹೊನ್ನಪ್ಪ ಗೌಡ, ಮಳೆ ಕೊಯ್ಲು ಕಾರ್ಯನಿರ್ವಾಹಕ ಅಧಿಕಾರಿ, ಮತ್ತು ಶ್ರೀಮತಿ ಚೈತ್ರ , ಅರಿವು ಕೃಷಿ ಕ್ಲಿನಿಕ್ ಇವರು ಉಪಸ್ಥಿತಿ ಇದ್ದರು.


ಮುಖ್ಯ ಅತಿಥಿಗಳಾದ ಶ್ರೀರಾಮ್ ಕುಮಾರ್ ಇವರು ಮಳೆ ನೀರನ್ನು ಇಂಗಿಸುವ ಉದ್ದೇಶ, ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು, ಅಲ್ಲದೆ ಮಕ್ಕಳಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು. ಅತಿಥಿಗಳಾದ ಹೊನ್ನಪ್ಪ ಗೌಡ ಇವರು ಮಾತನಾಡುತ್ತಾ ಮಳೆ ನೀರಿನ ಕೊಯ್ಲಿನ ಬಗ್ಗೆ ವಿಸ್ತಾರವಾಗಿ ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯನಿಯಾದ ವಿದ್ಯಾಲಕ್ಷ್ಮಿ ನಾಯಕ್ ಇವರು ಮಕ್ಕಳನ್ನು ಕುರಿತು ಮಾತನಾಡಿ ನೀರು ಇಂಗಿಸುವಲ್ಲಿ ಮಕ್ಕಳ ಪಾತ್ರವನ್ನು ತಿಳಿಹೇಳಿದರು.

ಮಕ್ಕಳು ಶಾಲೆಯಲ್ಲಿ ವಿಶ್ವ ಪರಿಸರ ದಿನದ ಆಚರಣೆಯಲ್ಲಿ ಭಾಗವಹಿಸಿ ಸೃಜನಾತ್ಮಕವಾಗಿ ತಯಾರಿಸಿದಂತಹ ಸೀಡ್ ಬಾಲ್ ಮತ್ತು ಕೋಕೆದಾಮವನ್ನು ಪ್ರದರ್ಶಿಸಲಾಯಿತು.

“ಮಳೆನೀರಿನ ಕೊಯ್ಲು ಪ್ರಾತ್ಯಾಕ್ಷಿತೆ” ಯು ಗಮನಾರ್ಹವಾಗಿದ್ದು, ಮಕ್ಕಳು ಕುತೂಹಲದಿಂದ ವೀಕ್ಷಿಸಿದರು. ಹತ್ತನೇ ತರಗತಿಯ ಮಧುಶ್ರೀ ಮತ್ತು ಅದಿಶ್ ಕಾರ್ಯಕ್ರಮದ ನಿರೂಪಿಸಿದರು . ಎಂಟನೇ ತರಗತಿಯ ಮನಸ್ವಿ, ವಿಶ್ವ ಪರಿಸರ ದಿನದ ಮಹತ್ವವನ್ನು ನುಡಿದರು. ಶ್ರೇಯ ಸ್ವಾಗತಿಸಿ ದೀಪಿಕಾ ವಂದಿಸಿದರು.

Related posts

ಕಳೆಂಜ: ಶಿಬರಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಪರಪ್ಪು ಸಮೀಪ ಗುಡ್ಡ ಕುಸಿತ

Suddi Udaya

ಕೊಕ್ಕಡ : ಗಾಳಿ ಮಳೆಗೆ ಹಾರಿ ಹೋದ ಮನೆಯ ಛಾವಣಿ

Suddi Udaya

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರಿಗೆ “ರಾಷ್ಟ್ರೀಯ ಅಧ್ಯಕ್ಷರ ಭೇಟಿ

Suddi Udaya

ಅರಸಿನಮಕ್ಕಿ: ಆಟೋ ಚಾಲಕ ಕೊರಗಪ್ಪ ಗೌಡ ನಿಧನ

Suddi Udaya

ಮತದಾರರ ಜಾಗೃತಿ ಆಂದೋಲನ: ಕಾಲ್ನಡಿಗೆ ಜಾಥಾ ಚುನಾವಣೆ – ನಮ್ಮ ಹೊಣೆ ಬೀದಿ ನಾಟಕ ಪ್ರದರ್ಶನ

Suddi Udaya

ಹೊಟ್ಟೆ ನೋವಿನಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya
error: Content is protected !!