28.3 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ರಾಷ್ಟ್ರೀಯ ಟಾರ್ಗೆಟ್ ಬಾಲ್ ಫೆಡರೇಶನ್ ಕಪ್ ಪಂದ್ಯಾಟ: ರಾಷ್ಟ್ರಮಟ್ಟಕ್ಕೆ ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನ ವಿದ್ಯಾರ್ಥಿ ಸಿದ್ದಾರ್ಥ್ ಎಂ. ಸಿ ಆಯ್ಕೆ

ಮಡಂತ್ಯಾರು: ರಾಜಸ್ಥಾನದ ಅಲ್ವಾರಿನ ಎಲ್ ಐ ಇ ಟಿ ಕಾಲೇಜಿನಲ್ಲಿ ಜೂನ್ 12ರಿಂದ 15 ರವರೆಗೆ ಜರಗಲಿರುವ 8ನೇ ರಾಷ್ಟ್ರ ಟಾರ್ಗೆಟ್ ಬಾಲ್ ಫೆಡರೇಶನ್ ಕಪ್ ಪಂದ್ಯಾಟದಲ್ಲಿ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಕಲಾ ವಿಭಾಗದ ಸಿದ್ದಾರ್ಥ್ ಎಂ.ಸಿ ಕರ್ನಾಟಕ ಟಾರ್ಗೆಟ್ ಬಾಲ್ ತಂಡದ ಹಿರಿಯ ವಿಭಾಗವನ್ನು ಪ್ರತಿನಿಧಿಸಲಿದ್ದಾರೆ.

ಇವರು ಮಂಗಳೂರಿನ ಕಪಿತಾನಿಯೊ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಮಮಿತಾ ಹಾಗೂ ಬಿಸಿ ರೋಡ್ ನ ನ್ಯಾಯವಾದಿ ಚೆನ್ನಪ್ಪ ದಂಪತಿಗಳ ಪುತ್ರರಾಗಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ರಾಘವೇಂದ್ರ ತರಬೇತಿ ನೀಡಿರುತ್ತಾರೆ.

Related posts

ಸುಲ್ಕೇರಿಮೊಗ್ರು: ಭಾರಿ ಮಳೆಗೆ ಮನೆಯ ಕಂಪೌಂಡ್ ಕುಸಿತ

Suddi Udaya

ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯಿಂದ ರೂ.6.96 ಲಕ್ಷ ವಂಚನೆ

Suddi Udaya

ಉಜಿರೆ: ಮಾಚಾರು ನಿವಾಸಿ ಕೃಷ್ಣ ಬೊಳ್ಮಿಣ್ಣಾಯ ನಿಧನ

Suddi Udaya

ಬಳ್ಳಮಂಜ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೇಷ ಜಾತ್ರೆಗೆ ಚಾಲನೆ

Suddi Udaya

ಇಂದಬೆಟ್ಟುವಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ಓವರಾಲ್ ಚಾಂಪಿಯನ್ಶಿಪ್

Suddi Udaya
error: Content is protected !!