ನಡ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

Suddi Udaya

ನಡ : 2024-25 ನೇ ಸಾಲಿನ ವಿದ್ಯಾರ್ಥಿ ಶಾಲಾ ಸಂಸತ್ತಿಗೆ ಅಭ್ಯರ್ಥಿಗಳನ್ನು ಇಂದು ನೇರವಾಗಿ ಆಯ್ಕೆ ಮಾಡಲಾಯಿತು.

ಶಾಲಾ ನಾಯಕನಾಗಿ ಪ್ರತೀಶ್ 10ನೇ ತರಗತಿ, ಶಾಲಾ ಉಪನಾಯಕಿಯಾಗಿ ಸಾನ್ವಿ ಎಂ 9ನೇ ತರಗತಿ ಆಯ್ಕೆಗೊಂಡರು.


ಉಳಿದಂತೆ ಕ್ರೀಡಾ ಮಂತ್ರಿಯಾಗಿ ಅಕ್ಷತ್- ಲಾವಣ್ಯ, ಸಾಂಸ್ಕೃತಿಕ ಮಂತ್ರಿಗಳಾಗಿ ಸಿಂಚನಾ, ಅಕ್ಷಯ್, ಸಾನ್ವಿ, ಅತೀಶ್ ಗೌಡ, ಆರೋಗ್ಯ ಮತ್ತು ಆಹಾರ ಮಂತ್ರಿಗಳಾಗಿ ಕಾರ್ತಿಕ್, ಸಿಮಾಕ್, ಚೈತ್ರ, ಅರ್ಷಿಯಾ, ಶಿಕ್ಷಣ ಮತ್ತು ಶಿಸ್ತು ಮಂತ್ರಿಗಳಾಗಿ ಭವಿತ್, ದೀಕ್ಷಿತ್, ಉಲ್ಫಿಯಾ ಬಾನು, ರಝ್ಮಿನಾ ಫಾತಿಮಾ, ಗೃಹ ಮಂತ್ರಿಗಳಾಗಿ ಅನ್ವಿತ್, ಅಭಿಷೇಕ್, ಕೃಷಿ ಮಂತ್ರಿಗಳಾಗಿ ನಿಖಿಲ್, ರಕ್ಷಿತಾ, ಯಶ್ವಿತ್ , ರಾಯಿಶಾ, ಲೋಕೇಶ್, ಶರಣ್ಯ, ನೀರಾವರಿ ಮಂತ್ರಿಗಳಾಗಿ ಚಿಂತನ್, ಶಾಕಿರ್, ಆದಿತ್ಯ, ಮನ್ವಿತ್, ಸ್ವಚ್ಛತಾ ಮಂತ್ರಿಗಳಾಗಿ ಗುಲ್ ಷನ್ ಬಾನು, ಸುಭೀಕ್ಷಾ, ಪ್ರಜ್ವಲ್ ಶೆಟ್ಟಿ, ಶ್ರೇಯಸ್ ಆಯ್ಕೆಗೊಂಡರು.

ಮುಖ್ಯ ಶಿಕ್ಷಕರಾದ ಮೋಹನ ಬಾಬು ಡಿ ಹುದ್ದೆ ಮತ್ತು ಕರ್ತವ್ಯಗಳ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ಶ್ರೀಮತಿ ಶೋಭಾ ಎಸ್ ಸ್ವಾಗತಿಸಿ, ಶ್ರೀಮತಿ ಜಯಂತಿ ಸ್ಟ್ರೆಲ್ಲಾ ವಂದಿಸಿದರು. ಶಿವಪುತ್ರ ಸುಣಗಾರ, ಶ್ರೀಮತಿ ಸುಜಯ ಬಿ, ಶ್ರೀಮತಿ ಸುಧಾ, ಮಹಾವೀರ ಉಪಸ್ಥಿತರಿದ್ದರು.

Leave a Comment

error: Content is protected !!