September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳಸ ನದಿಯಲ್ಲಿ ಮುಳುಗಿದ ಯುವಕನ ದೇಹ ಪತ್ತೆ; ತುರ್ತು ಕರೆಗೆ ಸ್ಪಂದಿಸಿದ ಉಜಿರೆ-ಬೆಳಾಲು ಶೌರ್ಯ ಘಟಕದ ಸ್ವಯಂಸೇವಕರು

ಬೆಳ್ತಂಗಡಿ; ಕಳಸದ ಅಂಬಾ ತೀರ್ಥ ನದಿಯಲ್ಲಿ ಸ್ನಾನಕ್ಕಿಳಿದಿದ್ದ ಮಧ್ಯಪ್ರದೇಶ ಮೂಲದ ಸಾಗರ್ (19 ) ಯುವಕ ನದಿ ನೀರಿನಲ್ಲಿ ಕಣ್ಮರೆಯಾಗಿದ್ದ ವಿಷಯ ತಿಳಿದ ಉಜಿರೆ-ಬೆಳಾಲು ಶೌರ್ಯ ಘಟಕದ ಸ್ವಯಂಸೇವಕರು ಮೆಚ್ಚುಗೆಯ ಕೆಲಸ ಮಾಡಿದ್ದಾರೆ.

ಈಶ್ವರ್ ಮಲ್ಪೆ ಯವರ ಮೂಲಕ ತಮ್ಮ ತಂಡದ ಕ್ಯಾಪ್ಟನ್ ಸಂತೋಷ್ ಅವರಿಗೆ ಬಂದಿದ್ದ ಕರೆಗೆ ಸ್ಪಂದಿಸಿದ ತಂಡ ತಕ್ಷಣ ಮೃತದೇಹ ಶೋಧ ಕಾರ್ಯಕ್ಕೆ ಉಜಿರೆ-ಬೆಳಾಲು ಘಟಕ ಮುಂದಾಯಿತು. ಘಟಕ ಪ್ರತಿನಿಧಿ ರವೀಂದ್ರ, ಕ್ಯಾಪ್ಟನ್ ಸಂತೋಷ್, ಸಂದೇಶ್, ಸುಧೀರ್ ರವರು ಘಟನಾ ಸ್ಥಳಕ್ಕೆ ಧಾವಿಸಿ ಮೃತದೇಹ ಪತ್ತೆಗಾಗಿ ಬೆಳಗ್ಗಿನಿಂದ ಮಧ್ಯಾಹ್ನ ದವರೆಗೆ ಶ್ರಮಿಸಿ ಕೊನೆಗೆ ಯಶಸ್ವಿಯಾಯಿತು.. ಈ ವೇಳೆ ಗ್ರಾ. ಯೋಜನೆಯ ಕಳಸದ ಯೋಜನಾಧಿಕಾರಿ ಹಾಗೂ ಕಳಸದ ಶೌರ್ಯ ಟೀಮ್ ಪೂರಕ ಸಹಕಾರ ನೀಡಿದರು.

Related posts

ನಿಡ್ಲೆ: ಪಾರ್ಪಿಕಲ್ ಸಮೀಪ ಕಾರು ಮತ್ತು ಬೈಕ್ ಅಪಘಾತ

Suddi Udaya

ಕುಂಟಾಲಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಅಭಿಯಾನ

Suddi Udaya

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಹಾಸಭೆ: ವಾರ್ಷಿಕ 150 ಕೋಟಿ ವ್ಯವಹಾರ ಮಾಡಿ 69 ಲಕ್ಷ ನಿವ್ವಳ ಲಾಭ ಗಳಿಸಿದ್ದೇವೆ: ನವೀನ್ ಕೆ ಸಾಮಾನಿ

Suddi Udaya

ಬೆಳ್ತಂಗಡಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ

Suddi Udaya

ಬೆಳ್ತಂಗಡಿ ಮಾರಿಗುಡಿಯಲ್ಲಿ ಶಾಸಕ ಹರೀಶ್ ಪೂಂಜ ಪ್ರಮಾಣ: ನಾನು ಯಾರಿಂದಲೂ ಹಣವನ್ನು ಪಡೆದಿಲ್ಲ, ಭ್ರಷ್ಟಾಚಾರ ನಡೆಸಿಲ್ಲ: ದೀಪ ಬೆಳಗಿಸಿ, ಮಾರಿಗುಡಿ ಎದುರು ತೆಂಗಿನ ಕಾಯಿ ಒಡೆದು ಪ್ರಮಾಣ

Suddi Udaya

ಬೆಳ್ತಂಗಡಿ : ಹುಣ್ಸೆಕಟ್ಟೆ ಕಾರ್ಯಕ್ಷೇತ್ರದ “ನಂದಗೋಕುಲ” ಸ್ವ-ಸಹಾಯ ಸಂಘದ ರಚನೆ

Suddi Udaya
error: Content is protected !!