ಗ್ರಾಮಾಂತರ ಸುದ್ದಿಚಿತ್ರ ವರದಿ

ಎಸ್.ಡಿ.ಎಂ ಪ.ಪೂ. ಕಾಲೇಜಿನಲ್ಲಿ ಯೋಗ ದಿನಾಚರಣೆ ಹಾಗೂ ಯೋಗ ಸಪ್ತಾಹದ ಉದ್ಘಾಟನೆ

ಉಜಿರೆ: ವಯಸ್ಸು ಹಾಗೂ ಜೀವನ ಶೈಲಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ದೈಹಿಕ ಕ್ಷಮತೆಗೆ , ಮನಸ್ಸಿನ ಹತೋಟಿಗೆ ಯೋಗ ಅಗತ್ಯ. ಸಾಧಾರಣವಾಗಿ ಹಾರ್ಮೋನ್ ವ್ಯತ್ಯಾಸದಿಂದ ಮಾನಸಿಕ ಸ್ಥಿತಿ ಬದಲಾಗುತ್ತಿರುತ್ತದೆ. ಈ ಸಂದರ್ಭದಲ್ಲಿ ದಿನನಿತ್ಯದ ಕೆಲಸಗಳಿಂದ ಹಾಗೆಯೇ ವ್ಯಾವಹಾರಿಕ ಕೆಲಸಕ್ಕೆ ಹೋಗುವ ಹೆಂಗಸರಿಗೆ ದೈಹಿಕ ಹಾಗೂ ಮಾನಸಿಕ ಸದೃಢತೆ ಯೋಗ ಪರಿಣಾಮಕಾರಿ ಆಗುತ್ತದೆ. ಯೋಗವು ಆಂತರಿಕ ಸಂತೋಷ ನೀಡುವ ಸಾಧನ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಶಾಲ್ಮಲೀ ಸುನಿಲ್ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಮಹಿಳಾ ಸಬಲೀಕರಣಕ್ಕಾಗಿ ಯೋಗ ಎಂಬ ಧ್ಯೇಯದೊಂದಿಗೆ ನಡೆದ ಯೋಗ ದಿನಾಚರಣೆ ಹಾಗೂ ಯೋಗ ಸಪ್ತಾಹ ಉದ್ಘಾಟನೆ ಮಾಡಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಅವರು ಯಾಂತ್ರಿಕ ಜೀವನದಲ್ಲಿರುವ ವ್ಯಕ್ತಿಗಳ ಮಾನಸಿಕ ಸ್ಥಿರತೆಗೆ ಯೋಗ ಮುಖ್ಯ ಎಂದು ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದರು.

ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ವಿದ್ಯಾಲಯದ ವಿದ್ಯಾರ್ಥಿಗಳಾದ ಸಾಕ್ಷಿ ಹಾಗೂ ಕೀರ್ತನಾ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಧನುಶ್ರೀ ನಿರೂಪಿಸಿ , ಶ್ರುತಾ ಸ್ವಾಗತಿಸಿ ವಂದಿಸಿದರು.

Related posts

ಕೊಕ್ಕಡದಲ್ಲಿ ಎನ್ ಎಸ್ ಎಸ್ ಶಿಬಿರ ಸಮಾರೋಪ

Suddi Udaya

ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ 168 ಕೋಟಿ ವ್ಯವಹಾರ-ರೂ 71.63 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ.12 ಡಿವಿಡೆಂಡ್

Suddi Udaya

ಉಜಿರೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, 28ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ- ಪೂರ್ವಭಾವಿ ಸಭೆ

Suddi Udaya

ವೇಣೂರು ಯಕ್ಷಗಾನ ಸಂಘದಿಂದ ತಾಳಮದ್ದಳೆ ಸೇವೆ

Suddi Udaya

ಬೆಳ್ತಂಗಡಿ ತೋಟಗಾರಿಕೆ ಇಲಾಖೆಯಲ್ಲಿ ಡಾ. ಎಂ ಎಚ್ ಮರಿಗೌಡರ ಜನ್ಮ ದಿನಾಚರಣೆ

Suddi Udaya

ಮಡಂತ್ಯಾರು ಸುವೇಗ ಮೋಟಾರ್ಸ್ ನಲ್ಲಿ ಹೀರೊ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಬಿಡುಗಡೆ

Suddi Udaya
error: Content is protected !!